ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಕಡ್ಡಾಯ ಮತದಾನ ಅಗತ್ಯ

ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿಯಾದರೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಮೋಹನ ಜೀರಗಿಹಾಳ ಹೇಳಿದ್ದಾರೆ.

ಪಟ್ಟಣದಲ್ಲಿರುವ ಎಲ್ಲ ಸರ್ಕಾರಿ ಶಾಲೆ ಮಕ್ಕಳಿಂದ ಪಟ್ಟಣದ ಮಾದರಿ ಶಾಲೆಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೆಕನಮರಡಿ ಮಾತನಾಡಿ, ದೇಶದ ಭವ್ಯ ಭವಿಷ್ಯ ನಿರ್ಮಾಣದ ಹಿತದೃಷ್ಟಿಯಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ಮತದಾರರ ಕರ್ತವ್ಯ. ಬಲಿಷ್ಠ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ದೇಶದ ಪ್ರಜೆಗಳು ಯಾವುದೇ ಆಸೆ, ಆಮಿಷ ಮತ್ತು ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು. ನಮ್ಮನ್ನಾಳುವ ವ್ಯಕ್ತಿ ಉತ್ತಮ ವ್ಯಕ್ತಿತ್ವ ಹೊಂದಿರಬೇಕು. ಮತದಾನ ಜಾಗೃತಿ ಮೂಡಿಸುವುದರಿಂದ ಉತ್ತಮ ವ್ಯಕ್ತಿಯ ಆಯ್ಕೆ ಸುಲಭವಾಗಲಿದೆ ಎಂದು ಹೇಳಿದರು.

ಜಿ.ಪಂ.ನ ಡಿಎಸ್‌ಒನ್ ಎಸ್.ಜಿ.ಕೊರವರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ, ಬಿ.ಆರ್.ಸಿ ಎಸ್.ಎಚ್.ಸೋನೋನೆ, ದೈಹಿಕ ಶಿಕ್ಷಣ ಸಂಯೋಜಕ ಎಂ.ಕೆ.ಪಾರ್ಥನಳ್ಳಿ, ಎನ್.ಜಿ.ಪಾಟೀಲ, ಜಿ.ಎಂ.ಬಿಸಲನಾಯಿಕ, ಎಂ.ಎಂ.ಮುಜಾವರ, ರಾಜು ಮಾನೆ, ಅಜೀತ ಹುಣಶ್ಯಾಳೆ ಉಪಸ್ಥಿತರಿದ್ದರು.