ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ

blank
blank

ಮೈಸೂರು: ಮೂರು ವರ್ಷಗಳ ಹಿಂದೆ ಮೈಸೂರಿನ ವಸಂತನಗರದ ನಾಟಿ ವೈದ್ಯ (ಮೂಲವ್ಯಾಧಿ ತಜ್ಞ) ಶಾಬಾ ಷರೀಫ್‌ ಎನ್ನುವವರ ಬರ್ಬರ ಕೊಲೆ ರಹಸ್ಯ ಇದೀಗ ಪೊಲೀಸರು ಬಯಲು ಮಾಡಿದ್ದಾರೆ. ಕೋಟ್ಯಧಿಪತಿಯಾಗಿದ್ದ ಆರೋಪಿ ತನ್ನ ಮನೆಗೆ ಆಗಿರುವ ದರೋಡೆ ಕೇಸ್‌ ದಾಖಲಿಸಲು ಬಂದು ಖುದ್ದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ವೈದ್ಯರ ಕೊಲೆ ಮಾಡಿದವರ ಸುಳಿವಿಗಾಗಿ ಶ್ರಮಿಸುತ್ತಿದ್ದ ಪೊಲೀಸರ ಬಲೆಗೆ ತಾನಾಗಿಯೇ ಬಂದು ಸಿಲುಕಿದ್ದಾನೆ ಈ ಕೊಲೆ ಪಾತಕಿ ಶೈಬೀ ಅಶ್ರಫ್ ಹಾಗೂ ಈತನ ಸಹಚರರು.

ಏನಿದು ಘಟನೆ?
ಶಾಬಾ ಷರೀಫ್ ನಾಟಿ ವೈದ್ಯರಾಗಿ ಹಲವಾರು ಜೀವಗಳನ್ನು ಉಳಿಸಿದವರು. ನೆರೆಯ ಕೇರಳದಿಂದಲೂ ಹಲವಾರು ಮಂದಿ ಇಲ್ಲಿಗೆ ಬಂದು ಔಷಧ ಪಡೆದುಕೊಂಡು ಹೋಗುತ್ತಿದ್ದರು. ಆದರೆ ಪ್ರಾಣ ಉಳಿಸುವ ಈ ಕಾಯಕವೇ ಅವರ ಪ್ರಾಣ ತೆಗೆದಿದ್ದು ಮಾತ್ರ ಶೋಚನೀಯ.

ಈ ಔಷಧದ ರಹಸ್ಯ ತಿಳಿದುಕೊಂಡು ವಿದೇಶಗಳಲ್ಲಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಹಣ ಮಾಡುವ ಯೋಚನೆ ಈ ಖದೀಮರಿಗೆ ಬಂದಿದೆ. 2019ರ ಆಗಸ್ಟ್‌ನಲ್ಲಿ ಇಬ್ಬರು ಕೇರಳ ಮೂಲದ ಯುವಕರು ಶಾಬಾ ಷರೀಫ್ ಅವರನ್ನು ಭೇಟಿಯಾಗಿ ಮೂಲವ್ಯಾಧಿಗೆ ಚಿಕಿತ್ಸೆ ಕೊಡಬೇಕಿದೆ ಎಂದು ನೆಪ ಮಾಡಿಕೊಂಡು ವೈದ್ಯರನ್ನು ಅಪಹರಿಸಿಕೊಂಡು ಹೋಗಿದ್ದರು. ಕೇರಳದಲ್ಲಿ ನೀಲಂಬೂರಿಗೆ ಕರೆದೊಯ್ದು ಬಳಿಕ ಅವರನ್ನು ಆರೋಪಿ ತನ್ನ ಮನೆಯಲ್ಲಿ ಕೂಡ ಹಾಕಿ ಫಾರ್ಮುಲಾ ನೀಡುವಂತೆ ಕೇಳಿರುತ್ತಾನೆ. ಆದರೆ ವೈದ್ಯ ಶಾಬಾ ಅದನ್ನು ಒಪ್ಪಿರುವುದಿಲ್ಲ. ಒಂದು ವರ್ಷ ಹೀಗೆ ಸರಪಳಿಯಿಂದ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟ ಬಳಿಕ ಶಾಬಾ ಅವರು 2020ರಲ್ಲಿ ಮೃತಪಟ್ಟಿರುತ್ತಾರೆ.

ನಂತರ ಆರೋಪಿಗಳು ಶಾಬಾ ಷರೀಫ್ ದೇಹವನ್ನು ಮಚ್ಚಿನಿಂದ ತುಂಡು, ತುಂಡು ಮಾಡಿ ಚೀಲದಲ್ಲಿ ತುಂಬಿಕೊಂಡು ಕೇರಳದ ನದಿಯೊಂದರಲ್ಲಿ ಬಿಸಾಡುತ್ತಾರೆ. ಇತ್ತ ವೈದ್ಯರು ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಾಗ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. ಆದರೆ ವೈದ್ಯರ ಯಾವುದೇ ಸುಳಿವು ಸಿಕ್ಕಿರುವುದಿಲ್ಲ.

ಮೈಸೂರಿನ ನಾಟಿ ವೈದ್ಯನ ಬರ್ಬರ ಕೊಲೆ ರಹಸ್ಯ ಬಯಲು! ದರೋಡೆ ಕೇಸ್ ದಾಖಲಿಸಲು ಬಂದು ಸಿಕ್ಕಿಬಿದ್ದ ಕೊಲೆಗಾರ

ದರೋಡೆಯಿಂದ ಕೇಸ್‌ ಬೆಳಕಿಗೆ:
ಆರೋಪಿಗಳಲ್ಲಿ ಪ್ರಮುಖನಾದ ಶೈಬೀ ಅಶ್ರಫ್ (ಈ ಚಿತ್ರದಲ್ಲಿ ಇರುವಾತ) ಮನೆಯಲ್ಲಿ ದರೋಡೆಯಾಗಿತ್ತು. ಲಾರಿ ಚಾಲಕನಾಗಿದ್ದ ಈತನ ಮನೆಯಿಂದ ಏಳು ಲಕ್ಷ ರೂಪಾಯಿ ದರೋಡೆಯಾಗಿತ್ತು. ಇದರ ಕೇಸ್‌ ಅವನು ದಾಖಲು ಮಾಡಿದ್ದ. ಇದರ ಬೆನ್ನತ್ತಿ ಹೋದಾಗ ಪೊಲೀಸರಿಗೆ ವೈದ್ಯರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ದರೋಡೆ ಪ್ರಕರಣ ಭೇದಿಸಲು ಹೋದಾಗ ಲಾರಿ ಚಾಲಕ 350 ಕೋಟಿ ರೂಪಾಯಿ ಒಡೆಯನಾಗಿದ್ದು ಪೊಲೀಸರನ್ನು ಅನುಮಾನಕ್ಕೆ ತಳ್ಳಿದೆ. ವಯನಾಡ್ ಮೂಲದ ಆರೋಪಿ ಶೈಬಿನ್ ಅಶ್ರಫ್ ಮನೆಯ ದರೋಡೆ ಪ್ರಕರಣ ಕೆದಕಿದಾಗ ತಿಳಿದದ್ದು ಏನೆಂದರೆ, ಈತ ವೈದ್ಯರ ಕೊಲೆ ಮಾಡಲು ಕೆಲವರನ್ನು ತನ್ನೊಟ್ಟಿಗೆ ಸೇರಿಸಿಕೊಂಡಿದ್ದ. ಆದರೆ ಕೊಲೆ ಬಳಿಕ ಅವರಿಗೆ ಹಣ ನೀಡಿರಲಿಲ್ಲ. ಇದರಿಂದ ರೊಚ್ಚಿಗೆದ್ದಿದ್ದ ಆತನ ಸಹಚರರು ಇವನ ಮನೆಗೆ ಕನ್ನ ಹಾಕಿ ಹಣ ದರೋಡೆ ಮಾಡಿದ್ದರು.

ಇನ್ನೂ ತನಿಖೆ ಮುಂದುವರೆದಿದೆ. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮತ್ತೋರ್ವ ನಟಿಯ ನಿಗೂಢ ಸಾವು- ಇನ್‌ಸ್ಟಾದಲ್ಲಿ ಖುಷಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ನೇಣು! ಬಾಯ್‌ಫ್ರೆಂಡ್‌ ಜತೆ ಆದದ್ದೇನು?

ಮದುವೆ ಖುಷಿಯಲ್ಲಿದ್ದ ತುಮಕೂರು ಪ್ರೇಮಿಗಳ ಬಾಳಲ್ಲಿ ಜವರಾಯನ ಅಟ್ಟಹಾಸ: ಅಲ್ಲಿ ಅಪಘಾತ, ಇಲ್ಲಿ ಆತ್ಮಹತ್ಯೆ!

ಆಕಾಶದಿಂದ ಧರೆಗುರುಳಿದ ಭಾರಿ ಗಾತ್ರದ ಚೆಂಡುಗಳು: ಬೆಚ್ಚಿಬಿದ್ದ ಜನ, ವಿಜ್ಞಾನಿಗಳಿಂದ ಪರಿಶೀಲನೆ

Share This Article

ಪೈಲ್ಸ್​ ಇರುವವರು ಈ ಆಹಾರಗಳನ್ನು ಬಿಟ್ಟುಬಿಡಿ! ಸಮಸ್ಯೆಯಿಂದ ಹೊರಬರಲು ಇಲ್ಲಿವೆ ಉಪಯುಕ್ತ ಸಲಹೆ | Piles

Piles: ಮೂಲವ್ಯಾಧಿ ಅಥವಾ ಪೈಲ್ಸ್​ ಸಮಸ್ಯೆ ಬಹುಜನರಲ್ಲಿ ಕಾಡುವ ತೀರ ಸಾಮಾನ್ಯ ರೋಗ. ಅದರಲ್ಲೂ ಇಂದಿನ…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ! ಯಾವ ಆರೋಗ್ಯ ಸಮಸ್ಯೆನೂ ಬರಲ್ಲ.. curry leaves water

ಬೆಂಗಳೂರು: ( curry leaves water )  ನೀವು ಕೂಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು…