More

    VIDEO: ಮತ್ತೆ ಒಂದಾದ ಹಾಲಿ, ಮಾಜಿ ಸಿಎಂಗಳು: ಇದೇ ಖುಷಿಯಲ್ಲಿ ನಿತೀಶ್​-ಲಾಲೂ ಹಾಡಿರೋ ಈ ಹಾಡು ಕೇಳಿ…

    ಪಟ್ನಾ: ಬಿಹಾರದ ರಾಜಕೀಯ ಕುತೂಹಲದ ತಿರುವು ಪಡೆದುಕೊಂಡಿದೆ. ಎರಡನೆಯ ಬಾರಿ ನಿತೀಶ್​ ಕುಮಾರ್​ ಅವರು ಬಿಜೆಪಿ ಜತೆಗಿನ ಮೈತ್ರಿ ತೊರೆದು ತಮ್ಮ ಹಳೆಯ ದೋಸ್ತಿಯಾಗಿರುವ ಆರ್​ಜೆಡಿ ಕೈಹಿಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಇದೀಗ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ 8ನೇ ಬಾರಿ ಸಿಎಂ ಹುದ್ದೆಗೆ ಏರಿದ್ದಾರೆ.

    ಈ ಮೂಲಕ ಹೊಸ ಸರ್ಕಾರ ರಚಿಸಲು ಈ ಹಿಂದೆ ವೈರಿ ಎಂದೇ ಹೇಳಿದ್ದ ತಮ್ಮ ಹಳೆಯ ಸ್ನೇಹಿತ ಲಾಲೂ ಪ್ರಸಾದ್ ಯಾದವ್ ಅವರ ಪಕ್ಷದ ಜತೆ ಮತ್ತೆ ಒಂದಾಗಿದ್ದಾರೆ. 2014ರಲ್ಲಿ ನಿತೀಶ್​ ಕುಮಾರ್​ ಸಿಎಂ ಆಗಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪರಾಭವಗೊಂಡಿತು. ಈ ಸೋಲಿನ ಹೊಣೆಯನ್ನು ಹೊತ್ತುಕೊಂಡ ನಿತೀಶ್​ಕುಮಾರ್​ ರಾಜೀನಾಮೆ ನೀಡಿದರು. ಆದರೆ 2015ರಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಬೆಂಬಲದ ಮಹಾಘಟಬಂಧನದಲ್ಲಿ 4ನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರಿದ್ದರು. 2017ರಲ್ಲಿ ಮಹಾಘಟಬಂಧನ ಸರ್ಕಾರಕ್ಕೆ ರಾಜೀನಾಮೆ ನೀಡಿ ಮರುದಿನವೇ ಬಿಜೆಪಿ ಬೆಂಬಲದೊಂದಿಗೆ ಪುನಃ ಸಿಎಂ ಆಗಿದ್ದರು.

    ಆದರೆ ಇದೀಗ ಬಿಜೆಪಿ ಜತೆಗಿನ ಮೈತ್ರಿ ಮುರಿದು ಪುನಃ ಲಾಲೂ ಪ್ರಸಾದ್​ ಯಾದವ್​ ಅವರ ಪಕ್ಷ ಆರ್​ಜೆಸಿ ಸೇರಿ ಮತ್ತೆ ಸ್ನೇಹ ಮಾಡಿರುವುದರಿಂದ ಲಾಲೂ ಪ್ರಸಾದ್​ ಯಾದವ್​ ಮತ್ತು ನಿತೀಶ್​ ಕುಮಾರ್​ ಅವರ ಹಳೆಯ (2020ರ) ವಿಡಿಯೋ ಒಂದು ಪುನಃ ವೈರಲ್​ ಆಗುತ್ತಿದೆ. ಹಳೆಯ ಮೀಮ್‌ ಒಂದು ಈಗ ಮತ್ತೆ ಚಾಲ್ತಿಗೆ ಬಂದಿದೆ.

    1951ರಲ್ಲಿ ಬಿಡುಗಡೆಯಾದ ಅಲ್ಬೆಲಾ ಚಿತ್ರದ ‘ಕಿಸ್ಮತ್ ಕಿ ಹವಾ’ ಹಾಡಿನ ಹಿನ್ನೆಲೆಯಲ್ಲಿ ಈ ಮೀಮ್​ ಮಾಡಲಾಗಿದೆ. ಹಾಡಿನ ಸಾಹಿತ್ಯಕ್ಕೆ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಲಿಂಪ್‌ ಸಿಂಕ್ ಮಾಡಲಾಗಿದೆ. ಅನಿಮೇಷನ್ ಬಳಸಿ ಲಿಪ್‌ಸಿಂಕ್ ಮಾಡಲಾಗಿದೆ. ಅದೃಷ್ಟದ ಗಾಳಿಯು ಕೆಲವೊಮ್ಮೆ ಸೌಮ್ಯವಾಗಿರುತ್ತದೆ ಮತ್ತು ಕೆಲವೊಮ್ಮೆ ಕಠಿಣವಾಗಿರುತ್ತದೆ ಎನ್ನುವ ಅರ್ಥ ಬರುವ ಹಾಡನ್ನು ಸಿ. ರಾಮಚಂದ್ರ ಅವರು ಹಾಡಿದ್ದಾರೆ.

    ಈ ವಿಡಿಯೋಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿದ್ದು, ಹಲವರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ (ಏಜೆನ್ಸೀಸ್​)

    ನೀವೂ ನೋಡಿ ಈ ಮೀಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts