ಶಬರಿಮಲೆ ವಿವಾದ ಮಂಡಳಿ ಯುಟರ್ನ್

Latest News

ಕೊಲೆಗೆ ಪ್ರೇಮಪಾಶ ಮೂರನೇ ಪ್ರಮುಖ ಕಾರಣ!

ನವದೆಹಲಿ: ದೇಶದಲ್ಲಿ ನಡೆದ ಕೊಲೆಗಳಿಗೆ ಮುಖ್ಯವಾಗಿ ವೈಯಕ್ತಿಕ ದ್ವೇಷ, ಆಸ್ತಿ ಕಲಹ ಮತ್ತು ಪ್ರೀತಿ-ಪ್ರೇಮ ಪ್ರಮುಖ ಕಾರಣಗಳಾಗಿವೆ. ವೈಯಕ್ತಿಕ ದ್ವೇಷದ ಕೊಲೆಗಳ ಸಂಖ್ಯೆ ಶೇ.4.3 ಹಾಗೂ...

ಕೆಪಿಎಲ್ ಕ್ರಿಕೆಟ್ ಟೂರ್ನಿಯ ಮ್ಯಾಚ್ ಫಿಕ್ಸಿಂಗ್: ವಿಚಾರಣೆಗೆ ಸಿಸಿಬಿ ಬುಲಾವ್

ಬೆಂಗಳೂರು: ಕೆಪಿಎಲ್ ಕ್ರಿಕೆಟ್ ಟೂರ್ನಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಆಟಗಾರರು ಮತ್ತು ಫ್ರಾಂಚೈಸಿ ಮ್ಯಾನೇಜರ್​ಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ....

ಸಂಪುಟದಿಂದ ಕಾನೂನು ಸಚಿವರನ್ನು ಕೈಬಿಡಲು ಒತ್ತಾಯ

ವಿಜಯಪುರ: ರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆಯ ಕಾನೂನು ಹಾಗೂ ಸಂಸದೀಯ ಸಚಿವರಾದ ಮಾದುಸ್ವಾಮಿವರು ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದ ಸ್ವಾಮಿಗಳನ್ನು ಏಕವಚನದಲ್ಲಿ ನಿಂದಿಸಿ...

ಗೆಳತಿಗಾಗಿ ಸ್ವಿಜರ್ಲೆಂಡ್​ಗೆ ಹೋದವ ಸೇರಿದ್ದು ಪಾಕ್ ಜೈಲು!

ಹೈದರಾಬಾದ್: ಅಕ್ರಮ ಪ್ರವೇಶದ ಆರೋಪದಡಿ ಪಾಕಿಸ್ತಾನದ ಚೋಲಿಸ್ತಾನ್ ಮರುಭೂಮಿಯಲ್ಲಿ ಬಂಧಿತರಾಗಿರುವ ಇಬ್ಬರು ಭಾರತೀಯರಲ್ಲಿ ಓರ್ವ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪ್ರಶಾಂತ್ ವೈದನಮ್ ಎಂದು ತಿಳಿದುಬಂದಿದೆ. ಸಾಫ್ಟ್​ವೇರ್ ಇಂಜಿನಿಯರ್...

ಜೋಡೆತ್ತುಗಳ ಆರ್ಭಟಕ್ಕೆ ಕೈ ಮಂಕು

ಹಿರೇಕೆರೂರ: ಜಿಲ್ಲೆಯ ಹಿರೇಕೆರೂರ ಕ್ಷೇತ್ರದ ಉಪಚುನಾವಣೆ ಕಣವು ನಾಮಪತ್ರ ಸಲ್ಲಿಕೆಯೊಂದಿಗೆ ರಂಗೇರಿದೆ. ಬಿಜೆಪಿಯ ಜೋಡೆತ್ತುಗಳಾದ ಬಿ.ಸಿ.ಪಾಟೀಲ ಹಾಗೂ ಯು.ಬಿ.ಬಣಕಾರ ಅರ್ಭಟದ ಹಿನ್ನೆಲೆಯಲ್ಲಿ, ಕ್ಷೇತ್ರದ...

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನಾ ಅರ್ಜಿ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. 10-50 ವಯಸ್ಸಿನ ಮಹಿಳೆಯರಿಗೆ ದರ್ಶನಕ್ಕೆ ಅವಕಾಶಕೊಡಬಾರದೆಂಬ ತಂತ್ರಿಗಳ ಬೆಂಬಲಕ್ಕೆ ನಿಂತಿದ್ದ ತಿರುವಾಂಕೂರು ದೇವಸ್ವಂ ಮಂಡಳಿ ದಿಢೀರ್ ನಿಲುವು ಬದಲಿಸಿ ಸುಪ್ರೀಂಕೋರ್ಟ್​ಗೆ ಹೇಳಿಕೆ ನೀಡಿರುವುದು ಕೋಟ್ಯಂತರ ಭಕ್ತರಲ್ಲಿ ಅನುಮಾನ, ತಲ್ಲಣ ಮೂಡಿಸಿದೆ. ಈ ನಡುವೆ, ಮರುಪರಿಶೀಲನಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಸುಪ್ರಿಂಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 56 ಮರುಪರಿಶೀಲನಾ ಅರ್ಜಿಗಳು ಮತ್ತು 4 ರಿಟ್ ಅರ್ಜಿಗಳ ವಿಚಾರಣೆಯನ್ನು ಬುಧವಾರ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪಂಚಸದಸ್ಯ ಪೀಠ ನಡೆಸಿತು. ಪೀಠದಲ್ಲಿ ನ್ಯಾ. ರೊಹಿಂಗ್ಟನ್ ನಾರಿಮನ್, ನ್ಯಾ. ಎ.ಎಂ. ಖಾನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಇಂದೂ ಮಲ್ಹೋತ್ರಾ ಇದ್ದರು.

ನಾಯರ್ ಸರ್ವೀಸ್ ಸೊಸೈಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಾಶರನ್ ‘ಶಬರಿಮಲೆ ಪದ್ಧತಿಯನ್ನು ಅಸ್ಪಶ್ಯತೆಗೆ ಹೋಲಿಸ ಲಾಗದು. ಇದೊಂದು ಧಾರ್ವಿುಕ ಸಂಪ್ರದಾಯ ಮಾತ್ರ’ ಎಂದರು. ಕೇರಳ ಸರ್ಕಾರ ಪರ ವಾದಿಸಿದ ವಕೀಲ ಜೈದೀಪ್ ಗುಪ್ತಾ ‘ತೀರ್ಪ ಮರುಪರಿಶೀಲನೆ ಅಗತ್ಯವಿಲ್ಲ’ ಎಂದರು.

ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ, ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು 2018 ಸೆ.28ರಂದು ತೀರ್ಪು ನೀಡಿತ್ತು. ಲಿಂಗ ತಾರತಮ್ಯ ಸಲ್ಲದು ಎಂದು 4:1 ಅನುಪಾತದಲ್ಲಿ ತೀರ್ಪು ಹೊರಬಿದ್ದಿತ್ತು.

ಹಿರಿಯ ವಕೀಲ ವಿ. ಗಿರಿ ವಾದ(ಭಕ್ತರ ಪರ):

# ಅಯ್ಯಪ್ಪ ಸ್ವಾಮಿ ವಿಶೇಷ ವ್ಯಕ್ತಿತ್ವ ಹೊಂದಿದ್ದು, ನೈಷ್ಟಿಕ ಬ್ರಹ್ಮಚಾರಿ

# ವ್ಯಕ್ತಿತ್ವ ರಕ್ಷಣೆ ಹೊಣೆಗಾರಿಕೆ ದೇವಸ್ಥಾನ ರೂಢಿಸಿ ಕೊಂಡು ಬಂದಿರುವ ಸಂಪ್ರದಾಯದ ಮೇಲಿದೆ

# ಶಬರಿಮಲೆಗೆ ಬರುವವರು ಅಲ್ಲಿನ ಸಂಪ್ರದಾಯವನ್ನು ಪಾಲಿಸಬೇಕೆ ಹೊರತು ಪ್ರಶ್ನಿಸುವುದಲ್ಲ.

# ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ತಾವು ಭಕ್ತರೆಂದು ಹೇಳಿಕೊಂಡಿಲ್ಲ.

ದೇವಸ್ವಂ ಮಂಡಳಿ ಹೇಳಿದ್ದೇನು?
‘ದೇವಸ್ಥಾನ ಪ್ರವೇಶಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ. ಸಮಾನತೆ ಆಧಾರದ ಮೇಲೆ ಎಲ್ಲ ಪದ್ಧತಿಗಳಿರಬೇಕು. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ’ ಎಂದು ಮಂಡಳಿ ನ್ಯಾಯಪೀಠದ ಎದುರು ನಿಲುವು ಸ್ಪಷ್ಟಪಡಿಸಿತು. ಮಂಡಳಿ ಪರ ವಕೀಲ ರಾಕೇಶ್ ದ್ವಿವೇದಿ, ‘ದೇವಸ್ಥಾನಕ್ಕೆ ಸಂಬಂಧಿತ ಪುರಾತನ ದಾಖಲೆಗಳು ಸಂಪ್ರದಾಯದಲ್ಲಿ ಮಹಿಳೆಯರನ್ನು ಹೊರಗಿರಿಸುವ ಬಗ್ಗೆ ಉಲ್ಲೇಖಿಸಿಲ್ಲ’ ಎಂದರು. ಮಂಡಳಿ ನಿಲುವು ಪೂರ್ಣ ಬದಲಾಗಿದೆಯಲ್ಲ ಏಕೆ ಎಂದು ವಿಚಾರಣೆ ವೇಳೆ ನ್ಯಾ, ಇಂದೂ ಮಲ್ಹೋತ್ರಾ ಪ್ರಶ್ನಿಸಿದರು. ‘ನಾವು ಸಮಾಜದಲ್ಲಿ ಪರಿವರ್ತನೆ ತಂದು ಎಲ್ಲ ಕ್ಷೇತ್ರಗಳಿಗೆ ಮಹಿಳೆಯರಿಗೆ ಅವಕಾಶ ನೀಡಬೇಕಿದೆ’ ಎಂದು ಮಂಡಳಿ ಸಮರ್ಥನೆ ನೀಡಿತು.

ನಾನು ಮಂಡಳಿ ಅಧ್ಯಕ್ಷನಾಗಿದ್ದಾಗ ಅಲ್ಲಿ ರಾಜಕೀಯ ಇರಲಿಲ್ಲ. ಆದರೆ ಪ್ರಸ್ತುತ ಇರುವ ಮಂಡಳಿ ಸರ್ಕಾರದಲ್ಲಿನ ಪ್ರಭಾವಿ ನಾಯಕರ ಆಣತಿಯಂತೆ ಕುಣಿಯುತ್ತಿದೆ. ನಿರ್ಧಾರದ ಯುಟರ್ನ್ ಇದಕ್ಕೆ ಸಾಕ್ಷಿ.

| ಪ್ರಯಾರ್ ಗೋಪಾಲಕೃಷ್ಣನ್ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ

ರೆಹನಾ ಫಾತಿಮಾಗೆ ಶಿಕ್ಷೆ

ಕಾಸರಗೋಡು: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ಪ್ರತಿಭಟನೆ ಎದುರಿಸಿದ್ದ ರೆಹನಾ ಫಾತಿಮಾ ಮೇಲೆ ಚೆಕ್ ಅಮಾನ್ಯ ಪ್ರಕರಣದಲ್ಲಿ ಆಲಪ್ಪುಳ ಜಿಲ್ಲಾ ಸೆಷನ್ಸ್ ನ್ಯಾಯಾಲಯ ದಂಡ ಹಾಗೂ ಕಲಾಪ ಮುಗಿಯುವವರೆಗೆ ನ್ಯಾಯಾಲಯದಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದೆ. 2 ಲಕ್ಷ ರೂ. ಮೊತ್ತದ ಚೆಕ್ ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ನಿವಾಸಿ ರೆಹನಾ ಫಾತಿಮಾ ವಿರುದ್ಧ ಆಲಪ್ಪುಳ ನಿವಾಸಿ ಆರ್.ಅನಿಲ್ ದೂರು ನೀಡಿದ್ದರು. 2014ರಲ್ಲಿ ಆಲಪ್ಪುಳ ಸಿಜೆಎಂ ನ್ಯಾಯಾಲಯ ಮೂರು ತಿಂಗಳ ಜೈಲು, 10 ಸಾವಿರ ರೂ. ದಂಡ ಸಹಿತ 2.10 ಲಕ್ಷ ರೂ. ಪಾವತಿಸುವಂತೆ ರೆಹಾನಾಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರೆಹನಾ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ರದ್ದುಪಡಿಸಿ, ದಿನದ ಕಲಾಪ ಮುಗಿಯುವವರೆಗೆ ನಿಲ್ಲುವ ಶಿಕ್ಷೆ ಹಾಗೂ ದಂಡ ಸಹಿತ 2.10 ಲಕ್ಷ ರೂ. ನೀಡುವಂತೆ ಆದೇಶಿಸಿತು.

ಫೆ.12ಕ್ಕೆ ಅಯ್ಯಪ್ಪ ಸನ್ನಿಧಾನದ ಬಾಗಿಲು ತೆರೆಯಲಿದೆ. ಎಲ್ಲ ವಯೋಮಾನದ ಮಹಿಳೆಯರಿಗೆ ಈ ವೇಳೆ ಪ್ರವೇಶ ಸಿಗಲೇಬೇಕು.

| ವಕೀಲೆ ಇಂದಿರಾ ಜೈಸಿಂಗ್ (ಕನಕ ದುರ್ಗಾ, ಬಿಂದು ಪರ ವಾದ)

ವಕೀಲರ ವಾದ

# ಧರ್ಮ ನಂಬಿಕೆ ಆಧರಿತ

# ಹಿಂದು ಸಮುದಾಯದ ಕೆಲವರು ಅಯ್ಯಪ್ಪಸ್ವಾಮಿ ಸಂಪ್ರದಾಯವನ್ನು ನಂಬಿದ್ದಾರೆ

# ಹಾಗಾಗಿ ಸಮುದಾಯವೇ ಪದ್ಧತಿ, ಸಂಪ್ರದಾಯ ನಿರ್ಧರಿಸಬೇಕು. ಕೋರ್ಟ್ ನಿರ್ಧರಿಸಲು ಆಗಲ್ಲ –

# ರ್ಪಿನ ಬಳಿಕ ಶಬರಿಮಲೆಯಲ್ಲಿ ಶಾಂತಿ ಕದಡಿದ್ದನ್ನು ನಾವು ಮಾಧ್ಯಮಗಳಲ್ಲಿ ಗಮನಿಸಿದ್ದೇವೆ

# ಸಮುದಾಯ ಸಂಪ್ರದಾಯ ಬದಲಾವಣೆಗೆ ತೀರ್ವನಿಸುವ ತನಕ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲ್ಲ.

ಮನೆ ತೊರೆದ ಕನಕ ದುರ್ಗಾ ಕುಟುಂಬ

ಕಾಸರಗೋಡು: ಶಬರಿಮಲೆ ಪ್ರವೇಶಿಸಿ ವಿವಾದಕ್ಕೀಡಾಗಿರುವ ಕನಕದುರ್ಗಾ ಸ್ಥಳೀಯ ನ್ಯಾಯಾಲಯದ ತೀರ್ಪಿ ನನ್ವಯ ಮಲಪ್ಪುರಂ ಅಂಗಾಡಿ ಪುರದಲ್ಲಿರುವ ಪತಿ ಮನೆಗೆ ವಾಪಸಾಗಿದ್ದಾಳೆ. ಆದರೆ ಆಕೆ ಮನೆಗೆ ಆಗಮಿಸುತ್ತಿದ್ದಂತೆ ಪತಿ ಕೃಷ್ಣನುಣ್ಣಿ ತನ್ನ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಬೇರೆಡೆ ತೆರಳಿದ್ದಾರೆ. ಪೊಲೀಸರು ಬೀಗ ಒಡೆದು ಕನಕದುರ್ಗಳಿಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಈ ಮುಂಚೆ, ಕುಟುಂಬ ದವರು ಹೊರಹಾಕಿದ ಬಳಿಕ ಕನಕದುರ್ಗ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಕೆ ಮನೆಯಲ್ಲಿ ವಾಸಿಸಲು ಪತಿ, ಸಂಬಂಧಿಕರು ಅಡ್ಡಿ ಮಾಡುವಂತಿಲ್ಲ. ಪತಿಯ ಹೆಸರಿನಲ್ಲಿರುವ ಮನೆಯನ್ನು ಮಾರಾಟ ಅಥವಾ ಬಾಡಿಗೆಗೂ ನೀಡುವಂತಿಲ್ಲ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ತನ್ನ ಪರ ತೀರ್ಪು ಬಂದ ಹಿನ್ನೆಲೆ ಮಂಗಳವಾರ ಕನಕದುರ್ಗಾ ಪತಿ ಮನೆಗೆ ಪೊಲೀಸ್ ರಕ್ಷಣೆ ಯೊಂದಿಗೆ ಆಗಮಿಸಿದ್ದರು. ಕೋರ್ಟ್ ಸೂಚನೆ ಹಿನ್ನೆಲೆ ಆಕೆಗೆ ರಕ್ಷಣೆ ಮುಂದುವರಿ ಯುತ್ತಿದ್ದು, ಪೊಲೀಸ್ ಬೆಂಗಾವಲಿ ನೊಂದಿಗೆ ಕೆಲಸಕ್ಕೂ ತೆರಳುತ್ತಿದ್ದಾರೆ.

- Advertisement -

Stay connected

278,614FansLike
572FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಹೆಬ್ಬಾವು-ಚಿರತೆ ನಡುವಿನ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...