More

    ಶೇಪ್ ಸೌತ್ ಏಷ್ಯಾ ಶೃಂಗಸಭೆ, ಕರಾವಳಿ ಜಿಲ್ಲೆಗಳ ಪ್ರತಿನಿಧಿಯಾಗಿ ಸಚಿನ್ ಶೆಟ್ಟಿ ಭಾಗಿ

    ಮಂಗಳೂರು: ವರ್ಲ್ಡ್ ಇಕನಾಮಿಕ್ ಫೋರಂನಿಂದ ಸಂಸ್ಥಾಪಿಸಲ್ಪಟ್ಟ ಗ್ಲೋಬಲ್ ಶೇಪರ್ಸ್ ಸಮುದಾಯವು ಶೇಪ್ ಸೌತ್ ಏಷ್ಯಾ 2023 ಶೃಂಗಸಭೆಯನ್ನು ನೇಪಾಳದ ಕಠ್ಮಂಡುವಿನಲ್ಲಿ ಮೇ 19ರಿಂದ 21ರವರೆಗೆ ಆಯೋಜಿಸಿತ್ತು. ಕರಾವಳಿ ಜಿಲ್ಲೆಗಳ ಯುವ ಪ್ರತಿನಿಧಿಯಾಗಿ ಸಚಿನ್ ಶೆಟ್ಟಿ ನಲ್ಲೂರು ಭಾಗವಹಿಸಿದ್ದರು.

    ಸ್ವಚ್ಛ ಮಂಗಳೂರು ಅಭಿಯಾನದ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಉಂಟಾದ ಜನಜಾಗೃತಿ ಮತ್ತು ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳ ಕುರಿತು ಸಚಿನ್ ಶೆಟ್ಟಿ ಪ್ರೇರಣೆ ನೀಡಿದರು. ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಬದಲಾವಣೆಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಕುರಿತು ಕೈಗೊಳ್ಳಬಹುದಾದ ಯೋಚನೆ ಯೋಜನೆಗಳನ್ನು ಚರ್ಚಿಸಲಾಯಿತು.

    ಗ್ರೇಟ್ ಹಿಮಾಲಯನ್ ಫ್ಯೂಚರ್ ಫಾರ್ ಆಲ್ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಸಮ್ಮೇಳನದಲ್ಲಿ ಜಾಗತಿಕ ಒಳಿತಿಗಾಗಿ ಹಿಮಾಲಯದ ಭವಿಷ್ಯ ಅತಿ ಮುಖ್ಯ, ಈ ಹಿನ್ನೆಲೆಯಲ್ಲಿ ಹವಾಮಾನ ಸ್ಥಿತಿ ಸ್ಥಾಪಕತ್ವ ಸಾಧಿಸುವ ಉದ್ದೇಶದಿಂದ ಈ ಶೃಂಗಸಭೆಯ ಸಂದೇಶಗಳನ್ನು ಯುವ ಸಮುದಾಯಕ್ಕೆ ತಲುಪಿಸಬೇಕೆಂದು ಆಶಿಸಲಾಯಿತು.

    ಸಮಾರಂಭದಲ್ಲಿ ದಕ್ಷಿಣ ಏಷ್ಯಾ ಸೇರಿದಂತೆ ಪ್ರಪಂಚದಾದ್ಯಂತ ಒಟ್ಟು 30 ದೇಶಗಳ 120 ಯುವ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಸ್ತುತ ದಕ್ಷಿಣ ಏಷ್ಯಾ ದೇಶಗಳಲ್ಲಿ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಉಂಟಾಗಿರುವ ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಅಭಿವೃದ್ಧಿ ಹಂಚಿಕೆಯ ಸಮಸ್ಯೆಗಳು ಮತ್ತು ನವೀನ ದೃಷ್ಟಿಕೋನಗಳನ್ನು ರಚಿಸಲು ಬೇಕಾದ ಸಹಕಾರ ಅಗತ್ಯಗಳನ್ನು ಯುವ ಪ್ರತಿನಿಧಿಗಳಿಗೆ ವಿವರಿಸಲಾಯಿತು. ಇದರೊಂದಿಗೆ, ಬಡತನ, ಆರೋಗ್ಯ, ಶಿಕ್ಷಣ ಮತ್ತು ಲಿಂಗ ಅಸಮಾನತೆಯಂತಹ ಸಮಸ್ಯೆಗಳ ಪ್ರಭಾವದ ಕುರಿತು ಚರ್ಚಿಸಲು, ವಿವಿಧ ದೇಶದ ಯುವ ಪ್ರತಿನಿಧಿಗಳು ಒಂದು ವೇದಿಕೆಯಲ್ಲಿ ಸೇರಿದ್ದು ವಿಶೇಷ.

    ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ, ತುಳುನಾಡಿನ ಸಾಂಪ್ರದಾಯಿಕ ವಸ್ತ್ರವಾದ ಪಂಚೆ ಮತ್ತು ಸೂರ್ಯ-ಚಂದ್ರರಿರುವ ತುಳುನಾಡ ಶಾಲು ಧರಿಸಿ ಗಮನ ಸೆಳೆದರು. ಸಚಿನ್ ಶೆಟ್ಟಿ ಅವರು ಪ್ರಸ್ತುತ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts