ಲಖನೌ: ದೇಶದಲ್ಲಿ ಕರೊನಾ ನಡುವೆಯೇ ಇದೀಗ ಹಕ್ಕಿಜ್ವರದ ಭೀತಿ ಶುರುವಾಗಿದೆ. ಎಲ್ಲೆಂದರಲ್ಲಿ ಕಾಗೆ, ಕೋಳಿ, ಬಾತುಕೋಳಿ ಸೇರಿದಂತೆ ಹಲವಾರು ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಇದಾಗಲೇ ಕೆಲವು ರಾಜ್ಯಗಳಲ್ಲಿ ಸತ್ತಿರುವ ಪಕ್ಷಿಗಳಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ಜ್ವರದ ಭೀತಿ ಎದುರಾಗಿದೆ. ಲಕ್ಷಾಂತರ ಕೋಳಿಗಳ ಮಾರಣಹೋಮವೂ ನಡೆದಿದೆ.
ಸದ್ಯ ಭಾರತದಲ್ಲಿ ಕೇರಳ , ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ಇಂಥ ಆತಂಕದ ಸ್ಥಿತಿಯ ನಡುವೆ ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್ ಮಾಡಿರುವ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
https://twitter.com/IPSinghSp/status/1347429231442030592
ಅಷ್ಟಕ್ಕೂ ಸಿಂಗ್ ಅವರು ಹೇಳಿರುವುದು ಏನೆಂದರೆ, ಪ್ರಧಾನಿ ನರೇಂದ್ರ ಮೋದಿಯವರೇ ಹಕ್ಕಿಜ್ವರ ಈ ಪರಿಯಲ್ಲಿ ಹರಡಲು ಕಾರಣ. ಅವರು ಹಿಂದೊಮ್ಮೆ ನವಿಲಿಗೆ ಕಾಳು ಹಾಕಿದ್ದರು. ಅದರಿಂದಲೇ ಹಕ್ಕಿಜ್ವರ ಶುರುವಾಗಿದ್ದು ಎಂದಿದ್ದಾರೆ!
ಪ್ರಧಾನಿ ಮೋದಿ ಹಕ್ಕಿಗಳಿಗೆ ಕಾಳು ನೀಡಿದ ಬಳಿಕವೇ ದೇಶದಲ್ಲಿ ಹಕ್ಕಿ ಜ್ವರ ಶುರುವಾಗಿದೆ ಎಂದಿರುವ ಅವರು, ಟ್ವಿಟರ್ನಲ್ಲಿ ನವಿಲಿಗೆ ಪ್ರಧಾನಿ ಮೋದಿ ಕಾಳು ನೀಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮನುಷ್ಯನಿಗೆ ಏನು ಮಾಡೋದು..? ಇವರು ಆ ಬಡಪಾಯಿ ಹಕ್ಕಿಗಳಿಗೆ ಕಾಳು ಹಾಕಿದ್ರು. ಈಗ ಅವು ಹಕ್ಕಿ ಜ್ವರದಿಂದ ಬಳಲುವಂತಾಗಿದೆ ಎಂದು ತಮ್ಮ ಟ್ವೀಟ್ಗೆ ಶೀರ್ಷಿಕೆ ನೀಡಿದ್ದಾರೆ.
ಕೋಳಿಗಳಲ್ಲಿ ಕಂಡುಬಂತು ಪಾಸಿಟಿವ್: ಮಾಂಸದಂಗಡಿ ಮುಚ್ಚಲು ಆದೇಶಿಸಿದ ಮಧ್ಯಪ್ರದೇಶ ಸರ್ಕಾರ
4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ
ಮುಂಬೈ ದಾಳಿ ರೂವಾರಿ ಲಖ್ವಿಗೆ 15 ವರ್ಷ ಜೈಲುಶಿಕ್ಷೆ ನೀಡಿದ ಪಾಕ್ ಕೋರ್ಟ್
VIDEO: ಅಮೆರಿಕ ಹಿಂಸಾಚಾರದ ವೇಳೆ ಟ್ರಂಪ್ ಪುತ್ರ- ಪ್ರೇಯಸಿ ಏನು ಮಾಡುತ್ತಿದ್ದರು ನೋಡಿ…