ಜೈಪುರ: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಸಚಿನ್ ಪೈಲಟ್ ಹೇಳಿದ್ದರು. ಬಿಜೆಪಿ ಪರ ಮತ ಹಾಕಿದರೆ 35 ಕೋಟಿ ರೂಪಾಯಿ ನೀಡುವುದಾಗಿ ಆಫರ್ ನೀಡಿದ್ದರು ಎಂದು ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರು ಇಂದು ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರದಿಂದ ರೆಬಲ್ ಆಗಿರುವ ಸಚಿನ್ ಪೈಲಟ್ ವಿರುದ್ಧ ಆರೋಪಗಳ ಸುರಿಮಳೆಯೇ ಕೇಳಿಬರುತ್ತಿದೆ. ಅವರೊಬ್ಬ ನಿಷ್ಪ್ರಯೋಜಕ ಎಂದು ಸಿಎಂ ಅಶೋಕ್ ಗೆಹ್ಲೋಟ್ ಇಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರವಾಹದ ಹಳೆಯ ಫೋಟೋ ಹಾಕಿ ಟ್ರೋಲ್ ಆದ ಪ್ರಿಯಾಂಕಾ ಗಾಂಧಿ
ಇದೀಗ ಸಚಿನ್ ಪೈಲಟ್ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನೊಂದುಕೊಂಡು ಮಾತನಾಡಿದ್ದಾರೆ. ನನಗೆ ಈ ಲಂಚದ ಆರೋಪದ ಬಗ್ಗೆ ಅಚ್ಚರಿಯೇನೂ ಆಗಲಿಲ್ಲ. ನನ್ನ ಹೆಸರು ಹಾಳು ಮಾಡಲು, ನನಗೆ ಅಪಕೀರ್ತಿ ತರಲು ಇಂಥ ಆರೋಪಗಳನ್ನು ಮಾಡುವುದು ನಿರೀಕ್ಷಿತವೇ ಆಗಿದೆ. ಆದರೆ ತುಂಬ ದುಃಖವಾಗುತ್ತಿದೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
ಹಾಗೇ, ನಾನು ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿದರೆ 35 ಕೋಟಿ ರೂ.ಕೊಡುವುದಾಗಿ ಹೇಳಿದ್ದೆ ಎಂದು ಕಾಂಗ್ರೆಸ್ ಶಾಸಕ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಇಂಥ ಪ್ರಚೋದನಕಾರಿ ಆರೋಪಗಳು ನನ್ನ ವಿರುದ್ಧ ಬಂದರೆ ಅದರಲ್ಲಿ ಆಶ್ಚರ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಜಿರಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಅತಿದೊಡ್ಡ ಹೈಲ್ಯಾಂಡ್ ನಿರ್ಮಾಣಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್
ಇದನ್ನೆಲ್ಲ ನನ್ನನ್ನು ಕೆಣಕಲು ಮತ್ತು ನಾನು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳನ್ನು ಹತ್ತಿಕ್ಕಲು ಮಾಡಲಾಗುತ್ತಿದೆ.
ಇಲ್ಲಿ ಮುಖ್ಯವಾಗಿರುವ ವಿಷಯವನ್ನು ಮರೆಮಾಚುವುದಕ್ಕೋಸ್ಕರ ಕಾಂಗ್ರೆಸ್ ಹೀಗೆಲ್ಲ ವಿಷಯಗಳನ್ನು ಹುಟ್ಟುಹಾಕುತ್ತಿದೆ. ಹಣ ಕೊಡುವುದಾಗಿ ನಾನು ಹೇಳಿದ್ದೆ ಎಂದು ಆರೋಪ ಮಾಡಿರುವ ಎಂಎಲ್ಎ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ. ಖಂಡಿತ ಇಷ್ಟಕ್ಕೇ ಇದು ಮುಗಿಯುವುದಿಲ್ಲ…ಸಾರ್ವಜನಿಕವಾಗಿ ನನ್ನನ್ನು ಕುಗ್ಗಿಸಲು, ಅವಮಾನ ಮಾಡಲು ಇನ್ನೂ ಇಂಥ ಅನೇಕ ಅರೋಪಗಳನ್ನು ನನ್ನ ವಿರುದ್ಧ ಮಾಡಲಾಗುತ್ತದೆ. ಆದರೆ ನಾನು ಇಂಥದ್ದಕ್ಕೆಲ್ಲ ಬಗ್ಗುವುದಿಲ್ಲ. ನನ್ನ ನಂಬಿಕೆ ದೃಢವಾಗಿದೆ ಮತ್ತು ಜಯದ ಬಗ್ಗೆ ಆತ್ಮವಿಶ್ವಾಸವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. (ಏಜೆನ್ಸೀಸ್)
VIDEO: ಸುಶಾಂತ್ ಆತ್ಮದ ಜತೆ ಮಾತನಾಡಿ, ಸಾವಿನ ಹಿನ್ನೆಲೆ ತಿಳಿದುಕೊಂಡ ಪ್ಯಾರಾನಾರ್ಮಲ್ ತಜ್ಞ!!