ಗ್ರ್ಯಾಂಡ್ಚೌಟೆ (ಅಮೆರಿಕ): ಮಾಲ್ ಒಳಗೆ ಬಂದೂಕು ಸಹಿತ ನುಗ್ಗಿದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಭಯಾನಕ ಘಟನೆ ಉತ್ತರ ವಿಸ್ಕಾನ್‌ಸಿನ್ ನಗರದ ಮಾಲ್‌ವೊಂದರಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ಮಾಲ್ ಒಳಗೆ ಇರುವ ಗ್ರಾಹಕನೊಬ್ಬ ಮೃತಪಟ್ಟಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗ್ರ್ಯಾಂಡ್ಚೌಟೆ ಎನ್ನುವ ಸ್ಥಳದಲ್ಲಿ ಫಾಕ್ಸ್ ರಿವರ್ ಎಂಬ ಮಾಲ್ ಇದೆ. ಈ ಮಾಲ್ಗೆ ಸಂಜೆ ನುಗ್ಗಿದ ಬಂದೂಕುಧಾರಿ ಈ ಕೃತ್ಯ ಎಸಗಿದ್ದಾನೆ, ಗುಂಡು ಹಾರಿಸುತ್ತಿದ್ದಂತೆಯೇ ಮಾಲ್ಗೆ ಬಂದಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಿ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ’ ಎಂದು ಪೊಲೀಸ್ ಅಧಿಕಾರಿ ಟ್ರಾವಿಸ್ ವಾಸ್ ಅವರು ತಿಳಿಸಿದರು.
ಇದು ವಿಸ್ಕಾನ್‌ಸಿನ್‌ನಲ್ಲಿ ನಡೆದ ಎರಡನೇ ಮಾಲ್ ದಾಳಿಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೂಡ ಮಾಲ್‌ವೊಂದರಲ್ಲಿ ದಾಳಿ ನಡೆಸಲಾಗಿತ್ತು. ಇದರಲ್ಲಿ 8 ಮಂದಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್ ಗಾಂಧಿ…
ತಾಯಿಯ ಹೆಸರಿಗೆ ತಂದೆ ಆಸ್ತಿ ತೆಗೆಸಿಕೊಟ್ಟರು; ಈಗ ಬೇರೆ ಇದ್ದಾರೆ- ಆಸ್ತಿಯಲ್ಲಿ ತಂದೆಗೆ ಪಾಲು ಸಿಗತ್ತಾ?
ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…