ಬೆಂಗಳೂರು: ಕರೊನಾ ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯವರ ಶಿಫಾರಸಿನ ಮೇಲೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಮಾರ್ಗಸೂಚಿಯನ್ನು ಜಾರಿ ಮಾಡಲಾಗಿದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಮಾರ್ಗಸೂಚಿ ಸಡಿಲಿಸುವ ಆಲೋಚನೆ ಇಲ್ಲ ಎಂದು ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ ಅನಿವಾರ್ಯ:
ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆ ಅನಿವಾರ್ಯ. ಅಲ್ಲದೆ, ವೈಜ್ಞಾನಿಕ ವರದಿ ಆಧಾರದ ಮೇಲೆ ಕ್ರಮ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಕೊಂಡರು. ಕೋವಿಡ್ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಬೇರೆ ದಾರಿ ಇಲ್ಲ. ಕರೊನಾ ಎರಡನೇ ಅಲೆ ಹೊಸ್ತಿಲಲ್ಲಿದ್ದೇವೆ ಹಾಗಾಗಿ ನಿಯಂತ್ರಣ ಕ್ರಮ ಅತ್ಯವಶ್ಯ ಎಂದರು.
ವೀಕೆಂಡ್ ಲಾಕ್ ಡೌನ್ ಇಲ್ಲ:
ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದರು. ಕೋವಿಡ್ ೨ನೇ ಅಲೆ ಬಗ್ಗೆ ಜನರು ಸಾಕಷ್ಟು ಎಚ್ಚರದಿಂದಿರಬೇಕು. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂ ನಿನ್ನೆ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ವಿನಂತಿಸಿದರು.
ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ:
ಜಾತ್ರೆ, ಧಾರ್ಮಿಕ ಆಚರಣೆಗಳಿಗೂ ಕಡಿವಾಣ ಹಾಕಲಾಗಿದೆ. ಈ ವಿಚಾರದಲ್ಲಿ ಜನರ ಆರೋಗ್ಯದ ಬಗ್ಗೆ ಯೋಚಿಸಬೇಕೇ ಹೊರತು ರಾಜಕೀಯ ಬೆರೆಸುವ ಅವಶ್ಯಕತೆ ಇಲ್ಲ ಎಂದು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ಪ್ರತಿಯೊಬ್ಬರೂ ಸೋಂಕು ತಡೆಗಟ್ಟಲು ಗುಂಪು ಸೇರುವುದನ್ನು ನಿಲ್ಲಿಸಬೇಕು., ಮಾಸ್ಕ್ ಬಳಸುವುದರ ಜತೆಗಗೆ 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಿ ಎಂದು ಸುಧಾಕರ್ ಸಲಹೆ ಮಾಡಿದರು.
ಸೋಂಕಿತರ ಸಂಖ್ಯೆ ಹೆಚ್ಚಳ:
ಈಗ ಪ್ರತಿನಿತ್ಯ ಐದು ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರಿನಲ್ಲೇ ಮೂರು ಸಾವಿರ ಪ್ರಕರಣಗಳು ದಾಖಲಾಗಿವೆ. ಮೊದಲ ಅಲೆ ತೀವ್ರಗೊಂಡಾಗ ಒಟ್ಟಾರೆ ೪೫೦೦ ಪ್ರಕರಣ ಇದ್ದವು. ಈಗ ೫ ಸಾವಿರಕ್ಕೆ ಏರಿಕೆಯಾಗಿದೆ. ೨ನೇ ಅಲೆ ಅಪ್ಪಳಿಸುವುದನ್ಮು ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಇರಲಿದೆ ಎಂಬ ಹೇಳಿದೆ. ಈಗ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದಾಗ ಎಲ್ಲವನ್ನೂ ಅನ್‍ಲಾಕ್ ಮಾಡಿದ್ದೆವು. ಸಿನಿಮಾಕ್ಕೆ ನೂರರಷ್ಟು ವಿನಾಯಿತಿ ನೀಡಬೇಕೆಂಬ ನಟ ಪುನೀತ್ ಮನವಿ ಕುರಿತು,, ನಮಗೆ ವಲಯವಾರು ಎಲ್ಲರ ಬಗ್ಗೆ ಗೌರವ, ಅಭಿಮಾನವೂ ಇದೆ. ಶಾಲೆ, ಜಿಮ್, ಸ್ವಿಮ್ಮಿಂಗ್ ಪೂಲ್ ಮದುವೆ, ಅಪಾರ್ಟ್‍ಮೆಂಟ್ ಎಲ್ಲವೂ ತೆಗೆದರೆ ಏನು ಪ್ರಯೋಜನ? ಎಂದು ಕೇಳಿದರು.
ಚುನಾವಣೆಗೂ ಮಾರ್ಗಸೂಚಿ:
ಚುನಾವಣೆಗೂ ಮಾರ್ಗಸೂಚಿ ಅನ್ವಯವಾಗಲಿದೆ. ಚುನಾವಣಾ ಆಯೋಗದಿಂದ ಮಾರ್ಗಸೂಚಿ ನೀಡಲಾಗಿದೆ ಎಂದು ಹೇಳಿದರು. ಸರ್ಕಾರ ಕೋವಿಡ್ ಮಾರ್ಗಸೂಚಿ ಪಾಲನೆಯಲ್ಲಿ ಗಂಭೀರವಾದ ಕ್ರಮ ಕೈಗೊಂಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್ಗೆ ಹುಷಾರ್ ತಪ್ಪಿತಾ?
‘ಆ ದಿನ’ ಮೂರ್ನಾಲ್ಕು ಆ್ಯಂಗಲ್ಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಆಗಿದ್ಯಲ್ಲಾ? ಯಾರು ಮಾಡಿದ್ರು?
VIDEO: ಮಾಸ್ಕ್ ಇಲ್ಲ… ಅಂತರವೂ ಇಲ್ಲ… ಎಸಿ ರೂಂನಲ್ಲಿ 500 ಮಂದಿ! ಸಾಮಾನ್ಯರಿಗೆ ಮಾತ್ರ ರೂಲ್ಸಾ?
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ನಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ