More

    ಸೂಪರ್ ಸಿಎಂ ಟ್ಯಾಗ್‌ನಿಂದ ಹೊರಬಂದೆ- ಟೀಕಾಕಾರರಿಗೆ ತಿರುಗೇಟು ನೀಡಿದ ವಿಜಯೇಂದ್ರ

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದತ್ಯಾಗ ಮಾಡಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ ನಿಂದ ಹೊರ ಬಂದಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ಬಿಎಸ್ ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಕಾರರಿಗೆ ತಿರುಗೇಟು ನೀಡಿದರು.

    ರಾಜಭವನದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ನಾಯಕರ ಸಲಹೆ-ಸೂಚನೆ, ಶಾಸಕಾಂಗ ಪಕ್ಷದ ವಿಶ್ವಾಸ ಗಳಿಸಿ ಬಸವರಾಜ ಬೊಮ್ಮಾಯಿ‌ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ ಎಂದು ವಿಶ್ಲೇಷಣೆ ಸರಿಯಲ್ಲ ಎಂದರು.

    ಯುವಜನತೆಗೆ ಹೆಚ್ಚಿನ ಆದ್ಯತೆ: ಸಚಿವ ಸಂಪುಟದಲ್ಲಿ ಯುವ ಜನತೆಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ. ಪಕ್ಷದ ರಾಜ್ಯ, ಕೇಂದ್ರ ನಾಯಕರ ಮುಂದಿಡುವ ನನ್ನ ಅಪೇಕ್ಷೆಯಿದಾಗಿದೆ. ಸರ್ಕಾರ ಹಾಗೂ ಪಕ್ಷದಲ್ಲಿ ನನಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಕೇಂದ್ರ ಮತ್ತು ರಾಜ್ಯ ನಾಯಕರು ನಿರ್ಧರಿಸುತ್ತಾರೆ. ಈ ವಿಚಾರದಲ್ಲಿ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ವಿಜಯೇಂದ್ರ ನಸುನಕ್ಕು ಮುಂದಿನ ಪ್ರಶ್ನೆಗೆ ಕಿವಿಯಾದರು.

    ಊಹಾಪೋಹ ಬೇಡ: ಬೊಮ್ಮಾಯಿ‌ ಅವರು ಯಡಿಯೂರಪ್ಪನವರ ಛಾಯಾ ಸಿಎಂ ಎನ್ನುವುದೆಲ್ಲ ಊಹಾಪೋಹ. ದಯವಿಟ್ಟು ಇಂತಹುದೆಲ್ಲ ಕೇಳಬೇಡಿ, ಈ ರೀತಿಯ ವದಂತಿಗಳಿಗೆ ಯಾರೂ ಮಹತ್ವ ನೀಡಬಾರದು ಎಂದು ಮನವಿ ಮಾಡಿದರು.

    ಗೌರವ ನೀಡುವ ವಿಶ್ವಾಸ: ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ 17 ವಲಸಿಗರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳುತ್ತದೆ. ಅವರು ಯಡಿಯೂರಪ್ಪನವರನ್ನು ಮಾತ್ರವಲ್ಲ, ಬಿಜೆಪಿಯನ್ನು ನಂಬಿ ಬಂದಿದ್ದಾರೆ ಎಂದು ವಿಜಯೇಂದ್ರ‌ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts