ಸಚಿನ್​​ ತೆಂಡೂಲ್ಕರ್​ಗೆ ಆಸ್ಟ್ರೇಲಿಯಾ ಬ್ಯಾಟ್​​ ಕಂಪನಿಯಿಂದ 13.91 ಕೋಟಿ ರೂ. ರಾಯಲ್ಟಿ ಧೋಖಾ

ದೆಹಲಿ: ಭಾರತದ ಕ್ರಿಕೆಟ್​​ ದಂತಕತೆ ಸಚಿನ್​​ ತೆಂಡೂಲ್ಕರ್​ ಅವರಿಗೆ ಆಸ್ಟ್ರೇಲಿಯಾದ ಬ್ಯಾಟ್​​ ತಯಾರಿಕಾ ಕಂಪನಿಯೊಂದು ಒಪ್ಪಂದದ ನಿಯಮ ಉಲ್ಲಂಘಿಸಿ ಭಾರಿ ಮೊತ್ತದ ಧೋಖಾ ಎಸಗಿದೆ.

ಸಿಡ್ನಿ ಮೂಲದ ಸ್ಪಾರ್ಟನ್​​​ ಸ್ಪೋರ್ಟ್ಸ್​ ಕಂಪನಿ ಸಚಿನ್​​ ತೆಂಡೂಲ್ಕರ್​​​​​ ಜೊತೆಗೆ ಪ್ರಚಾರ ರಾಯಭಾರಿ ಕುರಿತು ಒಪ್ಪಂದ ಮಾಡಿಕೊಂಡಿತ್ತು. ಕರಾರಿನ ಅನ್ವಯ 13.91 ಕೋಟಿ ರೂ. (2 ಮಿಲಿಯನ್​​ ಡಾಲರ್ ) ರಾಯಲ್ಟಿ ನೀಡದ ಕಾರಣ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

2016ರಲ್ಲಿ ಕಂಪನಿ ಬ್ಯಾಟ್​​ ಹಾಗೂ ಉತ್ಪನ್ನಗಳ ಪ್ರಚಾರಕ್ಕೆ ಸಚಿನ್​​​ ಅವರ ಹೆಸರು, ಚಿಹ್ನೆ, ಭಾವಚಿತ್ರ ಮತ್ತು ಪ್ರಚಾರದ ಸೇವೆ ಬಳಸಿಕೊಳ್ಳುವ ಮೂಲಕ 13.91 ಕೋಟಿ ರೂ. ಪಾವತಿಸುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಎರಡು ವರ್ಷ ಕಳೆದರೂ ಹಣ ನೀಡದ ಕಂಪನಿ ಸಚಿನ್​ಗೆ ಮೋಸ ಮಾಡಿದೆ. ಹೀಗಾಗಿ ಅವರು ಸಿಡ್ನಿಯ ಫೆಡರರ್​ ಕೋರ್ಟ್​ನಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ನ್ಯಾಯಾಲಯ ಜೂನ್​​​ ತಿಂಗಳಾಂತ್ಯದಲ್ಲಿ ವಿಚಾರಣೆ ನಡೆಸಲಿದೆ. (ಏಜೆನ್ಸೀಸ್​​)