ಸಾಂತಾ ವೇಷ ಧರಿಸಿ ಮಕ್ಕಳೊಂದಿಗೆ ಮಗುವಾದ ಮಾಸ್ಟರ್​ ಬ್ಲಾಸ್ಟರ್​

ಮುಂಬೈ: ಕ್ರಿಸ್​ಮಸ್​ ಪ್ರಯುಕ್ತ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ ಸಾಂತಾ ಕ್ಲಾಸ್​ ವೇಷ ಧರಿಸಿ ಅನಾಥ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ.

ಸಾಂತಾ ಕ್ಲಾಸ್​ ವೇಷ ಧರಿಸಿ ಮುಂಬೈನ ಆಶ್ರಯ ಚೈಲ್ಡ್​ ಕೇರ್​ ಸೆಂಟರ್​ ಎಂಬ ಎನ್​ಜಿಒಗೆ ತೆರಳಿದ ಸಚಿನ್​ ತೆಂಡೂಲ್ಕರ್​ ಅಲ್ಲಿನ ಮಕ್ಕಳಿಗೆ ಸರ್​ಪ್ರೈಸ್​ ನೀಡಿದರು. ಮಕ್ಕಳೊಂದಿಗೆ ಬೆರೆತು ಆಟವಾಡಿದ ಅವರು ಕುಣಿದು ಕುಪ್ಪಳಿಸಿದರು. ಜತೆಗೆ ಮಕ್ಕಳೊಂದಿಗೆ ಕ್ರಿಕೆಟ್​ ಆಡಿ ಸಂಭ್ರಮಿಸಿದರು.

ಸಚಿನ್​ ಮಕ್ಕಳಿಗೆ ಕ್ರಿಸ್​ಮಸ್​ ಮತ್ತು ಹೊಸ ವರ್ಷದ ಶುಭಕೋರಿ, ಈ ವರ್ಷದ ಕ್ರಿಸ್​ಮಸ್​ ಅನ್ನು ಮಕ್ಕಳ ಪಾಲಿಗೆ ಸ್ಮರಣೀಯವಾಗಿಸಿದರು. ಸಚಿನ್​ ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.