ಮೊಮ್ಮಕ್ಕಳಾದ ಕಾಲಕ್ಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ- ಈ ಇಳಿವಯಸ್ಸಲ್ಲಿ ಎಲ್ಲಿ ಹೋಗಲಿ?

ಮೊಮ್ಮಕ್ಕಳಾದ ಕಾಲಕ್ಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ- ಈ ಇಳಿವಯಸ್ಸಲ್ಲಿ ಎಲ್ಲಿ ಹೋಗಲಿ?ನಾನು ಐವತ್ತಾರುವರ್ಷದ ಮಹಿಳೆ. ನನ್ನ ಗಂಡನಿಗೆ 63ವರ್ಷ ವಯಸ್ಸು. ಮದುವೆಯಾಗಿ 33ವರ್ಷಗಳಾದವು. ಮೂರು ಮಕ್ಕಳಿದ್ದಾರೆ. ಮಗಳಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಮಗನಿಗೂ ಮದುವೆಯಾಗಿ ಒಂದು ಮಗುವಿದೆ. ಕೊನೆಯಮಗ ಐ.ಎ .ಎಸ್ ತಯಾರಿಯಲ್ಲಿದ್ದಾನೆ. ನನ್ನ ಗಂಡನಿಗೆ ಮದುವೆಗೆ ಮೊದಲಿನಿಂದಲೂ ಹೆಂಗಸರ ಸಹವಾಸವಿತ್ತು. ಮದುವೆಯ ನಂತರ ತಿಳಿದರೂ ಸಹಿಸಿಕೊಂಡು ಅವರೊಂದಿಗೆ ಜೀವನ ಮಾಡಿ ಮೂರು ಮಕ್ಕಳನ್ನು ಪಡೆದು, ಅವರೆಲ್ಲರ ಬದುಕು ಒಂದು ದಡ ಮುಟ್ಟುವಂತೆ ನೋಡಿಕೊಂಡೆ. ಇಷ್ಟು ವರ್ಷದ ಬದುಕಿನಲ್ಲಿ ನನಗೆ ಗಂಡನಿಂದ ಸಿಕ್ಕಿದ್ದು ಬರಿ ಕಣ್ಣೀರು ಮತ್ತು ಏಟುಗಳೇ. ಈಗ ಇನ್ನಿಬ್ಬರು ವೇಶ್ಯೆಯರು ಮತ್ತು ವಿಧವೆಯೊಬ್ಬಳ ಸಹವಾಸ ಮಾಡಿ ಒಂದು ವರ್ಷದಿಂದ ಮನೆ ಬಿಟ್ಟು ಹೋಗಿದ್ದಾರೆ. ನಾನಾಗಲಿ ನನ್ನ ಮಕ್ಕಳಾಗಲಿ ಅವರಿಗೆ ಬೇಕಾಗಿಲ್ಲ.

ಇಂಥ ಇವರ ಕೃತ್ಯಕ್ಕೆ ಅವರ ಅಣ್ಣತಮ್ಮಂದಿರು, ಅಕ್ಕತಂಗಿಯರು ಸಂಪೂರ್ಣ ಸಹಕಾರ ಬೇರೆ ಕೊಡುತ್ತಾರೆ. ಅವನು ಗಂಡಸು ಏನಾದರೂ ಮಾಡಿಕೊಳ್ಳಲಿ ಬಿಡು, ಯಾರ ಸಹವಾಸ ಮಾಡಿಕೊಳ್ಳಲಿ ಬಿಡು ಎಂದು ನನಗೆ ಬುದ್ಧಿ ಹೇಳುತ್ತಾರೆ. ಈಗ ನಾನು ಒಂಟಿಯಾಗಿದ್ದೇನೆ. ನನ್ನ ಮುಂದೆ ಹಲವು ಪ್ರಶ್ನೆಗಳು ಬಂದು ಕಾಡುತ್ತವೆ.

1. ಇಂಥವರ ಜೊತೆ ನಾನು ಇನ್ನು ಮುಂದೆಯೂ ಜೀವನ ನಡೆಸ ಬೇಕೇ?
2. 33 ವರ್ಷ ಸಂಸಾರ ಮಾಡಿದ್ದಕ್ಕೆ ಅರ್ಥವೇ ಇಲ್ಲವೇ?
3. ಇನ್ನು ಮುಂದೆ ನನ್ನ ಜೀವನ ಏಕಾಂಗಿಯಾಗಿಯೇ ಸಾಗಬೇಕೇ?
4. ಮುಂದೆ ಸಂಸಾರದಲ್ಲಿ (ಅಂದರೆ ಮಗ ಸೊಸೆ ಜೊತೆಗಿನ) ಏರುಪೇರಾದರೆ ನನ್ನ ಗತಿಯೇನು? ಈ ಚಿಂತೆಯಲ್ಲಿ ನಾನು ಬಸವಳಿದು ಹೋಗಿದ್ದೇನೆ. ಏನು ಮಾಡಲಿ?

ಉತ್ತರ: ನಿಮ್ಮ ಗಂಡನ `ಹೆಣ್ಣುಬಾಕತನ’ ಒಂದು ರೀತಿಯ ಮಾನಸಿಕ ದೌರ್ಬಲ್ಯ. 33ವರ್ಷಗಳ ನಿಮ್ಮ ದಾಂಪತ್ಯದಲ್ಲಿ ನಿಮಗೆ ಏಡ್ಸ್, ಎಚ್.ಐ.ವಿ ಮುಂತಾದ ಲೈಂಗಿಕ ರೋಗಗಳನ್ನು ದಯಪಾಲಿಸದೆ ನಿಮ್ಮಿಂದ ದೂರಾಗಿದ್ದಾರಲ್ಲ! ಅದಕ್ಕಾಗಿ ದೇವರಿಗೆ ವಂದಿಸಿ. ನೀವೀಗಾಗಲೇ ಜೀವನದ ಅರ್ಧದಾರಿಯನ್ನು ಕ್ರಮಿಸಿಬಿಟ್ಟಿದ್ದೀರಿ.

ಇನ್ನು ಉಳಿದ ದಾರಿಯನ್ನು ಮಕ್ಕಳು ಮೊಮ್ಮಕ್ಕಳ ಜೊತೆಗೆ ಕ್ರಮಿಸಿದರಾಯಿತಲ್ಲ? ನಿಜ ನಿಮ್ಮ ಭಯ ಸಹಜವಾದದ್ದೇ. ನಿಮ್ಮ ಮಗ ಸೊಸೆ ನಿಮ್ಮನ್ನು ಕಡೆಗಣಿಸಿದರೆ ಅನ್ನುವುದು ಬರಿ ನಿಮ್ಮ ಊಹೆ ಆಗಿರಬಹುದು. ಇದುವರೆವಿಗೂ ನಿಮ್ಮ ಕಷ್ಟಗಳನ್ನು ಮಕ್ಕಳು ಕಂಡೇ ಇದ್ದಾರೆ. ಅವರಿಗೂ ನಿಮ್ಮ ಬಗ್ಗೆ ಅನುಕಂಪವಿದ್ದೇ ಇರುತ್ತದೆ. ಬರಿ ನಕಾರಾತ್ಮಕವಾದದ್ದನ್ನೇ ಯಾಕೆ ಯೋಚಿಸುತ್ತೀರಿ?

ನಿಮ್ಮ ಇಬ್ಬರು ಗಂಡುಮಕ್ಕಳು ನಿಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದಲ್ಲ? ಇನ್ನು ನಿಮ್ಮ ಗಂಡ ವಾಪಸ್ ಬಂದರೆ ಮಾತ್ರ ಅವರೊಂದಿಗೆ ನೀವು ದಾಂಪತ್ಯ ಜೀವನವನ್ನು ಖಂಡಿತಾ ನಡೆಸಬೇಡಿ. ಯಾಕೆಂದರೆ ನಿಮ್ಮ ಆರೋಗ್ಯವೂ ಕೊನೆತನಕ ಚೆನ್ನಾಗಿರಬೇಕಲ್ಲ?

ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

ಪತ್ನಿ ಸರಿಯಿಲ್ಲ ಎಂದು ಕಣ್ಣೀರುಹಾಕಿ ಸಂಬಂಧ ಬೆಳೆಸಿದ- ಎಲ್ಲವನ್ನೂ ಒಪ್ಪಿಸಿ ಮೋಸ ಹೋದೆ ಮೇಡಂ…

ಯಾರನ್ನೋ ಇಷ್ಟಪಟ್ಟವರು ನನ್ನ ಮದ್ವೆಯಾದ್ರು- ಆದ್ರೆ ಈಗ… ಈ ಸಂದೇಹ ಹೇಗೆ ಪರಿಹರಿಸಿಕೊಳ್ಳಲಿ?

ನಿನ್ನನ್ನೇ ಪ್ರೀತಿಸ್ತೇನೆ ಅಂದಾಕೆ ಈಗ ಆ ಭಾವನೆಯೇ ಬರ್ತಿಲ್ಲ ಅಂತಿದ್ದಾಳೆ- ಬದುಕೇ ಬೇಡವೆನಿಸಿದೆ.. ದಾರಿ ತೋರಿ..

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…