ಆರು ಮಂದಿಯ ಬಾಳಿಗೆ ಬೆಳಕಾಗಿ ಕಣ್ಮುಚ್ಚಿದ ಮಂಡ್ಯದ ಯುವಕ- ಅಂಗಾಂಗ ದಾನದಿಂದ ಸಾರ್ಥಕತೆ

ಮಂಡ್ಯ: ಅಪಘಾತದಲ್ಲಿ ಮೃತಪಟ್ಟ ಮಂಡ್ಯ ಜಿಲ್ಲೆ ಮಳವಳ್ಳಿಯ 19 ವರ್ಷದ ಯುವಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾನೆ. ಈತ ಸತ್ತ ಮೇಲೂ ಆರು ಮಂದಿಗೆ ಬೆಳಕಾಗಿ ಹೋಗಿದ್ದಾನೆ. ಇಂಥದ್ದೊಂದು ಅಮೂಲ್ಯ ಕಾರ್ಯ ಮಾಡಿದವನು ಶರತ್. ಅಪಘಾತದಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದು ತಲೆಗೆ‌ ಪೆಟ್ಟು ಬಿದ್ದಿತ್ತು. ಮಳವಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದರೆ 24ರ ಮಧ್ಯರಾತ್ರಿ 1.10 ಸುಮಾರಿಗೆ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಮೈಸೂರಿನ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. … Continue reading ಆರು ಮಂದಿಯ ಬಾಳಿಗೆ ಬೆಳಕಾಗಿ ಕಣ್ಮುಚ್ಚಿದ ಮಂಡ್ಯದ ಯುವಕ- ಅಂಗಾಂಗ ದಾನದಿಂದ ಸಾರ್ಥಕತೆ