ಮೈಸೂರು: ಮಗ ಕಣ್ಣೆದುರೇ ಕೊಲೆಯಾದರೂ ನ್ಯಾಯಕ್ಕಾಗಿ ಅಲೆದಾಡುವಂತಾಗಿರುವ ಮೈಸೂರಿನ ಕುಟುಂಬವೊಂದು ‘ಸಾವಿಗೆ ನ್ಯಾಯ ಕೊಡಿಸಿ ಇಲ್ಲವೆ ದಯಾಮರಣ ನೀಡಿ’ ಎಂದು ಗೋಳಾಡುತ್ತಿವೆ. ಇಡೀ ಕುಟುಂಬ ದಯಾಮರಣಕ್ಕೆ ಕೋರಿಕೊಂಡಿದೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಚೋಳಮ್ಮ ಕುಟುಂಬ ಇದಾಗಿದೆ. ಸ್ವಾಮಿ ನಾಯಕ್ ಎಂಬ ಯುವಕ ಕಳೆದ ಫೆ.14ರ ಪ್ರೇಮಿಗಳ ದಿನದಂದೇ ಕೊಲೆಯಾಗಿದ್ದು, ಆತನ ಸಾವಿಗೆ ನ್ಯಾಯ ಸಿಗದುದಕ್ಕೆ ಆತನ ತಾಯಿ ಚೋಳಮ್ಮ ಹಾಗೂ ಕುಟುಂಬಸ್ಥರು ದಯಾಮರಣಕ್ಕೆ ಕೋರಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಮನವಿ ಸಲ್ಲಿಸಿದ್ದಾರೆ,
ಸ್ವಾಮಿ ಪಾಪಣ್ಣ ಎನ್ನುವವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಅವರ ಮಗಳನ್ನು ಪ್ರೀತಿಸಿದ್ದ. ಕೈ ಮೇಲೆ ಆಕೆಯ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದ. ಪ್ರೇಮಿಗಳ ದಿನಾಚರಣೆಯಂದು ತಾನು ಆಕೆಯನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಎಂದು ತೋರಿಸಲು ಹಚ್ಚೆ ಹಾಕಿಸಿಕೊಂಡಿದ್ದ.
ಈ ಹಚ್ಚೆಯ ನಂತರ ಪಾಪಣ್ಣ ಕುಟುಂಬ ಹಾಗೂ ಸ್ವಾಮಿ ಕುಟುಂಬದ ಮಧ್ಯೆ ಜಗಳ ನಡೆದಿತ್ತು. ಸ್ವಾಮಿ ಕುಟುಂಬದವರಿಗೆ ಬೀದಿಯಲ್ಲೇ ದೊಣ್ಣೆಯಿಂದ ಹಲ್ಲೆ ಮಾಡಿದ್ದರು ಪಾಪಣ್ಣ ಕುಟುಂಬಸ್ಥರು. ಮನೆಯಲ್ಲಿದ್ದ ಸ್ವಾಮಿಯನ್ನು ಎಳೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಸ್ವಾಮಿ ಮೃತಪಟ್ಟಿದ್ದ.
ಪಾಪಣ್ಣನವರ ಸಹೋದರ ಶಿವಣ್ಣ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ಶವದ ಮರಣೋತ್ತರ ಪರೀಕ್ಷೆ ನಡೆಸಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ. ಇದೀಗ ಮಗನನ್ನು ಕಳೆದುಕೊಂಡ ಸ್ವಾಮಿ ತಾಯಿ ಚೋಳಮ್ಮ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಇಲ್ಲವೆ ದಯಾಮರಣ ನೀಡಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಬೈಕರ್ ರಾಜಸ್ಥಾನದಲ್ಲಿ ಸಾವು: ಕೇಸ್ ಕ್ಲೋಸ್ ಎನ್ನುವಷ್ಟರಲ್ಲೇ ಪತ್ನಿಯತ್ತ ಬೊಟ್ಟು ಮಾಡಿದ ಹೆಲ್ಮೆಟ್!
15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?
ಲವರ್ ಜತೆಗೂಡಿ ತಮ್ಮನನ್ನೇ ಕೊಲೆ ಮಾಡಿ ಶವದ ಮುಂದೆ ಗೋಳೋ ಎಂದು ಅತ್ತ ಹುಬ್ಬಳ್ಳಿ ಹೆಣ್ಣು!
ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ