ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದ ರೆಹಾನಾ ಫಾತೀಮಾರನ್ನು ಇಸ್ಲಾಂನಿಂದ ಉಚ್ಚಾಟನೆ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ಕಿಸ್‌ ಆಫ್‌ ಲವ್‌ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ರೆಹಾನಾ ಫಾತಿಮಾ ಅವರನ್ನು ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್‌ನಿಂದ ಉಚ್ಚಾಟನೆ ಮಾಡಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕೂಡ ಮಹಲ್ಲಾದ ಸದಸ್ಯತ್ವದಿಂದ ಹೊರಹಾಕಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಎ. ಪೂಕುಂಜು ತಿಳಿಸಿದ್ದಾರೆ.

ರೆಹಾನ್‌ ಅವರ ನಡೆಯಿಂದಾಗಿ ಲಕ್ಷಾಂತರ ಹಿಂದುಗಳು ಹಾಗೂ ಅವರ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ. ಅಲ್ಲದೆ ಈ ಹಿಂದೆ ಆಕೆ ಕಿಸ್ ಆಫ್ ಲವ್ ಕಾರ್ಯಕ್ರಮದ ಭಾಗವಾಗಿದ್ದರು. ಸಿನಿಮಾಗಳಲ್ಲಿ ನಗ್ನವಾಗಿ ನಟಿಸಿದ್ದಾರೆ. ಹಾಗಾಗಿ ಆಕೆಗೆ ಮುಸ್ಲಿಂ ಹೆಸರನ್ನು ಬಳಕೆ ಮಾಡಿಕೊಳ್ಳಲು ಯಾವ ಹಕ್ಕು ಇಲ್ಲ ಎಂದಿರುವ ಅವರು ಕೋಮು, ಧಾರ್ಮಿಕ ದ್ವೇಷ ಬಿತ್ತುತ್ತಿರುವ ರೆಹಾನಾ ವಿರುದ್ಧ ಸರ್ಕಾರ ಐಪಿಸಿ ಸೆಕ್ಷನ್ 153A ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)