ಬ್ಲೂಫಿಲ್ಮ್​ ವೀಕ್ಷಣೆಗೆ ವೇದಿಕೆಯಾಗ್ತಿದೆ ಸದನ- ಸಭಾಪತಿಯಿಂದ ಹೊರಟಿತೊಂದು ಆದೇಶ

ಬೆಂಗಳೂರು: ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ರಾಜಕೀಯ ಮುಖಂಡರು ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡುತ್ತಾ ಸಿಕ್ಕಿಬಿದ್ದಿರುವ ಕೆಲವು ಘಟನೆಗಳು ಇದಾಗಲೇ ನಡೆದುಹೋಗಿವೆ. ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಇತ್ತ ಗುಟ್ಟುಗುಟ್ಟಾಗಿ ಮೊಬೈಲ್​ನಲ್ಲಿ ಇಂಥ ಚಿತ್ರ ವೀಕ್ಷಣೆ ಮಾಡಿ ಇದಾಗಲೇ ಕೆಲವರು ಸಿಕ್ಕಿಬಿದ್ದಿದ್ದಾರೆ.

ಈಚೆಗೆ ವಿಧಾನಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ್ದರು ಎನ್ನುವ ಆರೋಪವಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇಂಥದ್ದೊಂದು ಆದೇಶ ಹೊರಡಿಸಲಾಗಿದೆ.

ವಿಧಾನ ಪರಿಷತ್​​ನಲ್ಲಿ ಇನ್ಮುಂದೆ ಮೊಬೈಲ್ ಬಳಕೆ​ ನಿಷೇಧ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಅಶ್ಲೀಲ ಚಿತ್ರಗಳ ವೀಕ್ಷಣೆಗೆ ವಿಧಾನಮಂಡಲದ ಉಭಯ ಸದನಗಳು ವೇದಿಕೆ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಅವರು, ಇಂಥದ್ದೊಂದು ಆದೇಶ ಹೊರಡಿಸಿದ್ದಾರೆ.

ಯಾವುದಾದರೂ ಕಾರಣಕ್ಕೆ ಮೊಬೈಲ್​ ನೋಡಲೇಬೇಕು ಎಂದಾದರೆ ಸಭಾಪತಿಯ ಅನುಮತಿ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 03/06/2011 ರಲ್ಲಿ ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶವಾಗಿತ್ತು. ಆದರೆ ಸದನದೊಳಗೆ ಈಗಲೂ ಮೊಬೈಲ್‌ಗಳು ರಿಂಗಣಿಸುತ್ತಿದೆ. ಇದು ಕಡೆಯ ವಾರ್ನಿಂಗ್. ಇನ್ಮುಂದೆ ಸದನದೊಳಗೆ ಮೊಬೈಲ್ ತರುವಂತಿಲ್ಲ. ಒಂದು ವೇಳೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶಿಸಿದ್ದಾರೆ.

ಮೊಬೈಲ್ ತಂದರೆ, ಸ್ವಿಚ್ ಆಫ್ ಮಾಡಬೇಕು. ಮಾಹಿತಿಗಾಗಿ ಮೊಬೈಲ್ ತರುವುದಾದರೆ ಸಭಾಪತಿಗಳ ಅನುಮತಿ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೊಂದು ಮೀನಿನ ಆಸೆಗೆ ಒಂದನೆಯದ್ದನ್ನು ಬಾಯಲ್ಲಿಟ್ಟುಕೊಂಡ… ಮುಂದೇನಾಯ್ತು ಈ ವಿಡಿಯೋ ನೋಡಿ

ಮಾಲ್​ ಒಳಗೆ ನುಗ್ಗಿ ಗುಂಡಿನ ದಾಳಿ- ಓರ್ವ ಗ್ರಾಹಕನ ಸಾವು, ಕೆಲವರಿಗೆ ಗಂಭೀರ ಗಾಯ

ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್​ ಗಾಂಧಿ…

ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…