ಮಂಡ್ಯ: ಕೋಟಿ ಕೋಟಿ ಹಣ ವಂಚಿಸಿ ಸಿಕ್ಕಿಬಿದ್ದಿರುವ ಯುವರಾಜ್ನಿಂದ ಪೇಚಿಗೆ ಸಿಲುಕಿರುವ ನಟಿ ರಾಧಿಕಾ ಕುಮಾರಸ್ವಾಮಿ ಮೇಲೀಗ ಸಿಸಿಬಿ ಕತ್ತಿ ನೇತಾಡುತ್ತಿದೆ. ವಂಚನಕ ಖಾತೆಯಿಂದ ರಾಧಿಕಾ ಅವರಿಗೆ ಕೋಟಿಗಟ್ಟಲೆ ಹಣ ವರ್ಗಾವಣೆ ಆಗಿರುವ ಹಿಂದಿನ ಉದ್ದೇಶವನ್ನು ಸಿಸಿಬಿ ಪೊಲೀಸರು ಕೆದಕುತ್ತಿದ್ದಾರೆ. ಇದರಿಂದಾಗಿ ನಟಿ ಇದೀಗ ಭಾರಿ ಆತಂಕದ ದಿನಗಳನ್ನು ನೋಡುವಂತಾಗಿದೆ.
ಇದರ ಬೆನ್ನಲ್ಲೇ ಮಂಡ್ಯದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗೆ ಏನೂ ಆಗದಿರಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ.
ರಾಧಿಕಾರ ಕುಮಾರಸ್ವಾಮಿ ಅವರನ್ನು ಎಲ್ಲಾ ಆರೋಪಗಳಿಂದ ಬಂಧಮುಕ್ತ ಮಾಡುವಂತೆ ಕೋರಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಸದಸ್ಯರು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಂಕಷ್ಟದಲ್ಲಿರುವ ತಮ್ಮ ನಟಿಯನ್ನು ಶೀಘ್ರದಲ್ಲಿ ದೋಷಮುಕ್ತಗೊಳಿಸುವಂತೆ ವೆಂಕಟೇಶ್ ಎನ್ನುವ ಅಭಿಮಾನಿಯೊಬ್ಬರು ಉರುಳು ಸೇವೆ ಕೂಡ ಮಾಡಿದ್ದಾರೆ.
ನಂತರ ಪತ್ರಕರ್ತರ ಜತೆ ಮಾತನಾಡಿರುವ ವೆಂಕಟೇಶ್, ನಟಿ ರಾಧಿಕಾ ಅವರು ಕನ್ನಡ ಚಿತ್ರರಂಗಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಕನ್ನಡದ ಸೇವೆ ಮಾಡುತ್ತಿದ್ದಾರೆ. ಇಂಥವರ ಮೇಲೆ ವೃಥಾ ಆರೋಪ ಹೊರಿಸಿರುವುದು ನಮಗೆಲ್ಲಾ ತುಂಬಾ ಬೇಸರ ತಂದಿದೆ. ಆದ್ದರಿಂದ ಅವರನ್ನು ಆರೋಪಮುಕ್ತಗೊಳಿಸಲು ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಉರುಳು ಸೇವೆಯನ್ನೂ ಮಾಡಿದ್ದೇನೆ ಎಂದಿದ್ದಾರೆ.
ಕರೊನಾದ ಸಂಕಷ್ಟದ ದಿನಗಳಲ್ಲಿ ಬಡವರ ಪರ ನಿಂತು, ಆಹಾರದ ಕಿಟ್, ಆರೋಗ್ಯಸೇವೆಗಳನ್ನು ಮಾಡಿರುವ ಇಂಥ ನಟಿಯ ವಿರುದ್ಧ ಸುಳ್ಳು ಆರೋಪ ಬಂದಿದೆ ಎಂದು ಅವರು ಹೇಳಿದ್ದಾರೆ.
ನೆನಪಿರಲಿ, ಹುಡುಗರೂ ಸೇಫ್ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್ರೇಪ್!
ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್ ಮಾಡ್ಲಿ?