ಬೆಂಗಳೂರು: ಆತಿಥೇಯ ತಾರೆ ಸಹಜಾ ಯಮಲಪಲ್ಲಿ, ಕೆಪಿಬಿ ಟ್ರಸ್ಟ್ ವುಮೆನ್ಸ್ ಓಪನ್ ಐಟಿಎ್ 100 ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ೈನಲ್‌ನಲ್ಲಿ ಪರಾಭವಗೊಂಡಿದ್ದಾರೆ. ಇದರೊಂದಿಗೆ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಭಾರತೀಯರ ಸವಾಲು ಅಂತ್ಯ ಕಂಡಿದೆ. ಅಗ್ರ ಶ್ರೇಯಾಂಕಿತೆ ಟಟ್ಜನಾ ಮರಿಯಾ, 8ನೇ ಶ್ರೇಯಾಕಿತೆ ಸಾರಾ ಬೆಜ್ಲೆಕ್, ಲಿಯೊಲಿಯಾ ಜಿನ್‌ಜಿನ್ ಹಾಗೂ ಲಿಂಡಾ ಪ್ರುಹ್ವಿಟೋರ್ವ ಸೆಮಿೈನಲ್‌ಗೇರಿದ್ದಾರೆ.
ಉದ್ಯಾನನಗರಿಯ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೇಶದ ಅತಿದೊಡ್ಡ ಐಟಿಎ್ ಟೂರ್ನಿಯ ಕ್ವಾರ್ಟರ್‌ೈನಲ್‌ನಲ್ಲಿ ಸಹಜಾ 4-6, 4-6 ನೇರಸೆಟ್‌ಗಳಿಂದ ಜೆಕ್ ಗಣರಾಜ್ಯದ ಸಾರಾ ಬೆಜ್ಲೆಕ್ ಎದುರು ಸೋಲುಂಡರು. ಜರ್ಮನಿಯ ಟಟ್ಜನಾ 6-2, 6-2ರಿಂದ ಥಾಯ್ಲೆಂಡ್‌ನ ಲನ್‌ಲನಾ ತರರುಡಿ ಎದುರು ಗೆದ್ದರೆ, ್ರಾನ್ಸ್‌ನ ಲಿಯೊಲಿಯ 3-6, 7-5, 7-5ರಿಂದ ಎರಡನೇ ಶ್ರೇಯಾಂಕಿತೆ ರೆಬೆಕಾ ಮರಿನೊ ಎದುರು ಗೆದ್ದು ಬೀಗಿದರು. ಲಿಂಡಾ ಪ್ರುಹಿಟ್ವೋರ್ವಾ 5-7, 6-2, 6-2ರಿಂದ ಸ್ಲೋವೆನಿಯಾ ದಲಿಲಾ ಜಕುಪ್ಲೊವಿಕ್ ವಿರುದ್ಧ ಜಯ ದಾಖಲಿಸಿದರು.
ಡಬಲ್ಸ್‌ನಲ್ಲಿ 4ನೇ ಶ್ರೇಯಾಂಕಿತ ಜೆಸ್ಸಿ ಅನ್ನೆ-ಜೆಸ್ಸಿಕಾ ೈಲಾ ಹಾಗೂ ಅಗ್ರ ಶ್ರೇಯಾಂಕಿತ ರಷ್ಯಾದ ಅಮಿನಾ ಅನ್ಶಬಾ-ಎಲೆನಾ ಪ್ರಿದನ್‌ಕಿನ ಜೋಡಿ ೈನಲ್‌ಗೇರಿದೆ. ಭಾರತದ ಪ್ರಾರ್ಥನಾ ಥಾಂಬರೆ ಹಾಗೂ ಬ್ರಿಟನ್‌ನ ಅಲಿಸಿಯಾ ಬರ್ನೆಟ್ 3-6, 2-6ರಿಂದ ರಷ್ಯಾ ಜೋಡಿ ಎದುರು ಮುಗ್ಗರಿಸಿದರು.