ನವದೆಹಲಿ: ಲಾಕ್‌ಡೌನ್, ಕರೊನಾ ವೈರಸ್ ಎಲ್ಲವೂ ಪ್ರತಿ ದೇಶದ ಆರ್ಥಿಕತೆಯನ್ನು ಕಸಿದಿದೆ, ಇದರಿಂದ ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆ ಕುಸಿದಿದೆ ಎಂದೆಲ್ಲಾ ನೀವು ಕೇಳಿಬಹುದು.
ಆದರೆ ಅದೇ ಇನ್ನೊಂದೆಡೆ, ಕೆಲವು ಕುಬೇರರು ಮಾತ್ರ ಇದೇ ಅವಧಿಯಲ್ಲಿ ಇನ್ನಷ್ಟು, ಮತ್ತಷ್ಟು ಪ್ರಯೋಜನ ಪಡೆದುಕೊಂಡು ತಮ್ಮ ಸಂಪತ್ತನ್ನು ವಿಸ್ತರಿಸಿಕೊಂಡಿದ್ದಾರೆ. ಅವರ ಗಳಿಕೆಯು ದುಪ್ಪಟ್ಟು, 3-4 ಪಟ್ಟುಗಳಾಗಿವೆ.
ಅಂಥದ್ದರಲ್ಲಿ ವಿಶ್ವದ ನಂ.1 ಪಟ್ಟ ಸದ್ಯ ದಕ್ಕಿರುವುದು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರಿಗೆ. ಆಗಸ್ಟ್ 26ರವರೆಗೆ ಇವರು 200 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಗಳಿಸಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಭಾರತೀಯ ರೂಪಾಯಿಗಳಲ್ಲಿ ಇದನ್ನು ಹೇಳುವುದಾದರೆ, ಸುಮಾರು 15 ಲಕ್ಷ ಕೋಟಿ ರೂಪಾಯಿ. (ಒಂದು ಬಿಲಿಯನ್ ಡಾಲರ್ ಎಂದರೆ ಸುಮಾರು ಏಳೂವರೆ ಸಾವಿರ ಕೋಟಿ).
1995ರಲ್ಲಿ ಅಮೆಜಾನ್ ಸಂಸ್ಥೆಯನ್ನು ಹುಟ್ಟುಹಾಕಿದ ಜೆಫ್ ಬೆಜೋಸ್, ಅಲ್ಪ ಅವಧಿಯಲ್ಲಿ ವಿಶ್ವದ ನಂ.1 ಸಿರಿವಂತ ಎನಿಸಿಕೊಂಡಿದ್ದಾರೆ.ಈ ಮೂಲಕ ಇವರು ಇಲ್ಲಿಯವರೆಗಿನ ಇತಿಹಾಸದಲ್ಲೇ ಮೊದಲ ಬಾರಿಗೆ 200 ಬಿಲಿಯನ್ ಡಾಲರ್ಗಳಿಗೂ ಜಾಸ್ತಿ ಸಂಪತ್ತು ಹೊದಿರುವ ಮೊದಲ ವ್ಯಕ್ತಿ ಎನಿಸಿಕೊಡಿದ್ದಾರೆ.
ಅಮೆರಿಕದಲ್ಲಿ ಕರೊನಾವೈರಸ್ ಅತ್ಯಂತ ಹೆಚ್ಚು ಪೀಡಿಸಿದ್ದರೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಷೇರುಗಳು ಗಗನಕ್ಕೇರಿತ್ತು. ಆಗಸ್ಟ್ 26ರಂದು, ಅಮೆಜಾನ್‌ನ ಪ್ರತಿ ಷೇರಿಗೆ ಶೇಕಡಾ 2.3ರಷ್ಟು ಏರಿಕೆಯಾಗಿ, 3,423 ಡಾಲರ್‌ಗೆ ತಲುಪಿದೆ, ಈ ಪ್ರಕ್ರಿಯೆಯಲ್ಲಿ ಜೆಫ್ ಬೆಜೋಸ್ ಸಂಪತ್ತು 200 ಬಿಲಿಯನ್ ನಿವ್ವಳ ಮೌಲ್ಯವನ್ನು ತಲುಪಿದೆ ಎನ್ನಲಾಗಿದೆ.
ಇದನ್ನೂ ಓದಿ: ಡಿಜೆಹಳ್ಳಿ ಗಲಭೆಕೋರರಿಂದ ನಷ್ಟ ವಸೂಲಿಗೆ ಹೈಕೋರ್ಟ್‌ನಿಂದ ಕ್ಲೇಮ್ ಕಮಿಷನರ್ ನೇಮಕ
ಫೋರ್ಬ್ಸ್ ವರದಿಯ ಪ್ರಕಾರ, ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್‌ಗೇಟ್ಸ್‌ಗಿಂತ , 90 ಬಿಲಿಯನ್ ಡಾಲರ್ ಹೆಚ್ಚಿನ ಶ್ರೀಮಂತರಾಗಿದ್ದಾರೆ. ಬಿಲ್‌ಗೇಟ್ಸ್ ಪ್ರಸ್ತುತ 116.1 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.
ಜೆಫ್ ಬೆಜೋಸ್ ಅವರ ಬಗ್ಗೆ ಇನ್ನೂ ಒಂದು ಕುತೂಹಲವಿದೆ. ಅದೇನೆಂದರೆ ಇವರ ಪತ್ನಿ ಮೆಕಂಜಿ ಸ್ಕಾಟ್ ಇತ್ತೀಚೆಗೆ ವಿಚ್ಛೇದನ ಪಡೆದರು. ಆಗ ಜೆಫ್ ಬೆಜೋಸ್ ತಮ್ಮ ಸಂಪತ್ತಿನ ಶೇಕಡಾ 25ರಷ್ಟನ್ನು ಪತ್ನಿಗೆ ಜೀವನಾಂಶವಾಗಿ ನೀಡಿದರು.
ಜೀವನಾಂಶ ಪಡೆದ ಮೇಲೆ ಇದೀಗ ಮೆಕಂಜಿ ಅವರು ವಿಶ್ವದ 14ನೇ ಅತಿ ಶ್ರೀಮಂತ ವ್ಯಕ್ತಿ ಹಾಗೂ ಎರಡನೇ ಅತಿ ಸಿರಿವಂತ ಮಹಿಳೆ ಎನಿಸಿಕೊಂಡಿದ್ದಾರೆ!
ಅಂದಹಾಗೆ ಭಾರತದಲ್ಲಿ ಮುಖೇಶ್ ಅಂಬಾನಿ ಸಂಪತ್ತು ಕೂಡ ಇದೇ ಅವಧಿಯಲ್ಲಿ ಹೆಚ್ಚಾಗಿದ್ದು, ನಂ.1 ಪಟ್ಟ ಗಳಿಸಿಕೊಂಡಿದ್ದಾರೆ.
ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!
ಕೈಕೊಟ್ಟ ಹೆಂಡತಿಯನ್ನು ವಿವಸ್ತ್ರಗೊಳಿಸಿ ಪ್ರೇಯಸಿಯ ಮುಂದೆ ಭಯಾನಕ ವಿಕೃತಿ ಮೆರೆದ!
‘ಈ ಗಂಡ ನನ್ ಜತೆ ಜಗಳ ಆಡೋದೇ ಇಲ್ಲ, ಇವ್ನ ಜತೆ ಸಂಸಾರ ನಡೆಸೋಕೆ ನನ್ ಕೈಲಾಗಲ್ಲ!’