ಅಪರಾಧ ಮತ್ತು ರಾಜಕೀಯದ ಮಿಶ್ರಣವಾಗಿರುವ ಈ ಸಾಧ್ವಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಂತೆ!

ಭೋಪಾಲ್​: ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಒಂದಷ್ಟು ರಾಜಕೀಯ ಮತ್ತೊಂದಷ್ಟು ಅಪರಾಧದ ಮಿಶ್ರಣವಾಗಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಮಿಶ್ರಣ ತುಂಬಾ ಅಪಾಯಕಾರಿ. ಹಾಗಾಗಿ ತಾವು ಸಾಧ್ವಿ ವಿರುದ್ಧ ಪ್ರಚಾರ ಮಾಡಲು ಭೋಪಾಲ್​ಗೆ ಬಂದಿರುವುದಾಗಿ ಬಾಲಿವುಡ್​ ನಟಿ ಸ್ವರ ಭಾಸ್ಕರ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಕೊಲೆ ಮತ್ತು ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಗಂಭೀರ ಆರೋಪಗಳಿವೆ. ಆದರೂ, ತಮ್ಮ ಪಕ್ಷದ ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಲು ಅವರು ಅರ್ಹ ಎಂದು ಬಿಜೆಪಿ ಭಾವಿಸಿದೆ. ಇದು ತಪ್ಪು ಎಂದರು.

2008ರ ಮಾಲೇಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಭೋಪಾಲ್​ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಉಮೇದುವಾರಿಕೆ ಸಲ್ಲಿಸುವ ಮುನ್ನ ಮುಂಬೈ ಉಗ್ರ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆ ಅವರ ಸಾವಿಗೆ ತಾವು ಕೊಟ್ಟ ಶಾಪ ಕಾರಣ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *