ಭಾರತ ಎ ತಂಡ ಪ್ರಕಟಿಸಿದ ಬಿಸಿಸಿಐ

ಬೆಂಗಳೂರು: ಮೇ 25 ರಿಂದ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಶ್ರೀಲಂಕಾ ಎ ತಂಡದ ವಿರುದ್ಧ ನಡೆಯಲಿರುವ 2 ಚತುರ್ದಿನ ಹಾಗೂ 5 ಏಕದಿನ ಪಂದ್ಯಗಳಿಗೆ ಭಾರತ ಎ ತಂಡ ಪ್ರಕಟಿಸಲಾಗಿದೆ.

ಜತೆಗೆ ಜುಲೈ 11 ರಿಂದ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 5 ಏಕದಿನ ಹಾಗೂ 3 ಚತುರ್ದಿನ ಪಂದ್ಯಗಳನ್ನಾಡಲಿದೆ.

ಶ್ರೀಲಂಕಾ ಎ ತಂಡದ ವಿರುದ್ಧ ಸರಣಿಗೆ ಕರ್ನಾಟಕದ ಶ್ರೇಯಸ್ ಗೋಪಾಲ್ 2 ಚತುರ್ದಿನ ಪಂದ್ಯಗಳಿಗೆ ಆಯ್ಕೆಯಾದರೆ, ಮಯಾಂಕ್ ಅಗರ್ವಾಲ್ ವಿಂಡೀಸ್ ಪ್ರವಾಸದಲ್ಲಿ ಏಕದಿನ ಹಾಗೂ ಕೆ.ಗೌತಮ್ ಚತುರ್ದಿನ ಸರಣಿಗೆ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ಎ ವಿರುದ್ಧದ ಸರಣಿಗೆ ವೃದ್ಧಿಮಾನ್ ಸಾಹ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರೆ, ಏಕದಿನ ತಂಡದಲ್ಲಿ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ಮನೀಷ್ ಪಾಂಡೆ ಏಕದಿನ ತಂಡಕ್ಕೆ ನಾಯಕರಾಗಿದ್ದಾರೆ.

Leave a Reply

Your email address will not be published. Required fields are marked *