ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ ಜಗತ್ತು ಸುತ್ತಿದ ಕಿರಿಯ ಮಹಿಳಾ ಪೈಲಟ್‌- ದಾಖಲೆ ಬರೆದ ಯುವತಿ

ಬ್ರುಸೆಲ್ಸ್: ಬ್ರಿಟಿಷ್-ಬೆಲ್ಜಿಯಂ ಮೂಲದ ಝಾರಾ ಎಂಬ ಯುವತಿ ವಿಶ್ವಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿದ್ದು, ಈ ಮೂಲಕ ಜಗತ್ತಿನ ಅತ್ಯಂತ ಕಿರಿಯ ಪೈಲಟ್‌ ಎನಿಸಿದ್ದಾಳೆ. ಇದಕ್ಕೂ ಮುನ್ನ ಅಂದರೆ 2017ರಲ್ಲಿ ಅಫ್ಘಾನ್ ಮೂಲದ ಅಮೆರಿಕ ಪ್ರಜೆ ಶಾಸ್ತಾ ವೈಸ್ ತಮ್ಮ 30ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನದಲ್ಲಿ ಹಾರಾಟ ಮಾಡಿ ದಾಖಲೆ ಬರೆದಿದ್ದರು. ಈ ದಾಖಲೆ ಹಿಂದಿಕ್ಕಿದ 19 ವರ್ಷದ ಝಾರಾ ರುದರ್‌ಫೋರ್ಡ್ ಇಂಥದ್ದೊಂದು ಕೀರ್ತಿಗೆ ಪಾತ್ರಳಾಗಿದ್ದಾಳೆ. ಮೈಕ್ರೋಲೈಟ್ ವಿಮಾನದಲ್ಲಿ ಏಕಾಂಗಿಯಾಗಿ ಈಕೆ ಹಾರಾಟ ನಡೆಸಿದ್ದು, ಪ್ರಪಂಚದಾದ್ಯಂತ … Continue reading ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ ಜಗತ್ತು ಸುತ್ತಿದ ಕಿರಿಯ ಮಹಿಳಾ ಪೈಲಟ್‌- ದಾಖಲೆ ಬರೆದ ಯುವತಿ