Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ದಾವೂದ್​ನ ಮತ್ತೊಂದು ಆಸ್ತಿ 3.51 ಕೋಟಿ ರೂ.ಗೆ ಹರಾಜು

Saturday, 11.08.2018, 3:02 AM       No Comments

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ವಶಕ್ಕೆ ಪಡೆಯಲಾಗಿದ್ದ ಮತ್ತೊಂದು ಆಸ್ತಿಯನ್ನು ಹಣಕಾಸು ಸಚಿವಾಲಯ ಹರಾಜು ಹಾಕಿದೆ. ದಕ್ಷಿಣ ಮುಂಬೈನ ಪಾಕ್ಮೋಡಿಯಾ ರಸ್ತೆಯ ಮಸ್ಸುಲಾ ಕಟ್ಟಡವನ್ನು ಹರಾಜಿನಲ್ಲಿ 3.51 ಕೋಟಿ ರೂ.ಗೆ ಸೈಫೀ ಬುರ್ಹಾನಿ ಟ್ರಸ್ಟ್ ಖರೀದಿಸಿದೆ. ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ನಿರ್ವಾಹಕ (ಆಸ್ತಿಗಳ ಮುಟ್ಟುಗೋಲು) ಕಾಯ್ದೆ ಅನ್ವಯ ಸರ್ಕಾರ ಈ ಕ್ರಮ ಜರುಗಿಸಿದೆ. ದಾವೂದ್ ತಾಯಿ ಅಮಿನಾಬಾಯಿ ಈ ಕಟ್ಟಡದಲ್ಲಿ ವಾಸವಾಗಿದ್ದರು. ಅವರ ನಿಧನ ಬಳಿಕ ಸರ್ಕಾರ ಈ ಕಟ್ಟಡವನ್ನು ವಶಕ್ಕೆ ಪಡೆದಿತ್ತು. ಹರಾಜಿನಲ್ಲಿ ಕಟ್ಟಡಕಕ್ಕೆ 79.43 ಲಕ್ಷ ರೂ. ಮೂಲಬೆಲೆ ನಿಗದಿಪಡಿಸಲಾಗಿತ್ತು. ಮಸ್ಸುಲಾ ಕಟ್ಟಡ ವಾಸಕ್ಕೆ ಯೋಗ್ಯವಲ್ಲ ಎಂದು ಇಂಜಿನಿಯರ್​ಗಳು ಪರಿಶೀಲಿಸಿ ವರದಿ ನೀಡಿದ್ದಾರೆ. ಶಿಥಿಲಗೊಂಡಿರುವುದರಿಂದ ಅದನ್ನು ಕೆಡವಿ, ಭೆಂಡೀ ಬಜಾರ್ ಪುನರಾಭಿವೃದ್ಧಿ ಯೋಜನೆ ಅನ್ವಯ ಮರುನಿರ್ವಣ ಮಾಡಲಾಗುವುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ಹೇಳಿದೆ. 12ಕ್ಕೂ ಹೆಚ್ಚು ಮಂದಿ ಹರಾಜಿನಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Back To Top