ಮದ್ಯದ ದೊರೆಯ ವಿರುದ್ಧ ಲಂಡನ್​ನಲ್ಲಿ ನಡೀತಿದೆ ರಹಸ್ಯ ಕಾರ್ಯಾಚರಣೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ಲಂಡನ್​: ಲಂಡನ್​ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಇನ್ನೂ ವಿಳಂಬ ಆಗಲಿದೆ. ಲಂಡನ್​ನಲ್ಲಿ ಈ ಕುರಿತು ರಹಸ್ಯ ಕಾರ್ಯಾಚರಣೆ ನಡೆಯುತ್ತಿದ್ದು, ಇದರಿಂದ ಹಸ್ತಾಂತರ ಕಾರ್ಯ ಇನ್ನಷ್ಟು ವಿಳಂಬ ಆಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ಭಾರತಕ್ಕೆ ಪಂಗನಾಮ ಹಾಕಿ ಲಂಡನ್​ನಲ್ಲಿ ಅಡಗಿ ಕುಳಿತಿರುವ ವಿಜಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಕೋರಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು. ಇದಕ್ಕೆ ತಡೆ ನೀಡುವಂತೆ ಲಂಡನ್​ ಕೋರ್ಟ್​ಗೆ ಮಲ್ಯ ಹೋಗಿದ್ದರು. … Continue reading ಮದ್ಯದ ದೊರೆಯ ವಿರುದ್ಧ ಲಂಡನ್​ನಲ್ಲಿ ನಡೀತಿದೆ ರಹಸ್ಯ ಕಾರ್ಯಾಚರಣೆ: ಸುಪ್ರೀಂಗೆ ಕೇಂದ್ರದ ಮಾಹಿತಿ