More

    ವಿಜಯವಾಣಿ ರಿಯಾಲಿಟಿ ಚೆಕ್|ಸಾರ್ವಜನಿಕ ಸುರಕ್ಷತೆ ಚಿಂತಾಜನಕ

    ಬೆಂಗಳೂರು: ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಗಳು ಸಾರ್ವಜನಿಕರಲ್ಲಿ ಸುರಕ್ಷತೆಯ ಭೀತಿ ಮೂಡಿಸಿದೆ. ಲಕ್ಷಾಂತರ ಜನರು ಭೇಟಿ ಕೊಡುವ ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಭದ್ರತೆಯೇ ಇಲ್ಲ! ಸಿಸಿ ಕ್ಯಾಮರಾ ಹಾಗೂ ಮೆಟಲ್ ಡಿಟೆಕ್ಟರ್ ಯಂತ್ರಗಳಿದ್ದರೂ ಅವು ಕೆಲಸ ಮಾಡುತ್ತಿಲ್ಲ! ವಿಜಯವಾಣಿ ತಂಡ ರಾಜ್ಯಾದ್ಯಂತ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಭದ್ರತಾ ಲೋಪ ಬಯಲಾಗಿದೆ.

    ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆಗಳಲ್ಲಿ ಭದ್ರತೆ ಬಿಗಿಗೊಳಿಸಿಲ್ಲ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ ರೈಲು ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಇಲ್ಲ. ಕೆಲವೆಡೆ ಸಿಸಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಅಳವಡಿಸಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಪ್ರಯಾಣಿಕರ ಸೋಗಿನಲ್ಲಿ ಯಾರು ಬೇಕಾದರೂ ನಿಲ್ದಾಣ ಪ್ರವೇಶಿಸಬಹುದು. ಏನು ಬೇಕಾದರೂ ಇಟ್ಟು ವಾಪಸ್ಸಾಗಬಹುದಾದಂತ ಪರಿಸ್ಥಿತಿ ಇದೆ.

    ಉಗ್ರರ ಸೆರೆ: 2018ರ ಆಗಸ್ಟ್​ನಲ್ಲಿ ರಾಮನಗರದಲ್ಲಿ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು.

    ಇದಾದ ಮೇಲೆ ಒಬ್ಬರ ಮೇಲೊಬ್ಬರಂತೆ ಹಲವು ಶಂಕಿತ ಉಗ್ರರ ಬಂಧನವಾಗಿದೆ. ಇದರ ಬೆನ್ನಲ್ಲೆ 2019ರ ಅಕ್ಟೋಬರ್​ನಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಾಂಬ್ ಸಿಡಿದು ಒಬ್ಬ ಗಾಯಗೊಂಡಿದ್ದ. ಜನವರಿ 8ರಂದು ತಮಿಳುನಾಡು, ಗುಜರಾತ್, ದೆಹಲಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಂದ ಕರ್ನಾಟಕ ಸೇರಿ ದೇಶದ ಎಲ್ಲೆಡೆ 15 ಶಂಕಿತ ಉಗ್ರರ ಬಂಧನವಾಗಿದೆ. ಇದರ ನಡುವೆಯೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಪತ್ತೆ ಆಗಿರುವುದು ರಾಜ್ಯದ ಭದ್ರತೆಯನ್ನು ಪ್ರಶ್ನೆ ಮಾಡುವಂತಾಗಿದೆ.

    ಎಲ್ಲೆಲ್ಲಿ ಹೇಗಿದೆ ಭದ್ರತೆ?

    ಬಳ್ಳಾರಿ: ್ಝೈಲು ನಿಲ್ದಾಣ, ಹೊಸಪೇಟೆ ರೈಲು ನಿಲ್ದಾಣದಲ್ಲಿನ ಮೆಟಲ್ ಡಿಟೆಕ್ಟರ್ ಕೆಲಸ ಮಾಡಲ್ಲ. ್ಝ್ರಯಾಣಿಕರ ತಪಾಸಣೆ ನಡೆಸಲು ಸಿಬ್ಬಂದಿ ನಿಯೋಜಿಸಿಲ್ಲ. ಹಾಸನ:ಶ್ರವಣಬೆಳಗೊಳ, ಹೇಮಾವತಿ ಜಲಾಶಯ, ಮಹಾರಾಜ ಪಾರ್ಕ್​ನಲ್ಲಿ ಭದ್ರತೆ ಹೆಚ್ಚಿಸಬೇಕಿದೆ. ್ಝೆುಟಲ್, ಹ್ಯಾಂಡ್ ಡಿಟೆಕ್ಟರ್​ಗಳಿದ್ದರೂ ಇಲ್ಲದಂತಾಗಿವೆ. ಭದ್ರತಾ ಸಿಬ್ಬಂದಿ ಕೊರತೆ ಕಾಡಿದೆ. ಹುಬ್ಬಳ್ಳಿ:ಮಂಗಳೂರಲ್ಲಿ ಬಾಂಬ್ ಪತ್ತೆ ಬಳಿಕ ಹುಬ್ಬಳ್ಳಿ-ಧಾರವಾಡದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ್ಝಮಾನ ನಿಲ್ದಾಣ, ರೈಲು ಮತ್ತು ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಶಿವಮೊಗ್ಗ:ಖಾಸಗಿ, ಸರ್ಕಾರಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ಜನದಟ್ಟಣೆ ಪ್ರದೇಶದಲ್ಲಿ ಭದ್ರತೆ. ್ಝೈಲು ನಿಲ್ದಾಣದಲ್ಲಿ 24 ವಿಡಿಯೋ ಸರ್ವೀಲಿಯನ್ಸ್ ಸಿಸ್ಟಂ ಅಳವಡಿಸಿದೆ, ಗಮನವಿರಿಸಿದೆ. ಚಿಕ್ಕಮಗಳೂರು: ್ಝೃಂಗೇರಿ, ಕಳಸ, ಹೊರನಾಡು ಕ್ಷೇತ್ರ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದೆ. ಬೆಳಗಾವಿ:ಬಾಂಬ್ ಪತ್ತೆ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ್ಝಸಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಅಳವಡಿಕೆ. ಸಾರ್ವಜನಿಕರ ಚಲನವಲನದ ನಿಗಾ. ರಾಯಚೂರು-ಕೊಪ್ಪಳ:ಬಸ್ ನಿಲ್ದಾಣ, ರೈಲು ನಿಲ್ದಾಣ ಗಳಲ್ಲಿ ಸಿಸಿ ಕ್ಯಾಮರಾ ಇವೆ. ಮೆಟಲ್ ಡಿಟೆಕ್ಟರ್ ಅಳವಡಿಸಿಲ್ಲ. ಮೈಸೂರು:ವಿಮಾನ ನಿಲ್ದಾಣಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಲಾಗಿದೆ. ್ಝ್ರಯಾಣಿಕ ರನ್ನು ಮೆಟಲ್, ಹ್ಯಾಂಡ್ ಡಿಟೆಕ್ಟರ್​ನಲ್ಲಿ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಮಂಗಳೂರು : ್ಝೆುಟಲ್ ಹಾಗೂ ಹ್ಯಾಂಡ್ ಡಿಟೆಕ್ಟರ್, ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಚಾಮರಾಜನಗರ: ್ಝತ್ತೀಚೆಗೆ ಉಗ್ರರ ಬಂಧನವಾದ ಬಳಿಕ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮಂಡ್ಯ: ್ಝೈಲು ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ದಾವಣಗೆರೆ: ್ಝುಂಗಳೂರಲ್ಲಿ ಬಾಂಬ್ ಪತ್ತೆ ಬಳಿಕ ಲೋಹ ಶೋಧಕ, ಶ್ವಾನದಳದಿಂದ ತಪಾಸಣೆ. ಚಿತ್ರದುರ್ಗ: ್ಝೋಟೆ, ಮುರುಘಾಮಠ, ವಾಣಿವಿಲಾಸ ಸೇರಿ ಪ್ರಮುಖ ಸ್ಥಳಗಳಲ್ಲಿ ಈಗ ಭದ್ರತೆ ಹೆಚ್ಚಿಸಲಾಗಿದೆ.

    ರೈಲು ನಿಲ್ದಾಣಕ್ಕೆ ಕನಿಷ್ಠ ಭದ್ರತೆಯೂ ಇಲ್ಲ!

    ಯಶವಂತಪುರ ರೈಲು ನಿಲ್ದಾಣದಲ್ಲಿ ಕನಿಷ್ಠ ಭದ್ರತೆಯೂ ಇಲ್ಲ. ನಿಲ್ದಾಣದ ಎರಡೂ ಬದಿ ಇರುವ 4 ಪ್ರವೇಶ ದ್ವಾರಗಳಲ್ಲಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್ ಯಂತ್ರಗಳು ಕೆಟ್ಟು ನಿಂತಿವೆ. ಬಿಎಂಟಿಸಿ ಬಸ್ ನಿಲ್ದಾಣದ ಕಡೆ ಬರುವ ಪ್ರವೇಶ ದ್ವಾರದಲ್ಲಿ ಒಂದು ಲಗೇಜ್ ಸ್ಕಾ್ಯನರ್ ಮಾತ್ರ ಇದೆ. ನಿರ್ವಹಣೆಗೆ ಒಬ್ಬರನ್ನು ಮಾತ್ರ ನಿಯೋಜಿಸಲಾಗಿದೆ. ನೂರಾರು ಪ್ರಯಾಣಿಕರು ಬಂದಾಗ ಕಟ್ಟುನಿಟ್ಟಿನ ತಪಾಸಣೆ ಆಗುತ್ತಿಲ್ಲ. ತುಮಕೂರು ರಸ್ತೆ ಬದಿ ಇರುವ ರೈಲು ನಿಲ್ದಾಣದ ಕಾಂಪೌಂಡ್ ಗೋಡೆ ಕೊರೆಯಲಾಗಿದೆ. ತಡೆಗೋಡೆ ಹಾರಿ ರೈಲು ನಿಲ್ದಾಣ ಪ್ರವೇಶಿಸಿ ಮತ್ತು ಅಲ್ಲಿಂದಲೇ ನಿರ್ಗಮಿಸುತ್ತಿದ್ದಾರೆ. ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಯಾವುದೇ ವಸ್ತುಗಳನ್ನು ಬೇಕಾದರು ಒಳಗೆ ತೆಗೆದುಕೊಂಡು ಹೋಗಬಹುದು. ಇದುವರೆಗೆ ಒಂದೂ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಿಸಿ ಕ್ಯಾಮರಾ, ಫೇಸ್ ರೆಕಗ್ನೀಷನ್, ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ, ಬ್ಯಾಗ್ ಪರಿಶೀಲನೆ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಎಸ್ಕಲೇಟರ್ ಮೂಲಕ ಪ್ಲಾ್ಯಟ್ ಫಾರಂ ತಲುಪುವ ಪ್ರಯಾಣಿಕರನ್ನು ಪರಿಶೀಲಿಸುತ್ತಿಲ್ಲ.

    ಶಂಕಿತ ಆರೋಪಿ ಆದಿತ್ಯ ರಾವ್ ವಶಕ್ಕೆ?

    ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ ಪ್ರಕರಣ ಸಂಬಂಧ ಉಡುಪಿಯ ಮಣಿಪಾಲ ಮೂಲದ ಆದಿತ್ಯ ರಾವ್(36) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಆದಿತ್ಯನ ತಂದೆ ಮತ್ತು ಕಿರಿಯ ಸಹೋದರನನ್ನು ವಿಚಾರಣೆ ನಡೆಸಲಾಗಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ. ಎಂಬಿಎ ಪದವೀಧರ ಆದಿತ್ಯ 2018ರಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿ ಹುದ್ದೆಗೆ ನೇಮಕಗೊಳ್ಳದ ಸಿಟ್ಟಿನಿಂದ ಏರ್​ಪೋರ್ಟ್, ರೈಲು ನಿಲ್ದಾಣಕ್ಕೆ ಒಟ್ಟು 5 ಬೆದರಿಕೆ ಕರೆ ಮಾಡಿ ಬಂಧಿತನಾಗಿ 9 ತಿಂಗಳ ಬಳಿಕ ಬಿಡುಗಡೆಯಾಗಿದ್ದ. ದೇ ಸಿಟ್ಟಿನಲ್ಲಿ ಈ ಬಾರಿ ಬಾಂಬ್ ಇರಿಸಿರುವ ಸಾಧ್ಯತೆಯತ್ತ ಪೊಲೀಸರು ತನಿಖೆಯನ್ನು ಕೇಂದ್ರೀಕರಿಸಿದ್ದಾರೆ.

    ಮಣಿಪಾಲದಲ್ಲಿ ಶೋಧ: ಬಾಂಬ್ ಇರಿಸಿದ ಶಂಕಿತ ವ್ಯಕ್ತಿಗೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿಯಾಗಿ ಮಣಿಪಾಲದ ಮಣ್ಣಪಳ್ಳ ಪರಿಸರದ ಆದಿತ್ಯ ವಾಸವಾಗಿದ್ದ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆತ ವಾರದ ಹಿಂದೆ ಮನೆ ಖಾಲಿ ಮಾಡಿ ತೆರಳಿದ್ದ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು, ಬಳಿಕ ಮಣಿಪಾಲದ ವಿವಿಧ ಫ್ಲ್ಯಾಟ್, ಲಾಡ್ಜ್​ಗಳಲ್ಲಿ ಪೊಲೀಸರು ದಿನವಿಡೀ ಶೋಧಿಸಿದ್ದಾರೆ. ಆತನ ತಂದೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts