ಕೌತುಕ ಮೂಡಿಸಿದ ಶ್ರದ್ಧಾ ಸಾಹೋ ಲುಕ್

ಬಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ಶ್ರದ್ಧಾ ಕಪೂರ್ ‘ಸಾಹೋ’ ಚಿತ್ರದ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಈ ಸಿನಿಮಾದಲ್ಲಿ ಅವರು ನಿಭಾಯಿಸಿರುವ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕೌತುಕವಿದೆ. ಈಗಾಗಲೇ ಬಂದಿರುವ ಟೀಸರ್​ಗಳಲ್ಲಿ ಶ್ರದ್ಧಾಗಿಂತಲೂ ನಾಯಕ ನಟ ಪ್ರಭಾಸ್ ಮಿಂಚಿದ್ದೇ ಹೆಚ್ಚು. ಈಗ ಹೊಸದೊಂದು ಪೋಸ್ಟರ್ ಹೊರಬಂದಿದ್ದು, ಕೈಯಲ್ಲಿ ಗನ್ ಹಿಡಿದು ಖಡಕ್ ಆಗಿ ಪೋಸ್ ನೀಡಿದ್ದಾರೆ ಶ್ರದ್ಧಾ. ಈ ಪೋಸ್ಟರ್ ಬಿಡುಗಡೆ ಮಾಡುವುದರ ಜತೆಗೆ ಚಿತ್ರದ ಕುರಿತು ಒಂದು ಹೊಸ ಸುದ್ದಿಯನ್ನೂ ನೀಡಿದ್ದಾರೆ ನಿರ್ವಪಕರು. ಜೂ.13ರಂದು ಹೊಸ ಟೀಸರ್ ಬಿಡುಗಡೆ ಆಗಲಿದೆ ಎಂಬುದನ್ನೂ ತಿಳಿಸಿದ್ದಾರೆ. ಈ ಚಿತ್ರದ ಬಜೆಟ್ ಅಂದಾಜು 300 ಕೋಟಿ ರೂ. ಎನ್ನಲಾಗಿದೆ. ಹಲವು ದಿನಗಳ ಹಿಂದೆ ಬಿಡುಗಡೆಯಾದ ಮೇಕಿಂಗ್ ವಿಡಿಯೋಗಳೇ ಮೈ ನವಿರೇಳಿಸುವಂತಿವೆ. ಭರ್ಜರಿ ಆಕ್ಷನ್ ದೃಶ್ಯಗಳಿವೆ ಎಂಬುದಕ್ಕೆ ಆ ಮೂಲಕ ಸಾಕ್ಷಿ ಸಿಕ್ಕಿದೆ. ಚಿತ್ರಕ್ಕೆ ಸುಜೀತ್ ರೆಡ್ಡಿ ನಿರ್ದೇಶನ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 15ರಂದು ತೆರೆಕಾಣಲಿದೆ. – ಏಜೆನ್ಸೀಸ್

Leave a Reply

Your email address will not be published. Required fields are marked *