ಗೃಹಸಚಿವ ಅಮಿತ್​ ಷಾ ವಿರುದ್ಧ ಕಿಡಿಕಾರಿದ್ದ ಪ್ರಿಯಾಂಕ ಖರ್ಗೆಗೆ ಸದಾನಂದ ಗೌಡರ ಕಟು ತಿರುಗೇಟು…

ಬೆಂಗಳೂರು: ಅಮಿತ್​ ಷಾ ಅವರಿಗೆ ಗೃಹಖಾತೆ ನೀಡಿದ್ದನ್ನು ವ್ಯಂಗ್ಯವಾಡಿ ಟ್ವೀಟ್​ ಮಾಡಿದ್ದ ಸಚಿವ ಪ್ರಿಯಾಂಕ ಖರ್ಗೆಗೆ ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್​ ಮೂಲಕವೇ ತಿರುಗೇಟು ನೀಡಿದ್ದಾರೆ.

ಗೃಹ ಸಚಿವಾಲಯವನ್ನು ಕ್ಲೀನ್​ಚಿಟ್​ಗಳ ಸಚಿವಾಲಯ ಎಂದು ಬದಲಿಸುವುದು ಸೂಕ್ತ ಎಂದಿದ್ದ ಪ್ರಿಯಾಂಕ ಖರ್ಗೆಯವರಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ಪ್ರಿಯಾಂಕ ಖರ್ಗೆಯವರೇ ಕೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳಬೇಡಿ. ನಿಮ್ಮ ಪಕ್ಷದ ಚಿನ್ಹೆ ‘ಕೈ’. ಜನರು ಅದರ ಅವಲಕ್ಷಣ ಹೇಳಿ 10 ದಿನವೂ ಆಗಿಲ್ಲ. ಆಗಲೇ ಶುರು ಮಾಡಿಕೊಂಡಿರಲ್ಲ ನಿಮ್ಮ ಹಿರಿಯಕ್ಕನ ಚಾಳಿ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ಆಮೇಲೆ ಊರು ಉಸಾಬರಿಗೆ ಬರುವಿರಂತೆ ಎಂದಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಅಮಿತ್​ ಷಾ ಗೃಹಸಚಿವರಾಗಿದ್ದನ್ನು ವಿರೋಧಿಸಿ ಪ್ರಿಯಾಂಕ ಖರ್ಗೆ ಟ್ವೀಟ್​ ಮಾಡಿದ್ದರು. ಅಲ್ಲದೆ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದ ಸಂಸದ ಡಿ.ವಿ.ಸದಾನಂದ ಗೌಡ, ಸುರೇಶ್​ ಅಂಗಡಿ, ಪ್ರಲ್ಹಾದ್​ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ನಿಮ್ಮ ಪ್ರಾತಿನಿಧ್ಯದಿಂದ ನಮ್ಮ ರಾಜ್ಯ ಅಪಾರ ಲಾಭ ಪಡೆಯುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದರು.

Leave a Reply

Your email address will not be published. Required fields are marked *