ಸೈಫ್ ಈಗ ನಾಗಾಸಾಧು

ಬಾಲಿವುಡ್ ನಟ ಸೈಫ್ ಅಲಿಖಾನ್ ಉದ್ದನೆಯ ಜಡೆ ಬಿಟ್ಟು, ಮೈಗೆಲ್ಲ ವಿಭೂತಿ ಬಳಿದುಕೊಂಡು ತಮ್ಮ ಅವತಾರವನ್ನೇ ಬದಲಿಸಿಕೊಂಡು ಅಘೋರಿಯಾಗಿದ್ದಾರೆ! ಹಾಗಂತ ಸಿನಿಮಾ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದರಾ ಸೈಫ್ ಎಂದುಕೊಳ್ಳಬೇಡಿ. ಬದಲಿಗೆ ಅಘೋರಿ ವೇಷ ತೊಟ್ಟು ನಾಗಾಸಾಧು ಆಗಿದ್ದು ‘ಲಾಲ್ ಕಪ್ತಾನ್’ ಚಿತ್ರಕ್ಕಾಗಿ.

ಹೌದು, ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಬಹಿರಂಗವಾಗಿದ್ದು, ಹಿಂದೆಂದೂ ಕಾಣದ ರೀತಿಯಲ್ಲಿ ಸೈಫ್ ಪ್ರತ್ಯಕ್ಷವಾಗಿದ್ದಾರೆ. ಈ ಹಿಂದೆ ‘ಹಂಟರ್’ ಶೀರ್ಷಿಕೆಯಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನಲಾಗಿತ್ತು. ಬಳಿಕ ಹಲವು ವಿವಾದಗಳು ಸೃಷ್ಟಿಯಾದ ಬೆನ್ನಲ್ಲೇ ಅದನ್ನು ‘ಲಾಲ್ ಕಪ್ತಾನ್’ ಎಂದು ಬದಲಿಸಿಕೊಂಡು ಚಿತ್ರ ಬಿಡುಗಡೆಯ ದಿನಾಂಕವನ್ನೂ ಘೋಷಿಸಿಕೊಂಡಿದ್ದು, ಸೆಪ್ಟೆಂಬರ್ 6ಕ್ಕೆ ಚಿತ್ರ ತೆರೆಕಾಣಲಿದೆಯಂತೆ.

‘ಎನ್​ಎಚ್ 10’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನವದೀಪ್ ಸಿಂಗ್ ‘ಲಾಲ್ ಕಪ್ತಾನ್’ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಯೂರೋಸ್ ಎಂಟರ್​ಟೈನ್​ವೆುಂಟ್ ಚಿತ್ರ ನಿರ್ಮಾಣ ಮಾಡುತ್ತಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *