ಶುಭಾಶಯ ಕೋರುವಾಗ ಟ್ವಿಟರ್​ನಲ್ಲಿ ಎಡವಟ್ಟು ಮಾಡಿಕೊಂಡ ರಾಜಸ್ಥಾನದ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅಶೋಕ್​ ಗೆಹ್ಲೋಟ್​ ಅವರಿಗೆ ಟ್ವಿಟರ್​ನಲ್ಲಿ ಶುಭಾಶಯ ಕೋರುವಾಗ ನಿಯೋಜಿತ ಡಿಸಿಎಂ ಸಚಿನ್​ ಪೈಲಟ್​ ಎಡವಟ್ಟು ಮಾಡಿಕೊಂಡಿದ್ದಾರೆ.

ಶುಭ ಸಂದೇಶ ಬರೆದು ಪ್ರಕಟಿಸುವ ವೇಳೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಅಶೋಕ್​ ಗೆಹ್ಲೋಟ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಆದರೆ, ತಾವು ಯಾವ ಅಶೋಕ್​ ಗೆಹ್ಲೋಟ್​ಗೆ ಟ್ಯಾಗ್​ ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿಲ್ಲ. ಅದೇ ಹೆಸರಿನ ಯಾವುದೋ ಬೇರೊಬ್ಬ ವ್ಯಕ್ತಿಗೆ ಅವರು ಟ್ಯಾಗ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ ತಾವು ಪ್ರಮಾದ ಮಾಡಿಕೊಂಡಿದ್ದರು. ಅವರು ಅದನ್ನು ಸರಿಪಡಿಸಿಕೊಂಡೂ ಇಲ್ಲ. ಹೀಗಾಗಿ ಅವರು ಟ್ವಿಟರ್​ನಲ್ಲಿ ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ.

ಈಗಾಗಲೇ ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ಅಶೋಕ್​ ಗೆಹ್ಲೋಟ್​ ಅವರ ಅಧಿಕೃತ ಟ್ವಿಟರ್​ ಖಾತೆ @ashokgehlot51 ಆಗಿದೆ.