ಅಲರ್ಟ್​ ಆಗಿರಿ, ಸಾಗರ್​ ಅಪ್ಪಳಿಸಬಹುದು!

ನವದೆಹಲಿ: ಸಾಗರ್ ಚಂಡಮಾರುತ ಇನ್ನು 24 ಗಂಟೆಯಲ್ಲಿ ಕರ್ನಾಟಕಕ್ಕೆ ಅಪ್ಪಳಿಸಲಿದ್ದು ಈ ಬಗ್ಗೆ ಎಚ್ಚರಿಕೆಯಿಂದಿರಲು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೆ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ಲಕ್ಷದ್ವೀಪಗಳಲ್ಲೂ ಚಂಡಮಾರುತದ ಪರಿಣಾಮ ಹೆಚ್ಚಿರಲಿದೆ ಎಂದು ಹೇಳಿದೆ.

ಗಾಳಿಯ ವೇಗವು ಪ್ರಾರಂಭದಲ್ಲಿ ಗಂಟೆಗೆ 70-80 ಕಿ.ಮೀ.ನಷ್ಟಿದ್ದು ಕ್ರಮೇಣ 90-100 ಕಿ.ಮೀ.ನಷ್ಟಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಈ ಚಂಡಮಾರುತ ಮೊದಲು ಅಡೆನ್​ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ನಂತರ ಪೂರ್ವದ ಯಮೆನ್ ಈಡನ್​ ನಗರದ ಈಶಾನ್ಯಕ್ಕೆ ಹಾಗೂ ಪಶ್ಚಿಮ, ವಾಯುವ್ಯದ ಸೊಕೊಟ್ರಾ ದ್ವೀಪಗಳಿಗೆ ಪಸರಿಸಿತ್ತು. ಇನ್ನು 12 ತಾಸುಗಳಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಲಿದ್ದು ನೈಋತ್ಯ, ಪಶ್ಚಿಮ ದಿಕ್ಕಿನೆಡೆಗೆ ಬೀಸಲಿದೆ. ಇನ್ನು 48 ಗಂಟೆಗಳ ಕಾಲ ಮೀನುಗಾರರು ಸಮುದ್ರದ ಕಡೆಗೆ ಹೋಗದಿರಲು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *