ಉಡುಪಿ: ಪಾರದರ್ಶಕ ಜೀವನ ಹಾಗೂ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವಲ್ಲಿ ಕಾರ್ಯಕರ್ತರು ಹೆಚ್ಚಿನ ಆಸ್ಥೆ ವಹಿಸಬೇಕಿದ್ದು, ಸಹಕಾರಿ ಗ್ರಾಮ, ಸಹಕಾರಿ ತಾಲೂಕು, ಸಹಕಾರಿ ಜಿಲ್ಲೆ ನಿರ್ಮಾಣಕ್ಕೆ ಗಮನಹರಿಸಬೇಕು ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.
ಮಣಿಪಾಲದಲ್ಲಿ ಭಾನುವಾರ ನಡೆದ ಸಹಕಾರ ಭಾರತಿ ಪ್ರಾಂತ ಅಭ್ಯಾಸ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಂಟನೆ ಕಟ್ಟಬೇಕಾದರೆ ಕಾರ್ಯಕರ್ತರಲ್ಲಿ ಸರಳತೆ ಹಾಗೂ ಸಜ್ಜನಿಕೆ ಅವಶ್ಯವಾಗಿದೆ. ಮಹಿಳೆಯರೂ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದು, ಮಹಿಳಾ ನಾಯಕತ್ವದಲ್ಲಿ ಸೇವೆಯ ಸ್ವಾದ ಮತ್ತು ಪ್ರಮಾಣಿಕತೆ ಕಾಣಬಹುದಾಗಿದೆ. ಸಹಕಾರ ಭಾರತಿ ಇದಕ್ಕೆ ವೇದಿಕೆ ಒದಗಿಸಲಿದೆ ಎಂದರು.
ಸಹಕಾರ ಭಾರತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಕ್ ಚೌರಾಸಿಯಾ ಮುಖ್ಯ ಅತಿಥಿಯಾಗಿದ್ದರು. ರಾಜ್ಯಾಧ್ಯಕ್ಷ ಪ್ರಭುದೇವ ಮಾಗನೂರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಗ್ರಾಹಕ ಪ್ರಕೋಷ್ಠ ಪ್ರಮುಖ್ ಭಾರತೀ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀಶ್ ನಾಯಕ್, ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಸಂಟನಾ ಕಾರ್ಯದರ್ಶಿ ಸುಜಿತ್ ಕುಮಾರ್ ಕೆಳಾರ್ಕಳಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಸಾಣೂರು ನರಸಿಂಹ ಕಾಮತ್ ಸ್ವಾಗತಿಸಿ, ಭುವನೇಶ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಕಾನೂನು ಟಕಕ್ಕೆ ನೂತನ ಸದಸ್ಯರನ್ನು ಘೋಷಿಸಲಾಯಿತು.
