ಆಪ್ತ ಸ್ನೇಹಿತ ವಿನೋದ್​ ಕಾಂಬ್ಳಿ ನ್ಯೂ ಲುಕ್​ ಅನ್ನು ಟ್ರೋಲ್​ ಮಾಡಿದ ಸಚಿನ್​ ತೆಂಡುಲ್ಕರ್​!

ಮುಂಬೈ: ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ ಅವರು ತಮ್ಮ ಆಪ್ತ ಸ್ನೇಹಿತ ವಿನೋದ್​ ಕಾಂಬ್ಳಿಯ ಹೊಸ ಲುಕ್​ ಅನ್ನು ಟ್ರೋಲ್​ ಮಾಡಿದ್ದಾರೆ.

ಏ. 24ರಂದು ವಿನೋದ್​ ಕಾಂಬ್ಳಿ ಹಾಡು ಹಾಡುವ ಮೂಲಕ ಸಚಿನ್​ ತೆಂಡುಲ್ಕರ್​ಗೆ ಶುಭ ಕೋರಿ ಟ್ವೀಟ್​ ಮಾಡಿದ್ದರು. ವಿನೋದ್​ ಕಾಂಬ್ಳಿ ಹಾಡಿಗೆ ಮರುಳಾಗಿದ್ದ ನೆಟ್ಟಿಗರು ಕಾಂಬ್ಳಿಯನ್ನು ಹೊಗಳಿದ್ದರು. ಆದರೆ, ಸಚಿನ್​ ತೆಂಡುಲ್ಕರ್​ ಮಾತ್ರ ತಮ್ಮ ಸ್ನೇಹಿತ ಹಾಡುಗಾರಿಕೆಗೆ ಮೆಚ್ಚಿ ತಲೆದೂಗುವ ಜತೆಗೆ ಕಾಂಬ್ಳಿಯ ಕಾಲೆಳೆದಿದ್ದಾರೆ.

ಕಾಂಬ್ಳಿಯ ಟ್ವೀಟ್​ಗೆ ರಿಪ್ಲೈ ಮಾಡಿರುವ ಸಚಿನ್​ ‘ವಿನೋದ್​ ಕಾಂಬ್ಳಿ ನನಗೆ ಹುಟ್ಟು ಹಬ್ಬದ ಶುಭ ಕೋರಿದ್ದಕ್ಕೆ ಧನ್ಯವಾದಗಳು. ಹಾಡು ಅದ್ಭುತವಾಗಿತ್ತು. ನಿನ್ನ ಗಡ್ಡ ಬೆಳ್ಳಗಿದೆ. ಆದರೆ, ನಿನ್ನ ಕಣ್ಣಿನ ಹುಬ್ಬುಗಳು ಕಪ್ಪಗಿವೆ. ಇದು ಹೇಗೆ ಸಾಧ್ಯ ಎಂದು ನನಗೆ ಆಶ್ಚರ್ಯವಾಗುತ್ತಿದೆ’ ಎಂದು ತಮಾಷೆ ಮಾಡಿದ್ದರು.

ಸಚಿನ್​ ರಿಪ್ಲೈಗೆ ಅಭಿಮಾನಿಗಳೂ ಫಿದಾ ಆಗಿದ್ದು, ಸಚಿನ್​ ಗೆ ಬೆಂಬಲಿಸಿ ಹಲವರು ಟ್ವಿಟ್​ ಮಾಡಿದ್ದರೆ. ಇವರಿಬ್ಬರ ಸ್ನೇಹವನ್ನು ಹೊಗಳಿ ಸಾಕಷ್ಟು ಜನರು ಟ್ವೀಟ್​ ಮಾಡಿದ್ದಾರೆ. ಅಭಿಮಾನಿಯೊಬ್ಬರು ಇದು ಡಿಜಿಟಲ್​ ಯುಗ, ಇಲ್ಲಿ ಏನು ಬೇಕಾದರೂ ಆಗಬಹುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)