ಚಂದನವನದ ಹಿರಿಯ ನಟ ಸದಾಶಿವ ಬ್ರಹ್ಮಾವರ್​ ನಿಧನ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದನವನದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರು ನಿಧನರಾಗಿದ್ದಾರೆ.

ಸೆ.19ರಂದು ಮೃತಪಟ್ಟಿದ್ದ ಬ್ರಹ್ಮಾವರ್​ ಅವರ ಅಂತ್ರಕ್ರಿಯೆ ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆಯಾಗಿತ್ತು.

ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಹ್ಮಾವರ್ ಅವರು ಸಾವಿಗೂ ಮುಂಚೆ, ಸಾವಿನ ಸುದ್ದಿ ‘ಕುಟುಂಬದವರನ್ನು ಹೊರತುಪಡಿಸಿ ಯಾರಿಗೂ ತಿಳಿಯಬಾರದು’ ಎಂದು ಮಕ್ಕಳಿಗೆ ಸೂಚಿಸಿದ್ದರು ಎನ್ನಲಾಗಿದೆ.

ಕನ್ನಡದ ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಇವರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಬ್ರಹ್ಮಾವರ್ ಕಳೆದ ವರ್ಷವಷ್ಟೇ ಕುಮುಟಾದಿಂದ ಮಿಸ್ ಆಗಿದ್ದರು. ಕೆಲ ದಿನಗಳ ನಂತರ ಸಿಕ್ಕಾಗ ನಟ ಶಿವರಾಜ್​ಕುಮಾರ್ ಮತ್ತು ಸುದೀಪ್ ಸಹಾಯ ಮಾಡಲು ಮುಂದಾಗಿದ್ದರು. ಆದರೆ, ಆದ್ರೆ ಸ್ವಾಭಿಮಾನಿ ಬ್ರಹ್ಮಾವರ್ ಅದನ್ನ ನಿರಾಕರಿಸಿದ್ದರು. (ದಿಗ್ವಿಜಯ ನ್ಯೂಸ್​)

ನಟ ಸುದೀಪ್​ ಕಾಳಜಿ: ಪತ್ತೆಯಾದ ಹಿರಿಯ ನಟ ಬ್ರಹ್ಮಾವರ್

ಮಕ್ಕಳಿದ್ದರೂ ಬೀದಿಗೆ ಬಿದ್ದ ನಟ