ಸಬೂಬು ಬೇಕಿಲ್ಲ ಮಂದಿರ ನಿರ್ವಿುಸಿ

ಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಿುಸಬೇಕು. ಕೇಂದ್ರ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಒಕ್ಕೊರಲ ಹಕ್ಕೊತ್ತಾಯ ನಗರದ ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಭಾನುವಾರ ಜರುಗಿದ ಜನಾಗ್ರಹ ಸಮಾವೇಶದಲ್ಲಿ ಪ್ರತಿಧ್ವನಿಸಿತು.

ಕೊರಳಲ್ಲಿ ಕೇಸರಿ ಶಾಲು ಮತ್ತು ಭಗವಾಧ್ವಜ ಹಿಡಿದಿದ್ದ ಕಾರ್ಯಕರ್ತರ ಗುಂಪು ಶ್ರೀರಾಮ ಮಹಾರಾಜ್ ಕೀ ಜೈ, ಮಂದಿರ ನಿರ್ಮಾಣ ಆಗಲೇಬೇಕು ಎಂದು ಜಯಘೊಷದ ಮೂಲಕ ರಣಕಹಳೆ ಮೊಳಗಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ಪ್ರಜ್ಞಾ ಪ್ರವಾಹ ಸಂಘಟನೆ ಕ್ಷೇತ್ರ ಸಂಯೋಜಕ ರಘುನಂದನಜೀ, ಕೇಂದ್ರದಲ್ಲಿ ಆಡಳಿದಲ್ಲಿರುವ ಸರ್ಕಾರವನ್ನು ಹಿಂದುಪರ ಸರ್ಕಾರ ಎಂದು ಹೇಳಲಾಗುತ್ತದೆ. ಈ ಸರ್ಕಾರ ಹಿಂದುಗಳ ಒಳಿತನ್ನೇ ಬಯಸುವುದಾದರೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ವಣಕ್ಕೆ ಮುಂದಾಗಬೇಕು ಎಂದರು.

ದೇಶದ ಸಂಸತ್​ಗೆ ಸವೋಚ್ಛ ಸ್ಥಾನವಿದ್ದು, 1.25 ಕೋಟಿ ಭಾರತೀಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಭಾಗದ ಸಂಸದರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ಅಂತಿಮ ಆದೇಶ ಘೊಷಿಸಲು ಹಿಂದೇಟು ಹಾಕುತ್ತಿದ್ದಾರೆ. ನ್ಯಾಯದಾನದಲ್ಲೂ ರಾಜಕಾರಣ ಮಾಡುವುದು ತರವಲ್ಲ. ಮುಂದಿನ ವರ್ಷ ಫೆಬ್ರವರಿ ನಂತರ ವಿಚಾರಣೆ ಮಾಡಿದಾರಾಯಿತು ಎಂದು ಉದಾಸೀನ ನೀತಿಯನ್ನು ತಾಳಲಾಗಿದೆ. ನ್ಯಾಯಾಲಯದ ಅಂಗಳದಲ್ಲೂ ಸಹ ಕಾಂಗ್ರೆಸ್ ಕರಾಮತ್ತು ನಡೆಸಿದೆ. ನ್ಯಾಯಾಮೂರ್ತಿಗಳು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತದಲ್ಲಿ ವಾಸಿಸುವ ಎಲ್ಲರೂ ಶ್ರೀರಾಮನ ವಂಶಸ್ಥರಾಗಿದ್ದಾರೆ. ರಾಜ, ಅಣ್ಣ, ಸೇವಕ, ಪತಿ ಹೀಗೆ ಎಲ್ಲ ಸಂಬಂಧಗಳಿಗೂ ಆದರ್ಶಪ್ರಾಯವಾಗಿರುವ ಶ್ರೀರಾಮನ ನಮ್ಮ ಪೂರ್ವಜನಾಗಿದ್ದಾನೆ. ಮಹಾತ್ಮಾ ಗಾಂಧೀಜಿಯವರು ಕೂಡ ದೇಶವನ್ನು ರಾಮರಾಜ್ಯವಾಗಬೇಕು ಎಂಬ ಕನಸನ್ನು ಕಂಡಿದ್ದರು. ದೇಶದ ಕೋಟ್ಯಂತರ ಭಕ್ತರ ಒತ್ತಾಸೆ ಹಾಗೂ ಗಾಂಧೀಜಿ ಅವರ ಕನಸು ನನಸಾಗಲು ಅಯೋಧ್ಯೆಯಲ್ಲಿ ಶ್ರೀರಾಮ ಭವ್ಯ ಮಂದಿರ ನಿರ್ವಣವಾಗಲೇಬೇಕು ಎಂದು ಆಗ್ರಹಿಸಿದರು.

ಮುಸ್ಲಿಮರು ವಾಸಿಸುವ ದೇಶಗಳಲ್ಲಿ ರಾಮನ ಮಂದಿರ ಇದೆ. ಆದರೆ, ಹಿಂದುಗಳ ದೇಶದಲ್ಲಿ ರಾಮನ ಮಂದಿರ ಇರಲೇಬೇಕು. ಆದರೆ, ಗಾಂಧೀಜಿ ಕಂಡಿದ್ದ ರಾಮರಾಜ್ಯ ಬೇಡ ಅನ್ನುವ ಜನರು ಹುಟ್ಟಿಕೊಂಡಿದ್ದಾರೆ. ಬೆರೆಳೆಣಿಕೆ ಬುದ್ಧೀವಿಗಳ ವಿರೋಧದಿಂದ ಮಂದಿರ ನಿರ್ಮಾಣ ಆಗುತ್ತಿಲ್ಲ. ಇದರಿಂದ ಕೋಟ್ಯಂತರ ಹಿಂದುಗಳ ಭಾವನೆಗೆ ಘಾಸಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳು ಕಾನೂನು ಉಲ್ಲಂಘಿಸಲ್ಲ. ಕಾನೂನಿಗೆ ಗೌರವ ನೀಡುತ್ತೇವೆ. ಆದರೆ, ನ್ಯಾಯಮೂರ್ತಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಶೀಘ್ರ ಆದೇಶ ಹೊರಡಿಸದಿದ್ದರೆ ಜನರ ಸಹನೆ ಕಟ್ಟೆ ಒಡೆಯಬಹುದು. ಅದಕ್ಕೆ ನ್ಯಾಯಾಮೂರ್ತಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಿದರು.  ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಕುರಿತು ಸಾಕ್ಷಿ ಸಮೇತ ಸಾಬೀತುಪಡಿಸಿದರೂ ಮಂದಿರ ಕಟ್ಟಲು ಆಗುತ್ತಿಲ್ಲ. ತಾಕಲಾಟ ಮುಂದುವರಿದಿದೆ. ಹಿಂದುಗಳ ಹೋರಾಟದಿಂದ ಅಮರನಾಥ, ರಾಮಸೇತು ಉಳಿಸಿಕೊಂಡಿದ್ದೇವೆ. ಶಬರಿಮಲೈ ಉಳಿಸಿಕೊಳ್ಳುತ್ತೇವೆ. ಅಯೋಧ್ಯೆಯಲ್ಲಿ ಮಂದಿರವನ್ನೂ ಕಟ್ಟುತ್ತೇವೆ ಎಂದು ಹೇಳಿದರು.

ವಿಎಚ್​ಪಿ ಉಪಾಧ್ಯಕ್ಷೆ ಜಯಶ್ರೀ ಹಿರೇಮಠ ಮಾತನಾಡಿ, ವಿಎಚ್​ಪಿ ಲವ್ ಜಿಹಾದ್, ಗೋಹತ್ಯೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ನಮ್ಮ ಗುರಿ ಮಂದಿರ ಕಟ್ಟುವುದಾಗಿದೆ. ರಾಮನ ಮೇಲಾಣೆ ಮಾಡಿ ನಾವು ಹೋರಾಟ ಮಾಡಬೇಕಿದೆ. ಮಂದಿರ ನಿರ್ವಣಕ್ಕೆ ಅಡ್ಡಪಡಿಸಿದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ.  ವಿಎಚ್​ಪಿ ಜಿಲ್ಲಾ ಕಾರ್ಯದರ್ಶಿ ಶ್ರೀಧರ ಕುಲಕರ್ಣಿ ಮಾತನಾಡಿ, 1984ರಿಂದ ಮಂದಿರ ನಿರ್ವಣಕ್ಕೆ ವಿಎಚ್​ಪಿ ಹೋರಾಟ ಆರಂಭಿಸಿದೆ. 1992ರಲ್ಲಿ ಅಯೋಧ್ಯೆಯಲ್ಲಿರುವ ಕಟ್ಟಡ ಧ್ವಂಸ ಮಾಡುವಲ್ಲಿ ಯಶಸ್ವಿಯಾದೆವು, ಸದ್ಯ ಅಲ್ಲೀಗ ತಾತ್ಕಾಲಿಕ ರಾಮ ಮಂದಿರ ಇದೆ. ಆದರೆ, ಅಲ್ಲೊಂದು ಭವ್ಯ ಮಂದಿರ ನಿರ್ವಿುಸಬೇಕು ಎಂದರು.

ಹಿಂದುಗಳು ಮೆರವಣಿಗೆ ಮಾಡಲು ಅವಕಾಶ ಇಲ್ಲ. ಹಾಡು ಕೇಳಿಸಿಕೊಡಲ್ಲ. ಆದರೆ, ನಮಾಜ್ ಮಾಡಲು ಅವಕಾಶ ಕೊಡುತ್ತೀರಿ. ಭಕ್ತಿಗೀತೆ ಹಾಕಿದರೆ ಕಾನೂನು ನೆಪವೊಡ್ಡಿ ಅಡ್ಡಿಪಡಿಸುವ ನಿಮಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮಾಜಿ ಸಚಿವರೆ, ಶಾಸಕರೆ ಹುಷಾರಾಗಿರಿ, ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಕಟ್ತೀರಿ, ಆದರೆ ಅಲ್ಲಿ ಭಯೋತ್ಪಾದಕರು ಹುಟ್ತಾ ಇದಾರೆ ನೆನಪಿರಲಿ. ವಿಎಚ್​ಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು ಏಕೆ? ಭಯದ ವಾತಾವರಣ ಮೂಡಿಸಿದ್ದು ಏಕೆ? ಎಂದು ಅವರು ಪ್ರಶ್ನಿಸಿದರು.  ಅಡ್ನೂರು ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಪರಿಷದ್​ನ ಜಿಲ್ಲಾಧ್ಯಕ್ಷ ಪ್ರಲ್ಹಾದ್ ಇನಾಮದಾರ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಮುಖಂಡರಾದ ಕುಬೇರಗೌಡ ಪರ್ವತಗೌಡ್ರ, ಮಾರುತಿ ಪವಾರ, ವೀರಣ್ಣ ಹೇಮಾದ್ರಿ, ರಾಘವೇಂದ್ರ ಹಬೀಬ ಹಾಗೂ ಮತ್ತಿತರರು ಇದ್ದರು.

ಹರಿದುಬಂದ ಜನಸಾಗರ

ಗದಗ-ಬೆಟಗೇರಿ ಅವಳಿನಗರ ಸೇರಿದಂತೆ ಜಿಲ್ಲೆಯ ರೋಣ, ನರಗುಂದ, ಶಿರಹಟ್ಟಿ, ಲಕ್ಷೆ್ಮೕಶ್ವರ, ಗಜೇಂದ್ರಗಡ ಹಾಗೂ ಮುಂಡರಗಿ ತಾಲೂಕಿನಿಂದ 10 ಸಾವಿರಕ್ಕೂ ಹೆಚ್ಚು ವಿವಿಧ ಹಿಂದು ಸಂಘಟನೆಗಳ ಕಾರ್ಯಕರ್ತರು, ಶ್ರೀರಾಮನ ಭಕ್ತರು ಜನಾಗ್ರಹ ಸಭೆಗೆ ಆಗಮಿಸಿದ್ದರು. ಮಧ್ಯಾಹ್ನದಿಂದಲೇ ಆಗಮಿಸಿದ ಕಾರ್ಯಕರ್ತರಿಗೆ ಉಪ್ಪಿಟ್ಟು, ಉಪ್ಪಿನಕಾಯಿ ವ್ಯವಸ್ಥೆ ಮಾಡಲಾಗಿತ್ತು.

ರಸ್ತೆಗಳೆಲ್ಲ ಕೇಸರಿಮಯ

ಜನಾಗ್ರಹ ಸಮಾವೇಶ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಶುಭ ಹಾರೈಕೆಯ ಫ್ಲೆಕ್ಸ್, ಬ್ಯಾನರ್, ಕಟೌಟ್​ಗಳು ರಾರಾಜಿಸುತ್ತಿದ್ದವು. ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಝುಂಡಾ ವೃತ್ತದವರೆಗಿನ ರಸ್ತೆಯು ಕೇಸರಿಮಯವಾಗಿತ್ತು. ಅಲ್ಲದೇ, ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಭಗವಾ ಧ್ವಜ ಹಾರಾಡುತ್ತಿದ್ದವು. ಹಿಂದು ಸಂಘಟನೆಗಳ ಕಾರ್ಯಕರ್ತರು ಬೃಹತ್ ಭಗವಾಧ್ವಜ ಹಿಡಿದು ಜೈ ಶ್ರೀರಾಮ ಘೊಷಣೆ ಹಾಕುತ್ತಿದ್ದರು. ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಪ್ರತಿಯೊಬ್ಬರಿಗೂ ಕೇಸರಿ ಶಾಲು ಹಾಗೂ ತಿಲಕವನ್ನಿಟ್ಟು ಬರಮಾಡಿಕೊಳ್ಳುತ್ತಿದ್ದರು.

ಜನವಿರೋಧಿಗಳನ್ನು ಬೆಳೆಸದಿರಿ

ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಸೀದಿ ಮುಂದೆ ಸಂಚರಿಸುತ್ತಿದ್ದ ಜನಾಗ್ರಹ ಸಭೆ ಪ್ರಚಾರ ವಾಹನದ ಚಾಲಕನ ಮೇಲೆ ಹಲ್ಲೆ ಮಾಡಿ ಪೋಸ್ಟರ್ ಹರಿದು ಹಾಕಿದ್ದು ಏಕೆ? ನಾಲ್ಕು ಜನ ತಲೆ ಕೆಟ್ಟವರು ಮಾಡಿದ್ದಾರೆ ಎಂದು ಸಮರ್ಥಿಸಿಕೊಳ್ಳುವುದು ಯಾವ ಸೀಮೆಯ ಸೌಹಾರ್ದತೆ? ಇಲ್ಲಿನ ಶಾಸಕರಿಗೆ ಇದು ತಿಳಿದಿಲ್ಲವೇ? ಇಂತಹ ಜನವಿರೋಧಿಗಳನ್ನು ಬೆಳೆಸುವುದು ಸರಿಯೇ? ಸೌಹಾರ್ದತೆ ಬೇಕು ಅನ್ನುವುದಾದರೆ ತಪ್ಪು ಮಾಡಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಿಲ್ಲ ಏಕೆ? ಮಸೀದಿಗಳಲ್ಲಿ ಭಯೋತ್ಪಾದಕರು ಹುಟ್ಟುತ್ತಿದ್ದಾರೆ. ರಘುಪತಿ ರಾಘವ ರಾಜಾರಾಮ, ಈಶ್ವರ ಅಲ್ಲಾ ತೇರೆ ನಾಮ ಎಂದು ಹಾಡಲು ಸಿದ್ಧ. ನೀವು ಎಂದಾದರೂ ಮಸೀದಿಯಲ್ಲಿ ಈಶ್ವರ ಎಂದು ಹಾಡಿದ್ದು ಉಂಟಾ? ಟಿಪ್ಪು ಜಯಂತಿ ಮಾಡುವವರನ್ನು ನಾವು ಉಳಿಸಲ್ಲ ಎಂದು ಅವರು ಎಚ್ಚರಿಕೆ ನೀಡಿದರು.