ಶಬರಿಮಲೆ ಸಂಪ್ರದಾಯ ಧಿಕ್ಕರಿಸಿ ಪ್ರವೇಶ ಮಾಡುವುದು ಇಷ್ಟವಾಗುತ್ತಿಲ್ಲ: ಪಲಿಮಾರು ಶ್ರೀ

ಉಡುಪಿ: ಶಬರಿಮಲೆ ದೇಗುಲಕ್ಕೆ ಭಕ್ತಿಯಿಂದ ಹೋದರೆ ನಮ್ಮ ಅಡ್ಡಿಯಿಲ್ಲ. ಆದರೆ, ಸಂಪ್ರಧಾಯ ಧಿಕ್ಕರಿಸಿ ಹೋಗುವುದು ನಮಗೆ ಇಷ್ಟವಾಗುತ್ತಿಲ್ಲ ಎಂದು ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್​ ತೀರ್ಪನ್ನು ನಾವು ವಿರೋಧಿಸುತ್ತಿಲ್ಲ. ಅದನ್ನು ಪರಾಮರ್ಶೆ ಮಾಡಬೇಕು. ಭಕ್ತರಿಗೆ ಸಮಸ್ಯೆ ಆಗದಂತೆ ಕೋರ್ಟ್​ ತೀರ್ಮಾನಕ್ಕೆ ಬರಲಿ. ಕ್ಷೇತ್ರದ ಸಂಪ್ರದಾಯ, ನಿಯಮಾವಳಿಗಳಿಗೆ ಅವಕಾಶ ಕೊಡಬೇಕು ಎಂದರು.

ಶಬರಿಮಲೆಯಲ್ಲಿ ಮಹಿಳೆಯರಿಗೆ ಬಹಿಷ್ಕಾರ ಹಾಕಿಲ್ಲ. ಅವರಿಗೆ ನಿಗದಿತ ಅವಧಿ ನಿರ್ಧಾರ ಮಾಡಲಾಗಿದೆ. ಚರ್ಚೆ ಜಗಳಕ್ಕಿಂತ ಧಾರ್ಮಿಕ ಪ್ರೊಟೊಕಾಲ್​ ಅನುಸರಿಸಿ. ರಾಷ್ಟ್ರಪತಿ, ಪ್ರಧಾನಮಂತ್ರಿಗೂ ಪ್ರೊಟೊಕಾಲ್​ ಇರುತ್ತದೆ. ಶಬರಿಮಲೆಗೆ ಒಂದು ಪ್ರೊಟೊಕಾಲ್​ ಜಾರಿಯಲ್ಲಿದೆ. ಅದನ್ನು ಅನುಸರಿಸಿ ಎಂದು ಹೇಳಿದರು.