ಗೋರಖ್ಪುರ: ತನ್ನ ಮೂರು ತಿಂಗಳ ಮಗುವನ್ನು ಯಾರೋ ಅಪಹರಣ ಮಾಡಿರುವುದಾಗಿ ದೂರಿ ಇಲ್ಲಿಯ ಮಹಿಳೆಯೊಬ್ಬರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ರಸೂಲ್‌ಪುರ ಪ್ರದೇಶದ ಮದುವೆ ಮಂಟಪವೊಂದರ ಬಳಿ ಹೋಗುವಾಗ ಮಗನನ್ನು ತನ್ನಿಂದ ಕಸಿದುಕೊಂಡು ಕೆಂಪು ಸೀರೆ ಧರಿಸಿದ ಮಹಿಳೆ ಪರಾರಿಯಾಗಿದ್ದಾಳೆ ಎಂದು ಪೊಲೀಸರ ಮುಂದೆ ಸಲ್ಮಾ ಖತೂನ್ ಬಿಕ್ಕಿಬಿಕ್ಕಿ ಅತ್ತಳು.

ಈ ಅಮ್ಮನ ನೋವನ್ನು ನೋಡಿದ ಪೊಲೀಸ್ ತಂಡ ಕೂಡಲೇ ಕಾರ್ಯ ಪ್ರವೃತ್ತರಾಗಿ ಎಲ್ಲೆಡೆ ಹುಡುಕಾಟ ನಡೆಸಿದೆ. ನಂತರ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಅಸಲಿಯತ್ತು ಏನು ಎಂದು ಅರಿತ ಪೊಲೀಸರೇ ಸುಸ್ತಾಗಿ ಹೋದರು. ಇದಕ್ಕೆ ಕಾರಣ, ಸಿಸಿಟಿಯಲ್ಲಿ ಈ ಮಹಿಳೆಯೇ ತನ್ನ ಮಗುವನ್ನು ಬೇರೊಂದು ಮಹಿಳೆಗೆ ನೀಡುತ್ತಿರುವುದು ದಾಖಲಾಗಿತ್ತು.
ನಂತರ ಈ ಬಗ್ಗೆ ಸಂದೇಹಗೊಂಡ ಪೊಲೀಸರು ಮಹಿಳೆಗೆ ಪರಿಪರಿಯಾದ ರೀತಿಯಲ್ಲಿ ವಿಚಾರಣೆ ಮಾಡಿದಾಗ ಮಹಿಳೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತನ್ನ ಗಂಡ ಕುಡುಕನಾಗಿದ್ದು, ಸಂಸಾರ ನಡೆಸುವುದು ಕಷ್ಟವಾಗಿತ್ತು. ಅದಕ್ಕಾಗಿ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದಾಗಿ ಆಕೆ ಹೇಳಿದ್ದಾಳೆ. ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
VIDEO: ಮದುವೆ ಡ್ರೆಸ್ನಲ್ಲಿ ಅಜ್ಜಿ ಮಿಂಚಿಂಗ್- 70 ವರ್ಷಗಳ ನಂತರ ಈಡೇರಿತು ಆಸೆ: ಕಣ್ಣೀರಾದ ವೃದ್ಧೆ
ಫೋಟೋದಲ್ಲಿದ್ದ ಚಿನ್ನದ ಸರವೇ ಮಹಿಳೆ ಪ್ರಾಣ ಕಸಿದುಕೊಂಡಿತು! ಭೀಕರ ಪ್ರಕರಣವನ್ನು ಭೇದಿಸಿದ ಪೊಲೀಸರು