ಮಂಗಳೂರು: ರಾಜ್ಯದ ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ದಿಗ್ಗಜ ಗಾಯಕ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರ ಕಂಠಸಿರಿಯಲ್ಲಿ ಪಂಚಭಾಷಾ ಗೀತೆಗಳ ಸಂಗೀತ ಸಂಜೆಯನ್ನು ಮಂಗಳೂರಿನಲ್ಲಿ ಇದೇ ಭಾನುವಾರ ಹಮ್ಮಿಕೊಳ್ಳಲಾಗಿದೆ.
ದಿನಾಂಕ 19-1-2020ರ ಭಾನುವಾರ ಸಂಜೆ 6.30ರಿಂದ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಗ್ರೌಂಡ್ಸ್ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ಅರ್ಪಿಸುವ ಅಮೃತನೋನಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳಲ್ಲೂ ಹಾಡಿಗೆ ಧ್ವನಿಗೂಡಿಸಿ, ಮೋಡಿ ಮಾಡಿರುವ ಸಂಗೀತ ಲೋಕದ ಮಾಂತ್ರಿಕ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಅವರು ತಮ್ಮ ಮಧುರ ಕಂಠದಿಂದ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ.
ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ಈ ಕಾರ್ಯಕ್ರಮವನ್ನು ಕೋತಾಸ್ ಕಾಫಿ ಹಾಗೂ ಎಂಟಿಆರ್ ಗೊಜ್ಜು ಮ್ಯಾಜಿಕ್ ಮಸಾಲಾ ಅವರಿಂದ ಆಯೋಜಿಸಲ್ಪಟ್ಟಿದೆ. ನಂದಿನಿ ಅಸೋಸಿಯೇಟ್ ಸ್ಪಾನ್ಸರ್ ಆಗಿದ್ದು, ಸ್ವಾಮಿ ಎಂಟರ್ಪ್ರೈಸಸ್ ಅವರಿಂದ ಈವೆಂಟ್ ತಯಾರಿ ನಡೆದಿದೆ. ಕಾರ್ಯಕ್ರಮಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗವಿದೆ.
ಪಾಸ್ಗಳಿಗಾಗಿ ಸಂಪರ್ಕಿಸಿ
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು 9900331622 ನಬರ್ಗೆ ಕರೆ ಮಾಡಿ ಪಾಸ್ಗಳನ್ನು ಪಡೆದುಕೊಳ್ಳಬಹುದಾಗಿದೆ.