ಫಿಫಾ ವಿಶ್ವಕಪ್‌: ಕ್ರಿಕೆಟ್‌ ದಿಗ್ಗಜ ಸಚಿನ್‌ ಬೆಂಬಲ ಇಂಗ್ಲೆಂಡ್‌ಗೆ

ನವದೆಹಲಿ: ಫಿಫಾ ಫುಟ್ಬಾಲ್ ವಿಶ್ವಕಪ್ ಅಂತಿಮ ಹಂತವನ್ನು ತಲುಪಿದ್ದು, ಇಂಗ್ಲೆಂಡ್ ಹಾಗೂ ಕ್ರೊವೇಷಿಯಾ ತಂಡಗಳು ಎರಡನೇ ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಇತ್ತ ಒಂದು ಕಣ್ಣು ನೆಟ್ಟಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ತಮ್ಮ ನೆಚ್ಚಿನ ಪಂದ್ಯವನ್ನು ಆಯ್ಕೆ ಮಾಡಿದ್ದಾರೆ.

ಕ್ರಿಕೆಟ್‌ನ್ನು ಹೊರತುಪಡಿಸಿಯೂ ಇತರೆ ಕ್ರೀಡೆಗಳತ್ತಲೂ ಗಮನ ಹರಿಸಿರುವ ಸಚಿನ್‌, ಸೆಮಿಪೈನಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.

ತಮ್ಮ ನೆಚ್ಚಿನ ಇಂಗ್ಲೆಂಡ್‌ ತಂಡಕ್ಕೆ ಬೆಂಬಲ ಸೂಚಿಸಿರುವ ಕುರಿತು ಸಚಿನ್‌ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ಅದರಲ್ಲಿ ಕ್ರಿಕೆಟ್‌ ಚೆಂಡು ಹಿಡಿದು ಕುತೂಹಲ ಮೂಡಿಸಿರುವ ಸಚಿನ್‌, ಬಳಿಕ ಫುಟ್ಬಾಲ್‌ನ್ನು ಕಿಕ್‌ ಮಾಡಿ ಕ್ಯಾಮರಾ ಕಡೆಗೆ ತಿರುಗಿಸುವ ಮೂಲಕ ಕಮ್ ಆನ್‌ ಇಂಗ್ಲೆಂಡ್‌ ಎಂದಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ತಮ್ಮ ಕೇರಳ ತಂಡದ ಕೋಚ್‌, ಇಂಗ್ಲೆಂಡ್‌ನವರೇ ಆಗಿರುವ ಡೇವಿಡ್‌ ಜೇಮ್ಸ್‌ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

20 ವರ್ಷಗಳ ಬಳಿಕ ಸೆಮಿಫೈನಲ್ ಆಡುತ್ತಿರುವ ಕ್ರೊವೇಷಿಯಾ (1998ರ ವಿಶ್ವಕಪ್ ಸೆಮಿಫೈನಲಿಸ್ಟ್) ಹಾಗೂ 28 ವರ್ಷದ ವನವಾಸದ ಬಳಿಕ 4ರ ಘಟ್ಟಕ್ಕೇರಿರುವ ಇಂಗ್ಲೆಂಡ್ (1990ರ ವಿಶ್ವಕಪ್ ಸೆಮಿಫೈನಲಿಸ್ಟ್) ತಂಡಗಳು ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್ ಪಂದ್ಯದ ಟಿಕೆಟ್ ಪಡೆಯಲಿದೆ. (ಏಜೆನ್ಸೀಸ್‌)