ಸಂಭ್ರಮದ ಹಿಂದೆಯೇ ಬಂದೆರಗಿದ ಸಾವು! ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ

1 Min Read
ಸಂಭ್ರಮದ ಹಿಂದೆಯೇ ಬಂದೆರಗಿದ ಸಾವು! ಬಾಲ್ಯದ ಕನಸು ನನಸಾದ ಖುಷಿಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ

ಪಂಡರಾಪುರ (ಮಹಾರಾಷ್ಟ್ರ): ಯಾರಿಗೂ ತೊಂದರೆ ಕೊಡದೇ ಹೃದಯಾಘಾತದಿಂದ ಒಂದೇ ಬಾರಿ ಸಾಯುವುದೇ ಎಲ್ಲಕ್ಕಿಂತ ಉತ್ತಮ ಸಾವು ಎಂದು ಹಲವರು ಅಂದುಕೊಳ್ಳುವುದುಂಟು. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವೇ ಹೃದಯಾಘಾತದಿಂದ ಮೃತಪಡುತ್ತಿರುವ ಘಟನೆಗಳು ಸಂಭವಿಸುತ್ತಿರುವುದು ಮಾತ್ರ ಆಘಾತಕಾರಿಯಾಗಿದೆ.

ಜಿಮ್​ನಲ್ಲಿ ವರ್ಕ್​ಔಟ್​ ಮಾಡುವಾಗಲೇ ಹಲವು ಯುವಕರು ಮೃತಪಟ್ಟಿದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬಾಲ್ಯದ ಕನಸನ್ನು ನನಸು ಮಾಡಿರುವ ಖುಷಿಯಲ್ಲಿದ್ದಾಗಲೇ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಇದು ನಡೆದಿರುವುದು ಮಹಾರಾಷ್ಟ್ರದ ಪಂಢರಪುರ ತಾಲೂಕಿನ ವಖ್ರಿ ಎಂಬ ಗ್ರಾಮದಲ್ಲಿ. 22 ವರ್ಷದ ಕುಸ್ತಿಪಟು ಮಾರುತಿ ಸುರವಾಸೆ ತನ್ನ ಸಂಭ್ರಮವನ್ನು ಮನಸಾರೆ ಆಚರಿಸುವ ಮುನ್ನವೇ ಇಹಲೋಹ ತ್ಯಜಿಸಿದ್ದಾನೆ! ಬಾಲ್ಯದಿಂದಲೂ ಕುಸ್ತಿ ಪಟು ಆಗಬೇಕು ಎಂಬ ಕನಸು ಹೊತ್ತಿದ್ದ ಮಾರುತಿಯನ್ನು ಅವನ ಪಾಲಕರು ತರಬೇತಿಗಾಗಿ ಕೊಲ್ಲಾಪುರಕ್ಕೆ ಕಳುಹಿಸಿದ್ದರು. ಅಲ್ಲಿ ಕುಸ್ತಿಯಲ್ಲಿ ಚೆನ್ನಾಗಿ ಪಳಗಿದ್ದ ಮಾರುತಿ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಘನಾನುಘಟಿಗಳ ಎದುರು ಆಡಿದ್ದ.

ಎಲ್ಲರನ್ನೂ ಸೋಲಿಸಿ ವಿಜೇತನಾದ. ಬಾಲ್ಯದ ಕನಸು ನನಸಾಗುತ್ತಿದ್ದಂತೆಯೇ ಆತ ಸೇರಿದಂತೆ ಅವನ ಕುಟುಂಬಸ್ಥರು ಸಂಭ್ರಮಿಸಿದರು. ಇದಾದ ಕೆಲ ಹೊತ್ತಿನಲ್ಲಿಯೇ ಅಲ್ಲಿಯೇ ಕುಸಿದು ಬಿದ್ದಿದ್ದಾನೆ ಮಾರುತಿ. ಆಟವಾಡಿ ಸುಸ್ತಾದ ಕಾರಣ ಬಿದ್ದಿರಬಹುದು ಎಂದು ಅಂದುಕೊಂಡ ಮನೆಯವರು ಆತನನ್ನು ಎಬ್ಬಿಸಲು ಹೋದರೆ ಅದಾಗಲೇ ಆತ ಕೊನೆಯುಸಿರೆಳೆದಿದ್ದು ತಿಳಿದುಬಂದಿದೆ. ಸಂಭ್ರಮದ ಮನೆಯಲ್ಲೀಗ ಸೂತಕದ ಛಾಯೆ. ಮಗನನ್ನು ಕಳೆದುಕೊಂಡ ಅಪ್ಪ-ಅಮ್ಮನ ಕಣ್ಣೀರು ನೋಡಲು ಆಗುತ್ತಿಲ್ಲ (ಏಜೆನ್ಸೀಸ್​)

VIDEO: ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ಕಾರ್ಣಿಕೋತ್ಸವದಲ್ಲಿ ‘ಯುವ ಸಿಎಂ’ ಕುರಿತು ಭವಿಷ್ಯವಾಣಿ…

ಬೆಟ್ಟಿಂಗ್​ ಜಾಹೀರಾತುದಾರರಿಗೆ ಶಾಕ್​ ನೀಡಿದ ಕೇಂದ್ರ ಸರ್ಕಾರ: ಇನ್ಮುಂದೆ ನಿಷೇಧ- ಇಲ್ಲದಿದ್ರೆ ಕಠಿಣ ಕ್ರಮ

See also  ಬಸ್ಸುಗಳಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ; ಬಿಎಂಟಿ‌ಸಿ ಸ್ಪಷ್ಟನೆ
Share This Article