‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

'ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ... ಏನು ಬೇಕಾದ್ರೂ ಮಾಡ್ಬೋದು...'ನಾನು ಐವತ್ತಾರುವರ್ಷದ ಮಹಿಳೆ. ನನ್ನ ಗಂಡನಿಗೆ 63ವರ್ಷ ವಯಸ್ಸು. ಮದುವೆಯಾಗಿ 33ವರ್ಷಗಳಾದವು. ಮೂರು ಮಕ್ಕಳಿದ್ದಾರೆ. ಮಗಳಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಮಗನಿಗೂ ಮದುವೆಯಾಗಿ ಒಂದು ಮಗುವಿದೆ. ಕೊನೆಯಮಗ ಐ.ಎ .ಎಸ್ ತಯಾರಿಯಲ್ಲಿದ್ದಾನೆ. ನನ್ನ ಗಂಡನಿಗೆ ಮದುವೆಗೆ ಮೊದಲಿನಿಂದಲೂ ಹೆಂಗಸರ ಸಹವಾಸವಿತ್ತು. ಮದುವೆಯ ನಂತರ ತಿಳಿದರೂ ಸಹಿಸಿಕೊಂಡು ಅವರೊಂದಿಗೆ ಜೀವನ ಮಾಡಿ ಮೂರು ಮಕ್ಕಳನ್ನು ಪಡೆದು, ಅವರೆಲ್ಲರ ಬದುಕು ಒಂದು ದಡ ಮುಟ್ಟುವಂತೆ ನೋಡಿಕೊಂಡೆ. ಇಷ್ಟು ವರ್ಷದ ಬದುಕಿನಲ್ಲಿ ನನಗೆ ಗಂಡನಿಂದ ಸಿಕ್ಕಿದ್ದು ಬರಿ ಕಣ್ಣೀರು ಮತ್ತು ಏಟುಗಳೇ. ಈಗ ಇನ್ನಿಬ್ಬರು ವೇಶ್ಯೆಯರು ಮತ್ತು ವಿಧವೆಯೊಬ್ಬಳ ಸಹವಾಸ ಮಾಡಿ ಒಂದು ವರ್ಷದಿಂದ ಮನೆ ಬಿಟ್ಟು ಹೋಗಿದ್ದಾರೆ. ನಾನಾಗಲಿ ನನ್ನ ಮಕ್ಕಳಾಗಲಿ ಅವರಿಗೆ ಬೇಕಾಗಿಲ್ಲ.
ಇಂಥ ಇವರ ಕೃತ್ಯಕ್ಕೆ ಅವರ ಅಣ್ಣತಮ್ಮಂದಿರು, ಅಕ್ಕತಂಗಿಯರು ಸಂಪೂರ್ಣ ಸಹಕಾರ ಬೇರೆ ಕೊಡುತ್ತಾರೆ. ಅವನು ಗಂಡಸು ಏನಾದರೂ ಮಾಡಿಕೊಳ್ಳಲಿ ಬಿಡು, ಯಾರ ಸಹವಾಸ ಮಾಡಿಕೊಳ್ಳಲಿ ಬಿಡು ಎಂದು ನನಗೆ ಬುದ್ಧಿ ಹೇಳುತ್ತಾರೆ. ಈಗ ನಾನು ಒಂಟಿಯಾಗಿದ್ದೇನೆ. ನನ್ನ ಮುಂದೆ ಹಲವು ಪ್ರಶ್ನೆಗಳು ಬಂದು ಕಾಡುತ್ತವೆ.

1. ಇಂಥವರ ಜೊತೆ ನಾನು ಇನ್ನು ಮುಂದೆಯೂ ಜೀವನ ನಡೆಸ ಬೇಕೇ?
2. 33ವರ್ಷ ಸಂಸಾರ ಮಾಡಿದ್ದಕ್ಕೆ ಅರ್ಥವೇ ಇಲ್ಲವೇ?
3. ಇನ್ನು ಮುಂದೆ ನನ್ನ ಜೀವನ ಏಕಾಂಗಿಯಾಗಿಯೇ ಸಾಗಬೇಕೇ?
4. ಮುಂದೆ ಸಂಸಾರದಲ್ಲಿ (ಅಂದರೆ ಮಗ ಸೊಸೆ ಜೊತೆಗಿನ) ಏರುಪೇರಾದರೆ ನನ್ನ ಗತಿಯೇನು? ಈ ಚಿಂತೆಯಲ್ಲಿ ನಾನು ಬಸವಳಿದು ಹೋಗಿದ್ದೇನೆ. ಏನು ಮಾಡಲಿ?

ಉತ್ತರ: ನಿಮ್ಮ ಗಂಡನ `ಹೆಣ್ಣುಬಾಕತನ’ ಒಂದು ರೀತಿಯ ಮಾನಸಿಕ ದೌರ್ಬಲ್ಯ. 33ವರ್ಷಗಳ ನಿಮ್ಮ ದಾಂಪತ್ಯದಲ್ಲಿ ನಿಮಗೆ ಏಡ್ಸ್, ಎಚ್.ಐ.ವಿ ಮುಂತಾದ ಲೈಂಗಿಕ ರೋಗಗಳನ್ನು ದಯಪಾಲಿಸದೆ ನಿಮ್ಮಿಂದ ದೂರಾಗಿದ್ದಾರಲ್ಲ! ಅದಕ್ಕಾಗಿ ದೇವರಿಗೆ ವಂದಿಸಿ. ನೀವೀಗಾಗಲೇ ಜೀವನದ ಅರ್ಧದಾರಿಯನ್ನು ಕ್ರಮಿಸಿಬಿಟ್ಟಿದ್ದೀರಿ.

ಇನ್ನು ಉಳಿದ ದಾರಿಯನ್ನು ಮಕ್ಕಳು ಮೊಮ್ಮಕ್ಕಳ ಜೊತೆಗೆ ಕ್ರಮಿಸಿದರಾಯಿತಲ್ಲ? ನಿಜ ನಿಮ್ಮ ಭಯ ಸಹಜವಾದದ್ದೇ. ನಿಮ್ಮ ಮಗ ಸೊಸೆ ನಿಮ್ಮನ್ನು ಕಡೆಗಣಿಸಿದರೆ ಅನ್ನುವುದು ಬರಿ ನಿಮ್ಮ ಊಹೆ ಆಗಿರಬಹುದು. ಇದುವರೆವಿಗೂ ನಿಮ್ಮ ಕಷ್ಟಗಳನ್ನು ಮಕ್ಕಳು ಕಂಡೇ ಇದ್ದಾರೆ. ಅವರಿಗೂ ನಿಮ್ಮ ಬಗ್ಗೆ ಅನುಕಂಪವಿದ್ದೇ ಇರುತ್ತದೆ. ಬರಿ ನಕಾರಾತ್ಮಕವಾದದ್ದನ್ನೇ ಯಾಕೆ ಯೋಚಿಸುತ್ತೀರಿ?

ನಿಮ್ಮ ಇಬ್ಬರು ಗಂಡುಮಕ್ಕಳು ನಿಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದಲ್ಲ? ಇನ್ನು ನಿಮ್ಮ ಗಂಡ ವಾಪಸ್ ಬಂದರೆ ಮಾತ್ರ ಅವರೊಂದಿಗೆ ನೀವು ದಾಂಪತ್ಯ ಜೀವನವನ್ನು ಖಂಡಿತಾ ನಡೆಸಬೇಡಿ. ಯಾಕೆಂದರೆ ನಿಮ್ಮ ಆರೋಗ್ಯವೂ ಕೊನೆತನಕ ಚೆನ್ನಾಗಿರಬೇಕಲ್ಲ?

ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?

ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?

ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…