ಕನ್ನಡಿಗರ ಮನೆ-ಮನಗೆದ್ದ ವಿಜಯವಾಣಿ

ವಿಜಯವಾಣಿ ಸುದ್ದಿಜಾಲ ಮುಧೋಳ: ಯಾವುದೇ ವ್ಯಕ್ತಿ, ಧರ್ಮ, ಜಾತಿ, ಮತಗಳಿಗೆ ಅಂಟಿಕೊಳ್ಳದೆ ಡಾ.ವಿಜಯ ಸಂಕೇಶ್ವರ ಸಾರಥ್ಯದಲ್ಲಿ ನಡೆಯುತ್ತಿರುವ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಗಳು ನಾಡಿನ ಜನರ ಮನಗೆದ್ದಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಗಮೇಶ ನೀಲಗುಂದ ಹೇಳಿದರು.

ನಗರದ ಶ್ರೀ ಸಾಯಿ ಇಂಟರ್​ನ್ಯಾಷನಲ್ ಶಾಲೆ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜಯವಾಣಿ ದಿನಪತ್ರಿಕೆಯ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತ ರಿಸಿ ಅವರು ಮಾತನಾಡಿ, ವಿದ್ಯಾರ್ಥಿ, ಉದ್ಯೋಗಾಕಾಂಕ್ಷಿ, ಸರ್ಕಾರಿ ನೌಕರ, ಕ್ರೀಡೆ, ಯೋಗ, ಸಂಸ್ಕೃತಿ, ಭಾಷೆ ಹೀಗೆ ಎಲ್ಲವನ್ನೂ ಕಲಿಸುವ ವಿಜಯವಾಣಿ ನಿಜಕ್ಕೂ ಕನ್ನಡಿಗರ ಮನಗೆದ್ದಿದೆ ಎಂದು ಹೇಳಿದರು.

ಆಂಗ್ಲ ಭಾಷಾ ಸಂಪನ್ಮೂಲ ಶಿಕ್ಷಕ ಎಸ್.ಬಿ. ಮಾಯಾಚಾರಿ ಮಾತನಾಡಿ, ನಾಲ್ಕು ವರ್ಷದ ಪುಟಾಣಿ ಇಷ್ಟಪಡುವ ಪುಟಾಣಿ ಪುರವಣಿ, ಸಂಸ್ಕೃತಿ ಪುರವಣಿವರೆಗೂ ನಿತ್ಯ ನೂತನವಾಗಿ ಸುದ್ದಿ ನೀಡುವ ವಿಜಯವಾಣಿ ಜನಮನ ಗೆದ್ದಿದೆ. ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಈ ಸ್ಪರ್ಧೆ ನಿಜಕ್ಕೂ ಅದ್ಭುತವಾಗಿದೆ ಎಂದು ಹೇಳಿದರು.

ವಿಜಯವಾಣಿ ವರದಿಗಾರ ವೆಂಕಟೇಶ ಗುಡೆಪ್ಪನವರ ಮಾತನಾಡಿ, ವಿಜಯವಾಣಿ ಕೇವಲ ಪತ್ರಿಕೆಯಾಗಿ ಉಳಿಯದೆ ಜನ ಮನದ ಆಶೋತ್ತರಗಳಿಗೆ ಸ್ಪಂದಿಸುವ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ವಿಜಯವಾಣಿ ಪತ್ರಿಕೆ ವಿತರಕ ಐ.ಎನ್. ಬಿಸ್ತಿ, ಭಾರತಿ ಚನ್ನಪ್ಪಗೌಡರ, ಸುನಂದಾ ಬಡಿಗೇರ, ಶೋಭಾ ಕರಡಿಗುಡ್ಡ, ಸಹನಾ ಕುಲಕರ್ಣಿ, ಮಹಾದೇವಿ ದನಗರ, ಶೈಲಾ ಬಾಡಗಿ, ಸರೋಜಿನಿ ಹೊಸಮಠ, ರೂಪಾ ದಾನಿ, ಗೀತಾ ಮೇತ್ರಿ ಇದ್ದರು. ಜ್ಯೋತಿ ನಾಡಗೌಡ ನಿರೂಪಿಸಿ. ಗೌರಿ ಬಿದರಿ ಸ್ವಾಗತಿಸಿದರು. ಬಿ.ಆರ್. ಜಾಧವ ವಂದಿಸಿದರು.