More

  ಕೊಟ್ಟ ಮಾತಿನಂತೆ ನಡೆಯದ ಕಾಂಗ್ರೆಸ್ ಸರಕಾರ – ವಿಪ ಸದಸ್ಯ ಎಸ್.ವಿ. ಸಂಕನೂರ

  ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಉದ್ದೇಶದಿಂದ ಕರಾರು ರಹಿತವಾದ ಐದು ಗ್ಯಾರಂಟಿ ಕಾರ್ಡಗಳನ್ನು ಹಂಚಿಕೆ ಮಾಡಿ, ಈಗ ಅಧಿಕಾರಕ್ಕೆ ಬಂದ ನಂತರ ಮಾನದಂಡಗಳನ್ನು ವಿಧಿಸುವುದರ ಮೂಲಕ ಜನರಿಗೆ ಮೋಸ ಮಾಡುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ತೀವ್ರವಾಗಿ ಖಂಡಿಸಿದ್ದಾರೆ.

  ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ೨೪ ಘಂಟೆಯಲ್ಲಿ ಹಾಗೂ ಮೊದಲನೇ ಕ್ಯಾಬಿನೆಟ್‌ನಲ್ಲಿ ಜಾರಿ ಮಾಡುವುದಾಗಿ ಜನರಿಗೆ ಭರವಸೆ ನೀಡಿ ವೋಟು ಪಡೆದು, ಈಗ ಅಧಿಕಾರ ವಹಿಸಿಕೊಂಡು ೧೩ ದಿನಗಳಾದರೂ ಇನ್ನೂ ಅಂತಿಮ ನಿರ್ಧಾರಕ್ಕೆ ಬರದೇ ಇರುವುದು, ಕೊಟ್ಟ ಮಾತಿಗೆ ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ತಿಳಿದು ಬರುತ್ತದೆ ಎಂದು ಹೇಳಿದರು.

  ವಿಶೇಷವಾಗಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ರೂ. ೩೦೦೦, ಡಿಪ್ಲೋಮಾದವರಿಗೆ ರೂ. ೧೫೦೦ ಕೊಡುವುದಾಗಿ ಭರವಸೆ ನೀಡಿ ಸದ್ಯ ಈ ಶೈಕ್ಷಣಿಕ ವರ್ಷದ ಸಾಲಿನಲ್ಲಿ ಪದವಿ ಪರೀಕ್ಷೆ ಬರೆಯುವವರಿಗೆ ಕೇವಲ ೨ ವರ್ಷ ಮಾತ್ರ ಕೊಡುವುದಾಗಿ ಹೇಳುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ. ಅದೇ ರೀತಿ ೨೦೦ ಯುನಿಟ್ ವಿದ್ಯುತ್ ಉಚಿತ ಹಾಗೂ ಮನೆಯ ಯಜಮಾನಿಗೆ ಮಾಸಿಕ ರೂ. ೨೦೦೦ ಕೊಡುವುದಕ್ಕೆ ಕರಾರುಗಳನ್ನು ವಿಧಿಸುತ್ತಿರುವುದು ಕೊಟ್ಟ ಮಾತಿನಂತೆ ನಡೆಯದ ಕಾಂಗ್ರೆಸ್ ಸರಕಾರವನ್ನು ಸುಳ್ಳಿನ ಸರಕಾರ ಎಂದು ಬಣ್ಣಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಸರ್ಕಾರ ಐದು ಗ್ಯಾರಂಟಿಗಳನ್ನು ಕರಾರುರಹಿತವಾಗಿ ನೀಡಲು ವಿಶೇಷವಾಗಿ ಎಲ್ಲ ನಿರುದ್ಯೋಗಿ ಪದವೀಧರರಿಗೆ ಯುವನಿಧಿ ನೀಡಲು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts