ತಾಲಿಬಾನಿಗಳ ಹಾದಿಯಲ್ಲಿ ಪಾಕಿಸ್ತಾನ- ಹೆಣ್ಣುಮಕ್ಕಳಿಗೆ ಶುರುವಾಯ್ತು ನಿಷೇಧಗಳ ಹೇರಿಕೆ…

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಆಕ್ರಮಿಸುತ್ತಿದ್ದಂತೆಯೇ ಮಹಿಳೆಯರ ಮೇಲೆ ಇನ್ನಿಲ್ಲದ ಹೇರಿಕೆ, ಅತ್ಯಂತ ಕ್ರೂರ ಎನಿಸುವಂಥ ಷರತ್ತುಗಳನ್ನು ವಿಧಿಸಿರುವುದು ಈಗ ಜಗಜ್ಜಾಹೀರವಾಗಿದೆ. ಜತೆಗೆ ತಾಲಿಬಾನಿಗಳು ಪುರುಷರಿಗೂ ಕೆಲವೊಂದು ಷರತ್ತು ವಿಧಿಸಿದ್ದಾರೆ. ಇದರ ಬೆನ್ನಲ್ಲೇ ತಾಲಿಬಾನಿಗಳ ಹಾದಿಯನ್ನು ಪಾಕಿಸ್ತಾನ ತುಳಿಯಲು ಶುರು ಮಾಡಿದ್ದು, ಹೇರಿಕೆಗಳಿಗೆ ಮುನ್ನುಡಿ ಬರೆಯುತ್ತಿದೆ. ಪಾಕಿಸ್ತಾನದ ಫೆಡರಲ್ ಆಫ್‌ ಎಜುಕೇಶನ್ (ಎಫ್‍ಡಿಇ) ಮಹಿಳಾ ಅಧ್ಯಾಪಕರು ಜೀನ್ಸ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸದಂತೆ ಆದೇಶ ಹೊರಡಿಸಿದೆ. ಈ ರೀತಿ ಬಟ್ಟೆ ತೊಟ್ಟು ಬಂದ ಶಿಕ್ಷಕರನ್ನು ನಿಷೇಧಿಸಲಾಗುವುದು ಎಂದು ಹೇಳಿದೆ. … Continue reading ತಾಲಿಬಾನಿಗಳ ಹಾದಿಯಲ್ಲಿ ಪಾಕಿಸ್ತಾನ- ಹೆಣ್ಣುಮಕ್ಕಳಿಗೆ ಶುರುವಾಯ್ತು ನಿಷೇಧಗಳ ಹೇರಿಕೆ…