More

    ಮಹಿಳಾ ಇಂಜಿನಿಯರಿಂಗ್​ ಪದವೀಧರರಿಗೆ ಗುಡ್​ ನ್ಯೂಸ್​: ಎನ್​ಟಿಪಿಸಿಯಲ್ಲಿ 50 ಹುದ್ದೆಗಳಿಗೆ ಆಹ್ವಾನ

    ನ್ಯಾಷನಲ್​ ಥರ್ಮಲ್​ ಪವರ್​ ಕಾರ್ಪೋರೇಷನ್​ ಲಿಮಿಟೆಡ್​ (ಎನ್​ಟಿಪಿಸಿ) ಇಂಜಿನಿಯರಿಂಗ್​ ಎಕ್ಸಿಕ್ಯೂಟಿವ್​ ಟ್ರೇನಿ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
    ಒಟ್ಟು ಹುದ್ದೆಗಳು: 50

    ಎನ್​ಟಿಪಿಸಿ ಲಿಮಿಟೆಡ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕೇವಲ ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶಾದ್ಯಂತ ಇರುವ ಯಾವುದೇ ಎನ್​ಟಿಪಿಸಿ ಟಕಕ್ಕೆ ನೇಮಕ ಮಾಡಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಗೇಟ್​ ಪರೀೆಯ ನೋಂದಣಿ ಸಂಖ್ಯೆ ನಮೂದಿಸಿ ಲಾಗಿನ್​ ಆಗಲು ತಿಳಿಸಲಾಗಿದೆ.

    ಹುದ್ದೆ ವಿವರ
    ಇಂಜಿನಿಯರಿಂಗ್​ ಎಕ್ಸಿಕ್ಯೂಟಿವ್​ ಟ್ರೇನಿಸ್​
    * ಎಲೆಕ್ಟ್ರಿಕಲ್​ & 22
    * ಮೆಕ್ಯಾನಿಕಲ್​ & 14
    * ಎಲೆಕ್ಟ್ರಾನಿಕ್ಸ್​/ ಇನ್​ಸ್ಟ್ರುಮೆಂಟೇಷನ್​ & 14

    ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​, ಇನ್​ಸ್ಟ್ರುಮೆಂಟೇಷನ್​ ಆ್ಯಂಡ್​ ಕಂಟ್ರೋಲ್​/ ಪವರ್​ ಸಿಸ್ಟಂ ಆ್ಯಂಡ್​ ಹೈ ವೋಲ್ಟೇಜ್​/ ಪವರ್​ ಎಲೆಕ್ಟ್ರಾನಿಕ್ಸ್​/ ಪವರ್​ ಇಂಜಿನಿಯರಿಂಗ್​, ಮೆಕ್ಯಾನಿಕಲ್​/ ಪ್ರೊಡಕ್ಷನ್​/ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​/ ಪ್ರೊಡಕ್ಷನ್​ ಆ್ಯಂಡ್​ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​/ ಥರ್ಮಲ್​/ ಮೆಕ್ಯಾನಿಕಲ್​ ಆ್ಯಂಡ್​ ಆಟೋಮೇಷನ್​, ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಪವರ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.65 ಅಂಕ (ಮೀಸಲಾತಿ ಅಭ್ಯರ್ಥಿಗಳು ಶೇ.55) ಪಡೆದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಾಂಕಕ್ಕೆ ಅನುಗುಣವಾಗಿ ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ವೇತನ: ಮಾಸಿಕ 40,000&1,40,000 ರೂ. ವೇತನ ಇದ್ದು, ಡಿಎ, ಪ್ರಯಾಣ ಭತ್ಯೆ, ರ್ಟಮಿನಲ್​ ಸೌಲಭ್ಯ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಗೇಟ್​&2021ರ ಪರೀೆಯಲ್ಲಿನ ಅಂಕಗಳನ್ನು ಆಧರಿಸಿ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳ ಶಾರ್ಟ್​ಲಿಸ್ಟ್​ ಸಿದ್ಧಪಡಿಸಲಾಗುತ್ತದೆ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 27 ಸ್ಥಾನ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ 11, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 4, ಎಸ್ಸಿಗೆ 5, ಎಸ್ಟಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಭದ್ರತಾ ಬಾಂಡ್​: ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ ಆಯ್ಕೆಯಾದ ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಅಭ್ಯರ್ಥಿಗಳು 5 ಲಕ್ಷ ರೂ. ಹಾಗೂ ಎಸ್ಸಿ, ಎಸ್​ಟಿ, ಅಂಗವಿಲಕ ಅಭ್ಯರ್ಥಿಗಳು 2,50,000 ರೂ. ವಿಮೆಯನ್ನು ಸರ್ವಿಸ್​ ಅಗ್ರೀಮೆಂಟ್​ ಬಾಂಡ್​ ಹೆಸರಲ್ಲಿ ಇಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 6.5.2021 
    ಅಧಿಸೂಚನೆಗೆ: https://bit.ly/3geQqbf
    ಮಾಹಿತಿಗೆ: http://www.ntpccareers.net

    ವಿವಿಧ ಪದವೀಧರರಿಗೆ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಆಹ್ವಾನ: ₹70 ಸಾವಿರದವರೆಗೂ ವೇತನ

    ಮಹಾನಗರ ಪಾಲಿಕೆಗಳಲ್ಲಿ 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಹಿಳೆಯರಿಂದ 34 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts