ಎಸ್​ಪಿಬಿ ಸಂಗೀತ ರಸಸಂಜೆ ಇಂದು

ಬೆಂಗಳೂರು: ಹಿರಿಯ ಬಹುಭಾಷಾ ಗಾಯಕ, ಪದ್ಮಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಾರ್ಯಕ್ರಮ ‘ಎಸ್​ಪಿಬಿ ಲೈವ್’ ಶನಿವಾರ (ಜು. 21) ಸಂಜೆ 6 ಗಂಟೆಗೆ ರಾಜಾಜಿನಗರದ ಬ್ರಿಗೇಡ್ ಗೇಟ್​ವೇನ ಒರಾಯನ್ ಮಾಲ್​ನ ಲೇಕ್ ಸೈಡ್​ನಲ್ಲಿ ನಡೆಯಲಿದೆ.

ಮಲ್ಹೋತ್ ಮೆಲೊಡೀಸ್ ಮತ್ತು ಸೆನ್ಸಸ್ ಕ್ರಿಯೇಷನ್ಸ್ ಸಂಸ್ಥೆ, ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್​ಪಿಬಿ ಕಂಠದಲ್ಲಿ ಮೂಡಿಬಂದ ಜನಪ್ರಿಯ ಗೀತೆಗಳನ್ನು ಆಸ್ವಾದಿಸುವ ಅವಕಾಶ ಇದಾಗಿದ್ದು, ವಿಜಯವಾಣಿ ಓದುಗರು ಮತ್ತು ದಿಗ್ವಿಜಯ ನ್ಯೂಸ್ ವೀಕ್ಷಕರಿಗಾಗಿ ಪ್ರತಿನಿತ್ಯ ಐವರು ಅದೃಷ್ಟಶಾಲಿಗಳಿಗೆ ಪಾಸ್ ಗೆಲ್ಲುವ ಅವಕಾಶ ಒದಗಿಸಲಾಗಿತ್ತು.

ಟಿಕೆಟ್​ಗಾಗಿ ಸಂರ್ಪರ್ಕಿಸಿ

ಟಿಕೆಟ್ ದರ ಒಂದು ಸಾವಿರ ರೂ.ನಿಂದ ಎರಡು ಸಾವಿರ ರೂ.ವರೆಗೆ ನಿಗದಿಪಡಿಸಲಾಗಿದ್ದು, ಸಂಗೀತ ಪ್ರೇಮಿಗಳು www.eventshigh.com ನಲ್ಲಿ ಟಿಕೆಟ್ ಕಾಯ್ದಿರಿಸಬಹುದು. ವಿವರಕ್ಕೆ ದೂರವಾಣಿ ಸಂಖ್ಯೆ 95388 23231, 96633 19191 ಸಂರ್ಪಸಬಹುದು.