ಕೊಕ್ಕರ್ಣೆ: ಕರ್ಜೆ ಹೊಸೂರು ಗ್ರಾಮದ ರಾಜೇಶ್ವರಿ(27) ಗರ್ಭಿಣಿಯನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶುಶ್ರೂಷಕ ಪರಮೇಶ್ವರ್ ಛಲವಾದಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಚಾಲಕ ಪ್ರಕಾಶ್ ಉಪಸ್ಥಿತರಿದ್ದರು. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿಗೆ ದಾಖಲಿಸಲಾಗಿದೆ.