ಹೊನ್ನೇನಹಳ್ಳಿಯಲ್ಲಿ ಸದ್ಭಾವನಾ ಪಾದಯಾತ್ರೆ

ರಾವಂದೂರು: ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಗಿಡಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸಲು ಮುಂದಾಗಬೇಕು ಎಂದು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ತಿಳಿಸಿದರು.
ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಸೇವಿಸುವ ನೀರು, ಆಹಾರ, ಗಾಳಿ ಎಲ್ಲವೂ ಅಶುದ್ಧವಾಗುತ್ತಿದೆ. ಇದರಿಂದ ಆರೋಗ್ಯವಾಗಿ ಬದುಕುವುದು ಒಂದು ಸಾಹಸ ಎಂದು ಹೇಳಿದರು.

ಚಿತ್ರದುರ್ಗದ ಬಸವ ಕಕ್ಕಯ್ಯ ಸ್ವಾಮೀಜಿ ಮಾತನಾಡಿ, ಸಂತರು, ಶರಣರ ಬಗ್ಗೆ ಜಾಗೃತಿ ಮೂಡಿಸಿ, ಜನಸಾಮಾನ್ಯರಲ್ಲಿ ಆದರ್ಶಗಳನ್ನು ಬಿತ್ತುವ ಕೆಲಸವಾಗಬೇಕಿದೆ ಎಂದರು.

ಹೊನ್ನೇನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳೊಂದಿಗೆ ಗಣ್ಯರು ಸಂವಾದ ನಡೆಸಿದರು. ನಂತರ ಅಂಕನಹಳ್ಳಿ ಮಠದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು. ಸಂಜೆ ಮಲ್ಲಿಕಾರ್ಜುನ ಮುರುಘ ರಾಜೇಂದ್ರಸ್ವಾಮೀಜಿ, ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿ, ಮುರುಘಸ್ವಾಮೀಜಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಎನ್.ಆರ್.ಪುರದ ಬಸವಪ್ರಭು ಯೋಗೀಶ್‌ಸ್ವಾಮೀಜಿ, ಮುಖಂಡರಾದ ಊಟಿ ಶಿವಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಆರ್.ವಿ.ಶಿವಮೂರ್ತಿ, ಗ್ರಾಪಂ ಮಾಜಿ ಸದಸ್ಯ ಮಹದೇವ್, ಯಜಮಾನ್ ಕೆಂಡಗಣ್ಣ, ಆರ್.ಎಸ್.ಶಶಿಧರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್.ಸ್ವಾಮಿ, ಆರ್.ಎಸ್.ಸುರೇಶ್, ತಾರಾದೇವಿ, ಸರ್ವಮ್ಮ, ಷಡಕ್ಷರಿ, ಮುಖ್ಯ ಶಿಕ್ಷಕ ರಘು, ಶ್ರೀಕಾಂತ್ ಇದ್ದರು.

ಇಂದು ಸಮಾವೇಶ: ಫೆ.23ರಂದು ರಾವಂದೂರು ಬಸವಕೇಂದ್ರ ಮುರುಘಾ ಮಠದ ಆವರಣದಲ್ಲಿ 25ನೇ ವರ್ಷದ ಬಸವತತ್ವ ಸಮಾವೇಶ ನಡೆಯಲಿದ್ದು, ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್‌ಸಿಂಹ, ಶಾಸಕ ಕೆ.ಮಹದೇವ್ ಭಾಗವಹಿಸಲಿದ್ಧಾರೆ. ಇದೇ ದಿನ ಸಂಜೆ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯ 25ನೇ ವರ್ಷದ ಸ್ಮರಣೋತ್ಸವ ನಡೆಯಲಿದೆ.