20.3 C
Bangalore
Sunday, December 15, 2019

ತ್ರಿಮೂರ್ತಿಗಳಿಗೆ ಪ್ರಮುಖ ಹೊಣೆ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

| ರಾಘವ ಶರ್ಮ ನಿಡ್ಲೆ, 

ನವದೆಹಲಿ: ಕೇಂದ್ರ ಸಚಿವ ಸ್ಥಾನ ಸಿಕ್ಕಿರುವ ರಾಜ್ಯದ ಮೂವರು ಲೋಕಸಭೆ ಸಂಸದರಲ್ಲಿ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಅವರಿಗೆ ಪ್ರಧಾನಿ ಮೋದಿಯವರು ಗಂಭೀರ ಸವಾಲಿನ ಖಾತೆಗಳನ್ನು ನೀಡಿರುವುದು ಗಮನಾರ್ಹ.

ವಾಸ್ತವದಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಖಾತೆ ನಿರ್ವಹಿಸುವುದು ಸುಲಭದ ಮಾತಲ್ಲ. ಸಂಸತ್ತಿನಲ್ಲಿ ಆಡಳಿತಾರೂಢ ಪಕ್ಷದ ಮಾತನ್ನು ಕೇಳದ ವಿಪಕ್ಷಗಳನ್ನು ತಮ್ಮ ಹಾದಿಗೆ ತರುವ ಜತೆಗೆ ಸರ್ಕಾರದ ವ್ಯವಹಾರಗಳನ್ನು ಸಂಸತ್ತಿನಲ್ಲಿ ಸಮರ್ಥವಾಗಿ ಮಂಡಿಸುವಲ್ಲಿ ಸಚಿವರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ದೆಹಲಿ ರಾಜಕಾರಣದ ದಶ ದಿಕ್ಕುಗಳನ್ನು ನೋಡಿದ್ದ ಅನಂತಕುಮಾರ್ ಸಂಸತ್ ವ್ಯವಹಾರಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು. ಅನಾರೋಗ್ಯದ ಸಮಸ್ಯೆಗಳನ್ನು ಯಾರಲ್ಲೂ ಹೇಳಿಕೊಳ್ಳದೆ ಕೊನೆಯ ದಿನಗಳಲ್ಲಿ ಖಾತೆ ನಿಭಾಯಿಸಿದ್ದ ರೀತಿ ಎಲ್ಲರಲ್ಲೂ ಅಚ್ಚರಿ ಸೃಷ್ಟಿಸಿತ್ತು, ಮೆಚ್ಚುಗೆಗೂ ಪಾತ್ರವಾಗಿತ್ತು. ಹೀಗಾಗಿ, ಸಹಜವಾಗಿಯೇ ಜೋಶಿ ಅವರಿಂದಲೂ ಅನಂತಕುಮಾರ್ ಮಾದರಿ ನಿರ್ವಹಣೆಯನ್ನೇ ನಿರೀಕ್ಷಿಸಿ ಪ್ರಧಾನಿ ಮೋದಿ ಜವಾಬ್ದಾರಿ ನೀಡಿದಂತಿದೆ.

ಸಂಸತ್ ಅಧಿವೇಶನವಿದ್ದಾಗ ಅನಂತಕುಮಾರ್ ಪ್ರತಿದಿನವೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಮೂಲಕ ಮಾತನಾಡಿ ವಿಪಕ್ಷಗಳ ಬೇಡಿಕೆ, ಆಶಯ, ಸರ್ಕಾರದ ಕ್ರಮಗಳಿಗೆ ಸಹಕಾರ ನೀಡುವ ಬಗ್ಗೆ ರ್ಚಚಿಸುತ್ತಿದ್ದರು. ಜೋಶಿಯವರಿಗೂ ಇದು ಗೊತ್ತಿರದ ವಿಚಾರವೇನಲ್ಲ. ಸಂಸತ್ತಿನಲ್ಲಿ ಅನೇಕ ವಿಷಯಗಳ ಬಗ್ಗೆ ಗಮನಸೆಳೆಯುವ ರೀತಿಯಲ್ಲಿ ಮಾತನಾಡಿರುವ ಜೋಶಿ, ಹಿಂದಿ-ಇಂಗ್ಲಿಷ್ ಎರಡೂ ಭಾಷೆಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಹೀಗಾಗಿ, ಭಾಷೆ ಅವರಿಗೆ ಅಡ್ಡಿಯಾಗದು. ಹೊಸ ತಂತ್ರಗಾರಿಕೆ ರೂಪಿಸಿ ಸಂಸತ್ತಿನಲ್ಲಿ ಸರ್ಕಾರವನ್ನು ಹೇಗೆ ಬಚಾವ್ ಮಾಡುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

‘ಅನಂತಕುಮಾರ್ ನಿಧನದ ಬಳಿಕ ದೆಹಲಿಯಲ್ಲಿ ರಾಜ್ಯದ ಪರ ಲಾಬಿ ಮಾಡುವ ಪ್ರಬಲ ವ್ಯಕ್ತಿಯ ಕೊರತೆ ಇತ್ತ್ತು. ಪ್ರಲ್ಹಾದ್ ಜೋಶಿಯವರಿಗೆ ಪ್ರಭಾವಿ ಖಾತೆ ಸಿಕ್ಕಿರುವುದರಿಂದ ದೆಹಲಿ ರಾಜಕಾರಣದಲ್ಲಿ ಸಹಜವಾಗಿಯೇ ಅವರ ಸ್ಥಾನಮಾನ ಹೆಚ್ಚಾಗಲಿದೆ. ಇದನ್ನು ಬಳಸಿಕೊಂಡು ಅನಂತಕುಮಾರ್ ಅವರಂತೆ ರಾಜ್ಯಕ್ಕೆ ನೆರವಾಗುವ ರೀತಿಯಲ್ಲಿ ಅವರು ಕಾರ್ಯನಿರ್ವಹಿಸಬೇಕು. ಈ ಸಚಿವರು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಆಚೆಗೂ ನೋಡುವ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯ ಬಿಜೆಪಿಯ ಪ್ರಮುಖ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಉಳಿದಂತೆ ಕೇಂದ್ರ ಸಚಿವ ಸದಾನಂದ ಗೌಡರು ರಾಸಾಯನಿಕ ರಸಗೊಬ್ಬರ ಖಾತೆಯಲ್ಲೇ ಮುಂದುವರಿಯಲಿದ್ದಾರೆ. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿರುವುದರಿಂದ ರಾಜ್ಯದ ಪಾಲಿಗೆ ರೈಲ್ವೆ ಸಚಿವಾಲಯದಲ್ಲಿ ಕೊಂಡಿಯೊಂದು ತೆರೆದಂತಾಗಿದೆ. ರಾಜ್ಯದ ಬಾಕಿ ಯೋಜನೆಗಳಿಗೆ ವೇಗ ನೀಡಲು ಅಂಗಡಿ ಪಾತ್ರ ಮಹತ್ವದ್ದು.

ದೊಡ್ಡ ಜವಾಬ್ದಾರಿ ನನ್ನೆದುರಿದೆ

| ಪ್ರಲ್ಹಾದ್ ಜೋಶಿ, ಕೇಂದ್ರ ಸಂಸದೀಯ ವ್ಯವಹಾರ, ಗಣಿ-ಕಲ್ಲಿದ್ದಲು ಖಾತೆ

 • ಹೊಸ ಸವಾಲಿಗೆ ಹೇಗೆ ಸಜ್ಜಾಗಿದ್ದೀರಿ?

ಪ್ರಧಾನಿ ಮೋದಿ ಅವರು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಇದು ನಿಜಕ್ಕೂ ಸವಾಲಿನ ಖಾತೆ. ಇದನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ ಎಂಬ ವಿಶ್ವಾಸವಿದೆ.

 • ಈ ಖಾತೆಯನ್ನು ಅನಂತಕುಮಾರ್ ಕೂಡ ನಿಭಾಯಿಸಿದ್ದರು. ಈಗ ನೀವು..

ಹಿಂದಿನ ಸಚಿವರಾದ ವೆಂಕಯ್ಯ ನಾಯ್ಡು, ಅನಂತಕುಮಾರ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಹಾಕಿಕೊಟ್ಟ ಮಾರ್ಗ, ಪರಂಪರೆ ಉಳಿಸಿಕೊಂಡು ಮುನ್ನಡೆಯಲು ಸರ್ವ ರೀತಿಯಲ್ಲಿ ಶ್ರಮಿಸುತ್ತೇನೆ. ದಿವಂಗತ ಅನಂತಕುಮಾರ್ ನನಗೆ ವೈಯಕ್ತಿಕವಾಗಿ ಆಪ್ತರಿದ್ದರು ಮತ್ತು ಅವರಿಂದ ಆಡಳಿತಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಕಲಿತಿದ್ದೇನೆ. ಅದು ಕರ್ತವ್ಯ ನಿಭಾಯಿಸಲು ನೆರವಾಗಲಿದೆ.

 • ಈ ಖಾತೆ ಸಿಕ್ಕಿದ್ದಕ್ಕೆ ಖುಷಿ ಇದೆಯೇ?

ಇಲ್ಲಿ ಖುಷಿಗಿಂತ ಹೆಚ್ಚು ಜವಾಬ್ದಾರಿ ನನ್ನ ಮುಂದಿದೆ. ಕಲ್ಲಿದ್ದಲು ಮತ್ತು ಗಣಿ ಖಾತೆಯನ್ನೂ ನಾನು ನಿರ್ವಹಿಸಬೇಕಿದೆ. ಜನರಿಗೆ ಸರ್ಕಾರದ ಮುಖ (ಸಂಸತ್ತಿನಲ್ಲಿ) ಕಾಣುವುದು ಸಂಸದೀಯ ವ್ಯವಹಾರ ಖಾತೆ ಮೂಲಕ. ಹಾಗಾಗಿ ಇದು ನನಗೆ ಸಂತೋಷ, ಖುಷಿ ಅನ್ನುವುದಕ್ಕಿಂತ ದೊಡ್ಡ ಜವಾಬ್ದಾರಿ ಮತ್ತು ಸವಾಲಿನ ಕೆಲಸ. ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮಾನಸಿಕ ಮತ್ತು ದೈಹಿಕವಾಗಿ ಸಜ್ಜಾಗುತ್ತಿದ್ದೇನೆ.

 • ಹಿಂದಿ-ಇಂಗ್ಲಿಷ್ ಭಾಷೆ ಮೇಲಿನ ಹಿಡಿತ ಈ ಖಾತೆ ಸಿಕ್ಕಲು ಕಾರಣವಾಯಿತೇ?

ಭಾಷೆ ಮೇಲೆ ಹಿಡಿತ ಇದೆ ಎಂದು ನೀವು ಹೇಳುತ್ತಿರುವುದರಿಂದ ನಿಮಗೆ ಧನ್ಯವಾದ ಹೇಳಲೇಬೇಕು. ಆದರೆ ಕಲಿಯುವುದು ಸಾಕಷ್ಟಿದೆ ಎನ್ನುವುದು ನನ್ನ ಭಾವನೆ.

ನಾನು ರೈಲ್ವೆ ಸವಾಲಿಗೆ ಸಜ್ಜಾಗಿದ್ದೇನೆ

| ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

 • ರೈಲ್ವೆ ಖಾತೆ ಸಿಕ್ಕಿದ್ದಕ್ಕೆ ಏನನಿಸುತ್ತದೆ?

ನಿಜಕ್ಕೂ ಖುಷಿಯಾಗಿದೆ. ದೇಶದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ದೇಶದಲ್ಲಿ ರೈಲು 350 ಕಿ.ಮೀ. ವೇಗದಲ್ಲಿ ಹೋಗುತ್ತಿದ್ದರೂ ಕರ್ನಾಟಕ ರೈಲ್ವೆ ಕ್ಷೇತ್ರ ಸುಧಾರಣೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಬಾಕಿ ಇರುವ ಯೋಜನೆಗಳಿಗೆ ವೇಗ ನೀಡಬೇಕು ಎನ್ನುವುದು ಮೋದಿ ಅವರ ಆಶಯ. ಆ ದಿಕ್ಕಿನಲ್ಲಿ ನಾವು ಮುನ್ನಡೆಯಲಿದ್ದೇವೆ.

 • ರೈಲ್ವೆ ವ್ಯವಸ್ಥೆ ಅಧ್ಯಯನ ಸವಾಲೆನಿಸಬಹುದೇ?

ಹೊಸ ಸವಾಲು ಎದುರಿಸಲು ಸಜ್ಜಾಗಿದ್ದೇನೆ. ಅಧಿಕಾರಿಗಳ ಜತೆ ಸಮಾಲೋಚಿಸಿಸಿ ಎಲ್ಲವನ್ನೂ ತಿಳಿದುಕೊಳ್ಳುತ್ತೇನೆ. ಅಧಿಕಾರ ಸ್ವೀಕರಿಸಿದ ಕೂಡಲೇ ಒಂದೊಂದಾಗಿಯೇ ಕೆಲಸ ಮಾಡಲಿದ್ದೇನೆ.

 • ರೈಲ್ವೆ ಅಭಿವೃದ್ಧಿಗೆ ರಾಜ್ಯ-ಕೇಂದ್ರ ಸಹಕಾರ ಸಾಧಿಸುವುದೇ ಸವಾಲಲ್ಲವೇ?

ಹೌದು.. ಆದರೆ ಆಯಾ ರಾಜ್ಯಗಳ ಮುಖ್ಯಮಂತ್ರಿ, ಉನ್ನತಾಧಿಕಾರಿಗಳು ದೇಶದ ಹಿತದೃಷ್ಟಿಯಿಂದ ಯೋಚಿಸಿದರೆ ಸಮಸ್ಯೆ ಉದ್ಭವಿಸುವುದಿಲ್ಲ. ಸಮರ್ಥ ರಾಜಕೀಯ ನಿರ್ಧಾರದ ಜತೆ ಹಠ ಹಿಡಿದು ಕುಳಿತರೆ ಅಭಿವೃದ್ಧಿ ಕೆಲಸ ಸಾಧ್ಯ.

 • ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ನಿಮ್ಮ ಸಂದೇಶ?

ನಮ್ಮನ್ನು ಆರಿಸಿದ ಜನರಿಗೆ ಮೊದಲು ಧನ್ಯವಾದ ಅರ್ಪಿಸುತ್ತೇನೆ. ರಾಜ್ಯದ ಬೇಡಿಕೆಗಳಿಗೆ ಆದ್ಯತೆ ನೀಡುತ್ತೇನೆ. ಈ ಬಗ್ಗೆ ಸಂದೇಹ ಬೇಡ. ಬೇಗ ಪೂರ್ಣಗೊಳ್ಳಬೇಕಿರುವ ಯೋಜನೆಗಳನ್ನು ಕೈಗೆತ್ತಿಕೊಂಡು, ದೇಶ ಮತ್ತು ರಾಜ್ಯದ ರೈಲ್ವೆ ಅಭಿವೃದ್ಧಿ ಶ್ರಮಿಸುತ್ತೇನೆ.

 • ಕೆ.ಎಚ್. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡರಿಗೂ ಈ ಖಾತೆ ಸಿಕ್ಕಿತ್ತು. ಅವರ ಅಭಿಪ್ರಾಯ ಕೇಳ್ತೀರಾ?

ಖಂಡಿತವಾಗಿಯೂ ಅವರ ಜತೆ ಮಾತನಾಡುತ್ತೇನೆ. ರೈಲ್ವೆ ಸಂಬಂಧ ಆಯಾ ರಾಜ್ಯಗಳ ಪ್ರಮುಖರೊಂದಿಗೂ ಸಂವಾದ ನಡೆಸುತ್ತೇನೆ. ಅವರ ಅನುಭವಗಳು ನನಗೆ ಬಹುಮುಖ್ಯ ಎಂದೇ ಪರಿಗಣಿಸಿದ್ದೇನೆ.

ಕಡಿಮೆ ಧಾರಣೆಯಲ್ಲಿ ಗೊಬ್ಬರ ಪೂರೈಕೆ

| ಡಿ.ವಿ. ಸದಾನಂದ ಗೌಡ, ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ

 • ಹಿಂದಿದ್ದ ಖಾತೆಯಲ್ಲೇ ಮುಂದುವರಿಯುತ್ತಿದ್ದೀರಿ, ಈಗ ನಿಮ್ಮ ಮುಂದಿರುವ ಸವಾಲುಗಳೇನು?

ರೈತರಿಗೆ ಕಡಿಮೆ ಧಾರಣೆಯಲ್ಲಿ ರಸಗೊಬ್ಬರ ಪೂರೈಸುವುದು ನಮ್ಮ ಜವಾಬ್ದಾರಿ. 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸಬೇಕು ಎನ್ನುವುದು ಪ್ರಧಾನಿ ಅವರ ಆಶಯ. ಅದಕ್ಕೆ ಉತ್ಪಾದನಾ ವೆಚ್ಚ ತಗ್ಗಬೇಕು. ಕಡಿಮೆ ಧಾರಣೆಯಲ್ಲಿ ರಸಗೊಬ್ಬರ ನೀಡಿದಲ್ಲಿ ಇದು ಸಾಧ್ಯ. ನಮ್ಮ ದೇಶದಲ್ಲೇ ಯೂರಿಯಾ ಉತ್ಪಾದಿಸುವುದರಿಂದ ಶೇ.20-30 ಆಮದು ತಪ್ಪಲಿದೆ. ಮುಚ್ಚುವ ಸ್ಥಿತಿಯಲ್ಲಿರುವ ರಸಗೊಬ್ಬರ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹಿಂದೆ ಅನಂತಕುಮಾರ್ ಅವರು ಈ ಇಲಾಖೆಯಲ್ಲಿದ್ದುಕೊಂಡು ಅನೇಕ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಮುಂದುವರಿಯುವುದು ನಮ್ಮ ಆದ್ಯತೆಯಾಗಲಿದೆ.

 • ಕಳೆದೈದು ವರ್ಷದಲ್ಲಿ ಮೋದಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಗಮನ ನೀಡಲಿಲ್ಲ ಎಂಬ ಆರೋಪವಿದೆ. ಇದನ್ನು ಸರಿದೂಗಿಸುವಲ್ಲಿ ನಿಮ್ಮ ಇಲಾಖೆ ಪಾತ್ರವೂ ಮುಖ್ಯ ಅಲ್ಲವೇ?

ಹೌದು.. ಕೃಷಿಕರ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಉತ್ಪಾದನಾ ವೆಚ್ಚ ಕಡಿಮೆಯಾದಂತೆ ರೈತರ ಸಂಕಷ್ಟಗಳೂ ತಗ್ಗಲಿವೆ. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಈ ಬಾರಿ ಕೆಲಸ ಮಾಡಲಿದೆ.

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...