More

    LIVE: ಟ್ರಾಫಿಕ್​ ಕಿರಿಕಿರಿ ‘ಜಯಿಸಿ’ ಕೊನೆಗೂ ಸಿದ್ದರಾಮೋತ್ಸವ ವೇದಿಕೆಗೆ ಬಂದ ರಾಹುಲ್: ಬೆಳ್ಳಿ ಬುದ್ಧ ಗಿಫ್ಟ್​

    ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಿಂದಾಗಿ ಇದು ಹಿಂದೆಂದೂ ರೀತಿಯಲ್ಲಿ ಆಗದಂಥ ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕಿಮೀ ಜಾಮ್ ಆಗಿದೆ. ನಿಂತ ಜಾಗದಲ್ಲೇ ವಾಹನಗಳು ನಿಂತಿದ್ದು, ಸವಾರರು ಪರದಾಡುವಂತಾಗಿತ್ತು.

    ಈ ಟ್ರಾಫಿಕ್​ ಕಿರಿಕಿರಿಯಿಂದ ಖುದ್ದು ಸಂಸದ ರಾಹುಲ್​ ಗಾಂಧಿಯವರು ಬಳಲುವಂತಾಗಿತ್ತು. ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೆ, ದಾವಣಗೆರೆ ನಗರದ ಮಧ್ಯಭಾಗ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜ್ಯದ ವಿವಿಧ ಭಾಗದಿಂದ ಕಾರ್ಯಕ್ರಮಕ್ಕೆ ಬರುತ್ತಿರುವ ವಾಹನಗಳು ದಾವಣಗೆರೆ ನಗರದ ಮೂಲಕ ಆಗಮಿಸಿದ್ದರಿಂದ ಹಾಗೂ ನಗರದ ಹೋಟೆಲ್‌ಗಳಲ್ಲಿ ಉಳಿದಿದ್ದವರು ಒಂದೇ ಸಮಯಕ್ಕೆ ಕಾರ್ಯಕ್ರಮಕ್ಕೆ ಹೊರಟಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್​ ಜಾಮ್​ನಿಂದ ದಾವಣಗೆರೆಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಇದರ ಬಿಸಿ ರಾಹುಲ್​ ಗಾಂಧಿಯವರಿಗೂ ತಟ್ಟಿತು.

    ಇವೆಲ್ಲವನ್ನೂ ಮೀರಿ ಕೊನೆಗೂ ಸಂಸದ ರಾಹುಲ್​ ಗಾಂಧಿ ವೇದಿಕೆಗೆ ಆಗಮಿಸಿದ್ದಾರೆ. ನಿಗದಿತ ಅವಧಿಗಿಂತ ಟ್ರಾಫಿಕ್​ ಸಮಸ್ಯೆಯಿಂದಾಗಿ ವೇದಿಕೆಗೆ ಬರುವುದು ತುಸು ಹೆಚ್ಚೇ ವಿಳಂಬವಾದರೂ ಅಭಿಮಾನಿಗಳು ಜೈಜೈಕಾರ ಹಾಕಿ ಅವರನ್ನು ಬರಮಾಡಿಕೊಂಡಿದ್ದಾರೆ. ಜತೆಗೆ ರಾಹುಲ್​ ಗಾಂಧಿಯವರಿಗೆ ಕಾಂಗ್ರೆಸ್​ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದರು. ಬುದ್ಧನ ಬೆಳ್ಳಿ ಪ್ರತಿಮೆಯನ್ನು ನೀಡಿ ರಾಹುಲ್​ ಗಾಂಧಿಯವರನ್ನು ಬರಮಾಡಿಕೊಂಡರು. ರಾಹುಲ್ ಆಗಮಿಸಿದ್ದಂತೆ ಅವರ ಅಭಿಮಾನಿಗಳು ಮುತ್ತುವರಿದ ಹಿನ್ನೆಲೆಯಲ್ಲಿ, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಬೇಕಾಯಿತು.

    ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಕುರಿತಾದ ಪುಸ್ತಕದ ಬಿಡುಗಡೆ ಸಮಾರಂಭವೂ ನಡೆಯುತ್ತಿದೆ.
    ಸಿದ್ದರಾಮೋತ್ಸವದ ನೇರ ಪ್ರಸಾರವನ್ನು ಇಲ್ಲಿ ನೋಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts